Govt employees: ಸರಕಾರಿ ನೌಕರರಿಗೆ ಬಂಪರ್ ಸಿಹಿ ಸುದ್ದಿ! ಇನ್ನು ಇವರಿಗೆ ಲಭಿಸಲಿದೆ 2ವರ್ಷ ಹೆಚ್ಚುವರಿ ಪಾವತಿ ರಜೆ!
Government employees news good news to these employees now they gets 2 year paid leave for child care
Good News for Govt Employees: ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿಯೊಂದು(Good News for Govt Employees) ಹೊರಬಿದ್ದಿದೆ. ಕೇಂದ್ರ ಸರ್ಕಾರ (Central Government)ನೌಕರರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳುತ್ತದೆ. ಇದೀಗ, ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ರಜೆಯ ಕುರಿತಂತೆ ಬಿಗ್ ಗುಡ್ ನ್ಯೂಸ್ ನೀಡಿದೆ.
ಕೇಂದ್ರ ಸರ್ಕಾರ ಅಖಿಲ ಭಾರತ ಸೇವೆಯ (AIS) ಅರ್ಹ ನೌಕರರಿಗೆ ರಜಾದಿನಗಳ ಕುರಿತು ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಿದ್ದು, ಇದರಡಿ, ಈಗ ಈ ಉದ್ಯೋಗಿಗಳು ತಮ್ಮ ಸಂಪೂರ್ಣ ವೃತ್ತಿಜೀವನದಲ್ಲಿ ಎರಡು ವರ್ಷಗಳ ಸಂಬಳದ ರಜೆಯನ್ನು ಪಡೆದುಕೊಳ್ಳಲು ಅನುವು ಮಾಡಿಕೊಡಲಾಗಿದೆ. ಸರ್ಕಾರವು ಗರಿಷ್ಠ 2 ವರ್ಷಗಳವರೆಗೆ ಎರಡು ದೊಡ್ಡ ಮಕ್ಕಳ ಆರೈಕೆಯ(child care leave) ಸಲುವಾಗಿ ಈ ರಜೆಯ ಸೌಲಭ್ಯ ದೊರೆಯಲಿದೆ.
ಕ್ಯಾಲೆಂಡರ್ ವರ್ಷದಲ್ಲಿ ಸರ್ಕಾರವು(Government )ಮೂರು ರಜಾದಿನಗಳಿಗಿಂತ ಹೆಚ್ಚು ರಜೆ ನೀಡುವುದಿಲ್ಲವಂತೆ. ಮತ್ತೊಂದೆಡೆ, ಒಂಟಿ ಮಹಿಳೆಯ ಸಂದರ್ಭದಲ್ಲಿ, ಕ್ಯಾಲೆಂಡರ್ ವರ್ಷದಲ್ಲಿ 6 ಬಾರಿ ರಜೆಯನ್ನು ಅನುಮೋದನೆ ನೀಡಲಾಗುತ್ತದೆ. ಚಿಲ್ಡ್ರನ್ ಕೇರ್ ಲೀವ್ ಅಡಿಯಲ್ಲಿ ಐದು ದಿನಗಳಿಗಿಂತ ಕಡಿಮೆಯಿಲ್ಲದ ರಜೆ(Leave)ನೀಡಲಾಗುತ್ತದೆ.ಅಧಿಸೂಚನೆಯ ಅನುಸಾರ, ಮಕ್ಕಳ ರಜೆ (Children Leave)ಖಾತೆ ಇತರೆ ರಜೆಯ ಜೊತೆಗೆ ಸೇರಿಸಲಾಗುವುದಿಲ್ಲ. ಇದರ ಅಡಿಯಲ್ಲಿ, ಪ್ರತ್ಯೇಕ ಖಾತೆಯಿರುತ್ತದೆ. ಈ ರಜೆಗಳನ್ನು ಸದಸ್ಯರಿಗೆ ಪ್ರತ್ಯೇಕವಾಗಿ ನೀಡಲಾಗಲಿದ್ದು, ಮಕ್ಕಳ ರಜೆ ಆರೈಕೆಯ ಪ್ರಯೋಜನವನ್ನು ಮಕ್ಕಳ ಪರೀಕ್ಷಾ ಅವಧಿಯಲ್ಲಿ ನೀಡಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು.
ಅಖಿಲ ಭಾರತ ಸೇವೆಗಳ (AIS) ಒಬ್ಬ ಮಹಿಳೆ ಇಲ್ಲವೇ ಪುರುಷ ಸದಸ್ಯರಿಗೆ ಇಬ್ಬರು ಹಿರಿಯ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಸಂಪೂರ್ಣ ಸೇವೆಯ ಅವಧಿಯಲ್ಲಿ 730 ದಿನಗಳ ರಜೆಯ ಸೌಲಭ್ಯ ನೀಡಲಾಗುತ್ತದೆ. ಪಾಲನೆ, ಶಿಕ್ಷಣ, ಅನಾರೋಗ್ಯ ಮತ್ತು ಆರೈಕೆಯ ಆಧಾರದ ಮೇಲೆ ಮಗುವಿನ 18 ವರ್ಷಗಳು ಪೂರ್ಣಗೊಳ್ಳುವ ಮೊದಲು ಈ ರಜೆ ನೀಡಲಾಗುತ್ತದೆ. ಮಕ್ಕಳ ಆರೈಕೆ ರಜೆಯಡಿಯಲ್ಲಿ, ಸದಸ್ಯರಿಗೆ ಸಂಪೂರ್ಣ ಸೇವೆಯ ಅವಧಿಯಲ್ಲಿ ಮೊದಲ 365 ದಿನಗಳ ರಜೆಗಾಗಿ ಶೇ.100ರಷ್ಟು ವೇತನ ಒದಗಿಸಲಾಗುತ್ತದೆ. ಎರಡನೇ ಅವಧಿಯ 365 ದಿನಗಳ ರಜೆಯಲ್ಲಿ ಸಂಬಳದ ಶೇ.80ರಷ್ಟನ್ನು ಪಾವತಿ ಮಾಡಲಾಗುತ್ತದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಇತ್ತೀಚೆಗೆ ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಜುಲೈ 28 ರಂದು ಈ ಅಧಿಸೂಚನೆಯನ್ನು ಹೊರಡಿಸಿದ್ದು, ಇದರ ಅಡಿಯಲ್ಲಿ, ಅಖಿಲ ಭಾರತ ಸೇವಾ ಮಕ್ಕಳ ರಜೆ ನಿಯಮ 1995 ಅನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ತಿದ್ದುಪಡಿ ಮಾಡಲಾಗಿದೆ. AIS ಉದ್ಯೋಗಿಗಳಿಗೆ 7ನೇ ವೇತನ ಆಯೋಗದ ಪ್ರಕಾರ ವೇತನ ಒದಗಿಸಲಾಗುತ್ತದೆ.
ಇದನ್ನೂ ಓದಿ: ಜನರಿಗೆ ಮತ್ತೊಂದು ಎಚ್ಚರಿಕೆಯ ಸಂದೇಶ ನೀಡಿದ ಕಾರ್ಣಿಕ! ಏನದು?