Education News: ವಿದ್ಯಾರ್ಥಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ! 11 ಮತ್ತು 12ನೇ ತರಗತಿಗೆ ವರ್ಷಕ್ಕೆ ಎರಡು ಬಾರಿ ನಡೆಯಲಿದೆ ಬೋರ್ಡ್ ಪರೀಕ್ಷೆ: ಶಿಕ್ಷಣ ಸಚಿವಾಲಯ ಸೂಚನೆ!
Education news new changes in board exams two board exams for class 11 and 12 students
Two Board Exams for class 11 and 12 students: ವಿದ್ಯಾರ್ಥಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ಶಿಕ್ಷಣ ಸಚಿವಾಲಯವು (Education Board) ಈಗ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳು ನಡೆಯಲಿರುವ ಕುರಿತು ಮಾಹಿತಿ ನೀಡಿದೆ.11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ (Two Board Exams for class 11 and 12 students)ನೆರವಾಗುವ ನಿಟ್ಟಿನಲ್ಲಿ ಶಿಕ್ಷಣ ಸಚಿವಾಲಯ ಕೇವಲ ಒಂದು ಭಾಷೆಯ ಬದಲಿಗೆ ಎರಡು ಭಾಷೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಆ ಭಾಷೆಗಳಲ್ಲಿ ಒಂದು ಭಾರತೀಯ ಭಾಷೆಯಾಗಿರಬೇಕು ಎಂದು ಸೂಚನೆ ನೀಡಲಾಗಿದೆ.
ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಹೊಂದಿರಲಿದ್ದು, ಅಂದರೆ ವಿದ್ಯಾರ್ಥಿಗಳು ಎರಡು ಬಾರಿ ಪರೀಕ್ಷೆಗಳಲ್ಲಿ ತಮ್ಮ ಅತ್ಯುತ್ತಮ ಅಂಕ ಪಡೆಯಲು ಸಾಧ್ಯವಾಗುತ್ತದೆ. ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗುತ್ತದೆ. 11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ಭಾಷಾ ವಿಷಯ ಆಯ್ಕೆ ಮಾಡಲು ಅನುವು ಮಾಡಿಕೊಳ್ಳಲು ಹಾಗೂ ಅದರಲ್ಲಿ ಒಂದು ಭಾರತೀಯ ಭಾಷೆಯನ್ನು ಕಡ್ಡಾಯ ಮಾಡಲಾಗಿದೆ.
ವರ್ಷಕ್ಕೆ ಎರಡು ಬಾರಿ ಪರೀಕ್ಷೆಗಳನ್ನು ಮಾಡುವ ಹೊಸ ವಿಧಾನದಿಂದ ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶವನ್ನು ಶಿಕ್ಷಣ ಸಚಿವಾಲಯ ಹೊಂದಿದೆ. ವಿದ್ಯಾರ್ಥಿಗಳು ಕೇವಲ ಕಂಠ ಪಾಠ ಮಾಡಿದರೆ ಏನು ಪ್ರಯೋಜನವಿಲ್ಲ. ಕಲಿತ ವಿಷಯವನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಪರೀಕ್ಷಿಸಲು ಶಿಕ್ಷಣ ಸಚಿವಾಲಯ ಮುಂದಾಗಿದೆ. ವಿದ್ಯಾರ್ಥಿಗಳು ತಾವು ಕಲಿತ ಜ್ಞಾನವನ್ನು ಜೀವನದಲ್ಲಿ ಅಳವಡಿಸುತ್ತಿದ್ದಾರಾ ಎಂದು ಪರೀಕ್ಷೆಗಳು ಪರಿಶೀಲಿಸುತ್ತವೆ. ಪಠ್ಯ ಕೇವಲ ಕಲೆ, ವಿಜ್ಞಾನ ಅಥವಾ ವಾಣಿಜ್ಯ ವಿಷಯಗಳಿಗೆ ಸೀಮಿತವಾಗದೆ ವಿದ್ಯಾರ್ಥಿಗಳು ಹೆಚ್ಚು ಮುಕ್ತವಾಗಿ ಅಧ್ಯಯನ ಮಾಡಲು ಬಯಸುವ ವಿಷಯಗಳನ್ನು ಅವರು ಆಯ್ಕೆ ಮಾಡಲು ಅವಕಾಶ ಕಲ್ಪಿಸುವ ಯೋಜನೆಯನ್ನು ಶಿಕ್ಷಣ ಸಚಿವಾಲಯ ರೂಪಿಸಿದೆ.
“ಇನ್ನು ಮುಂದೆ ಶಾಲಾ ಮಂಡಳಿಗಳು ಸರಿಯಾದ ಸಮಯದಲ್ಲಿ ಬೇಡಿಕೆಯ ಪರೀಕ್ಷೆಗಳನ್ನು ನೀಡುವ ಸಾಮರ್ಥ್ಯವನ್ನು ಅಭಿವೃದ್ಧಿ ಮಾಡಬೇಕು. ಬೋರ್ಡ್ ಪರೀಕ್ಷೆಯ ಪರೀಕ್ಷಾ ಡೆವಲಪರ್‌ಗಳು ಮತ್ತು ಮೌಲ್ಯಮಾಪಕರು ಈ ಕೆಲಸವನ್ನು ತೆಗೆದುಕೊಳ್ಳುವ ಮೊದಲಿಗೆ ವಿಶ್ವವಿದ್ಯಾನಿಲಯದ ಪ್ರಮಾಣೀಕೃತ ಕೋರ್ಸ್‌ಗಳನ್ನು ತೆಗೆದುಕೊಳ್ಳಬೇಕು”ಎಂದು ಸಚಿವಾಲಯ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಶಾಲೆಗಳು ಎರಡು ಬಾರಿ ಪರೀಕ್ಷೆಗಳನ್ನು ನೀಡಲು ಸಾಧ್ಯವಾಗಲಿದ್ದು, ಹೊಸ ನಿಯಮಗಳು ತರಗತಿಯಲ್ಲಿ ಪಠ್ಯಪುಸ್ತಕಗಳ ಅಭ್ಯಾಸವನ್ನು ಕಡಿಮೆ ಮಾಡಲು ಬಯಸುತ್ತವೆ.
ಇದನ್ನೂ ಓದಿ: ರಾತ್ರಿ ಭೂತ ಕಂಡು ನಿದ್ದೆಯಿಲ್ಲದೆ ಒದ್ದಾಡಿದ ಮಹಿಳೆ! ಬೆಳಗ್ಗೆ ಎದ್ದು ನೋಡಿದಾಗ ತಿಳಿಯಿತು ಸತ್ಯ! ವೈರಲ್ ವೀಡಿಯೋ ಸುದ್ದಿ!!