ಕಸ್ತೂರಿ ರಂಗನ್ ವರದಿ ವಿರುದ್ಧ ಬೃಹತ್ ಪ್ರತಿಭಟನೆ- ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಸಮಾಲೋಚನಾ ಸಭೆಯಲ್ಲಿ ಕಿಶೋರ್ ಶಿರಾಡಿ

Kasthurirangan Report : ಕರ್ನಾಟಕ ರಾಜ್ಯದಲ್ಲಿ ಕಸ್ತೂರಿರಂಗನ್ ವರದಿ(Kasthurirangan Report)ಜಾರಿಗೊಳಿಸುವ ಬಗ್ಗೆ ಮತ್ತೆ ರಾಜ್ಯ ಸರಕಾರ ಹುನ್ನಾರ ನಡೆಸುತ್ತಿದ್ದು, ಪಶ್ಚಿಮ ಘಟ್ಟ ತಪ್ಪಲಿನ ಗ್ರಾಮಗಳ ಜನತೆ ಪ್ರತಿದಿನ ಆತಂಕದ ವಾತಾವರಣದಲ್ಲಿ ಜೀವಿಸುವ ಸ್ಥಿತಿ ನಿರ್ಮಾಣವಾಗಿದೆ ಕಸ್ತೂರಿ ರಂಗನ್ ಸಮಿತಿಯು ನೀಡಿದ ವರದಿಯಿಂದ ಇದು ದೃಢಪಟ್ಟಿದೆ. ಪಶ್ಚಿಮ ಘಟ್ಟ ಸೂಕ್ಷ್ಮ ವಲಯ ಪ್ರದೇಶದ ಜನರು ಕಳೆದ 15 ವರ್ಷಗಳಿಂದ ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಗ್ರಾಮ ಗ್ರಾಮಗಳಲ್ಲಿಯೂ ಪ್ರತಿಭಟಿಸಿರುವರು. ಅಷ್ಟೆಲ್ಲ ಆದರೂ ಈ ವರದಿ ಬಗ್ಗೆ ಸಂಬಂಧಪಟ್ಟ ಅಧಿಕಾರಿ ವರ್ಗದವರು ಲಿಖಿತವಾಗಿ ಮಾಹಿತಿ ನೀಡದಿರುವುದು ವಿಪರ್ಯಾಸ .ಈ ನಿಟ್ಟಿನಲ್ಲಿ ಇದೀಗ ಮತ್ತೆ ರಾಜ್ಯ ಸರಕಾರ ವರದಿ ಬಗ್ಗೆ ತಕರಾರು ಎತ್ತುತ್ತಿದ್ದು ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ಶಿರಾಡಿ ವತಿಯಿಂದ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ತಿಳಿಸಿದ್ದಾರೆ.

 

ಅವರು ಆ.22ರಂದು ಸುಬ್ರಹ್ಮಣ್ಯದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

 

ಈ ಹಿಂದೆಯೇ ಎಲ್ಲಾ ಬಾಧಿತ ಗ್ರಾಮಗಳ ಗ್ರಾಮ ಪಂಚಾಯತ್ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದು ಬೇಡ ಎಂಬ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.ಹಾಗೆಯೇ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸಭೆಯಲ್ಲೂ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳಲಾಗಿದೆ.

 

ಈ ವರದಿಯಿಂದಾಗಿ ಗ್ರಾಮೀಣ ಭಾಗದಲ್ಲಿ ಈಗಾಗಲೇ ಸಮಸ್ಯೆಗಳು ಉಂಟಾಗಿದೆ. ಇದೀಗ ಮಾನಸಿಕ ಒತ್ತಡದಿಂದ ಪಶ್ಚಿಮ ಘಟ್ಟದ ಬುಡದಲ್ಲಿ ವಾಸಿಸುತ್ತಿರುವ ರೈತರು ಆತಂಕದಲ್ಲಿ ಜೀವನ ನಡೆಸುವಂತಾಗಿದೆ ಎಂದು ಕಿಶೋರ್ ಶಿರಾಡಿ ತಿಳಿಸಿದರು.

 

ಸಮಾಲೋಚನಾ ಸಭೆಯಲ್ಲಿ ಜನಹಿತ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸದಸ್ಯರಾದ ಶೇಖರಪ್ಪ ಹರೀಶ ಕಲಂಗುಡಿ, ಅಚ್ಯುತ ಗೌಡ ಸುಬ್ರಹ್ಮಣ್ಯ, ಶ್ರೀಕಾಂತ್ ಎನ್, ಜಯಪ್ರಕಾಶ್ ಕೂಜುಗೋಡು, ಗಿರೀಶ ಪೈಲಾಜೆ, ಸಂತೋಷ ಎಂ, ಚಿದಾನಂದ ಗೌಡ ದೇವುಪಾಲು, ಆದರ್ಶ ಜೋಸೆಫ್, ದಿಲೀಪ್ ಉಪ್ಪಳಿಕೆ ಉಪಸ್ಥಿತರಿದ್ದರು.

ಇದನ್ನೂ ಓದಿ : ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್‌ !ಸಿಗಲಿದೆ ಉಚಿತ ಲ್ಯಾಪ್‌ಟಾಪ್‌ !ಸಿಎಂ ಸಿದ್ದರಾಮಯ್ಯ ಆದೇಶ !ತಕ್ಷಣದಿಂದ ಜಾರಿ

Leave A Reply

Your email address will not be published.