Home Karnataka State Politics Updates Varamahalakshmi Festival: ಮಹಿಳೆಯರಿಗೆ ಹೊಡೆಯಿತು ಲಾಟ್ರಿ! ಗೃಹಲಕ್ಷ್ಮಿ ಜೊತೆ ಜೊತೆಗೆ ಸರಕಾರದಿಂದ ವರಮಹಾಲಕ್ಷ್ಮಿ ಹಬ್ಬಕ್ಕೂ ಬಂಪರ್...

Varamahalakshmi Festival: ಮಹಿಳೆಯರಿಗೆ ಹೊಡೆಯಿತು ಲಾಟ್ರಿ! ಗೃಹಲಕ್ಷ್ಮಿ ಜೊತೆ ಜೊತೆಗೆ ಸರಕಾರದಿಂದ ವರಮಹಾಲಕ್ಷ್ಮಿ ಹಬ್ಬಕ್ಕೂ ಬಂಪರ್ ಗಿಫ್ಟ್!!

Varamahalakshmi Festival

Hindu neighbor gifts plot of land

Hindu neighbour gifts land to Muslim journalist

Varamahalakshmi Festival: ಕಾಂಗ್ರೆಸ್ ಸರ್ಕಾರ(Congress )ಚುನಾವಣೆಯಲ್ಲಿ ಗೆದ್ದು, ಹಲವಾರು ಯೋಜನೆಗಳನ್ನು (Govt Schemes) ಜಾರಿಗೆ ತರುವ ಮೂಲಕ ರಾಜ್ಯದ ಜನರಿಗೆ ನೆರವಾಗಿದೆ. ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಎರಡು ಯೋಜನೆಗಳನ್ನು ಜಾರಿಗೆ ತಂದಿದೆ.ಈ ನಡುವೆ ಮತ್ತೊಂದು ಗ್ಯಾರಂಟಿಯನ್ನು ಜಾರಿಗೆ ತರಲು ಭರದ ಸಿದ್ಧತೆ ನಡೆಯುತ್ತಿದೆ. ಇದಲ್ಲದೇ, ಮಹಿಳೆಯರಿಗೆ ಲಾಟ್ರಿ ಹೊಡೆದಿದ್ದು, ಗೃಹಲಕ್ಷ್ಮಿ ಜೊತೆ ಜೊತೆಗೆ ಸರಕಾರದಿಂದ ವರಮಹಾಲಕ್ಷ್ಮಿ ಹಬ್ಬಕ್ಕೂ (Varamahalakshmi Festival)ಬಂಪರ್ ಗಿಫ್ಟ್ ಸಿಗಲಿದೆ.

ಹೌದು,ಆಗಸ್ಟ್ 25ನೇ ತಾರೀಖು ಶುಕ್ರವಾರ ರಾಜ್ಯದ್ಯಾದಂತ ವರಮಹಾಲಕ್ಷ್ಮಿ ಹಬ್ಬ ಆಚರಣೆ ನಡೆಯಲಿದ್ದು, ಹಬ್ಬದ ದಿನ ದೇವಸ್ಥಾನಕ್ಕ ಬರುವ ಮಹಿಳಾ (Women)ಭಕ್ತರಿಗೆ ಸರ್ಕಾರದ ಕುಂಕುಮ ಭಾಗ್ಯ ನೀಡಲು ಮುಂದಾಗಿದೆ.ವರಮಹಾಲಕ್ಷ್ಮಿ ಹಬ್ಬದ ದಿನ ಮಹಿಳೆಯರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ ನೀಡುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ(Temples )ವರಮಹಾಲಕ್ಷ್ಮಿ ಹಬ್ಬದ ದಿನ ಹಸಿರು ಗಾಜಿನ ಬಳೆ, ಅರಿಶಿಣ, ಕುಂಕುಮ ದೇವರ ಮುಂದೆ ಪೂಜೆ ಮಾಡಿ ನೀಡುವಂತೆ ಆದೇಶ ಹೊರಡಿಸಲಾಗಿದೆ. ಧಾರ್ಮಿಕ ದತ್ತ ಇಲಾಖೆ ಆಯುಕ್ತರು ಆದೇಶವನ್ನು ಹೊರಡಿಸಿ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಪ್ರಸಾದ ರೂಪವಾದ ಅರಿಶಿಣ ಕುಂಕುಮವನ್ನು ಕಾಗದದ ಲಕೋಟೆಗಳಲ್ಲಿ ಸರ್ಕಾರದ ಲಾಂಛನದೊಂದಿಗೆ ದೇವಾಲಯ ಹೆಸರನ್ನು ಮುದ್ರಿಸಿ, ಲಕೋಟೆಯನ್ನು ಸಿದ್ದಪಡಿಸಿ ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ನೀಡಲು ಸೂಚನೆ ನೀಡಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಉನ್ನತ ಸ್ಥಾನ ನೀಡಲಾಗುತ್ತದೆ. ಪ್ರತಿ ವರ್ಷದ ಶ್ರಾವಣ ಮಾಸದ ಶುಕ್ಲಪಕ್ಷದ ಪೌರ್ಣಮಿಯ ಮೊದಲ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತ ಆಚರಿಸಲಾಗುತ್ತದೆ.

ಆ ದಿನ ಶ್ರೀಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿ ಪ್ರಸಾದವನ್ನು ನೈವೇದ್ಯ ಮಾಡಿ, ಪ್ರಸಾದವನ್ನು ಸ್ವೀಕರಿಸಿದರೆ ಸಕಲ ಸೌಭಾಗ್ಯ, ಅಷ್ಟ ಐಶ್ವರ್ಯ, ಉತ್ತಮ ಫಲಗಳು ಮಹಿಳೆಯರಿಗೆ ಲಭಿಸುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ, ನಾಡಿನ ಸಮಸ್ತ ಮಹಿಳೆಯರನ್ನು ಗೌರವಿಸುವ ನಿಟ್ಟಿನಲ್ಲಿ ವರಮಹಾಲಕ್ಷ್ಮಿಯವರ ಕೃಪೆ ದೊರೆಯಲು ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ಆಯಾಯ ದೇವಾಯಗಳ ವತಿಯಿಂದ ಉತ್ತಮ ಗುಣಪಟ್ಟದ ಕಸ್ತೂರಿ, ಅರಿಶಿಣ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡಲು ಸೂಚನೆ ಹೊರಡಿಸಲಾಗಿದೆ.

ಇದನ್ನೂ ಓದಿ: Donald Trump: ಭಾರತಕ್ಕೆ ಬೆದರಿಕೆ ಹಾಕಿದ ಡೊನಾಲ್ಡ್‌ ಟ್ರಂಪ್‌! ʼನಾನೇನಾದರೂ ಅಧ್ಯಕ್ಷನಾದರೆ….