Home latest Uttar Pradesh: ಮದುವೆಯಾಗಿ 15 ವರ್ಷದ ನಂತರ ಹೆಂಡತಿಗೆ ತ್ರಿಪಲ್‌ ತಲಾಖ್‌ ನೀಡಿದ ಗಂಡ! ನಂತರ...

Uttar Pradesh: ಮದುವೆಯಾಗಿ 15 ವರ್ಷದ ನಂತರ ಹೆಂಡತಿಗೆ ತ್ರಿಪಲ್‌ ತಲಾಖ್‌ ನೀಡಿದ ಗಂಡ! ನಂತರ ಅತ್ತಿಗೆ ಜೊತೆ ಅನೈತಿಕ ಸಂಬಂಧ- ಪೊಲೀಸ್‌ ದೂರು ದಾಖಲು !

Uttar Pradesh
Image credit: Tribune india

Hindu neighbor gifts plot of land

Hindu neighbour gifts land to Muslim journalist

Uttar Pradesh: ವ್ಯಕ್ತಿಯೋರ್ವ ಮದುವೆಯಾಗಿ (marriage) 15 ವರ್ಷದ ನಂತರ ಹೆಂಡತಿಗೆ ತ್ರಿಪಲ್ ತಲಾಖ್ (Triple Talaq) ನೀಡಿ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ಬೆಳಕಿಗೆ ಬಂದಿದೆ. ಈ ಬಗ್ಗೆ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪಳನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರು 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರಿಗೆ ಒಬ್ಬಳು ಮಗಳಿದ್ದಳು. ಆದರೆ, ಮಗಳು ಕಳೆದ ಜನವರಿಯಲ್ಲಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಆಕೆಯ ಪತಿ ಮದ್ಯವ್ಯಸನಿಯಾಗಿದ್ದು, ದಿನವೂ ಕುಡಿದು ಬಂದು ಮನೆಯಲ್ಲಿ ಜಗಳವಾಡುತ್ತಿದ್ದ. ಅಷ್ಟೇ ಅಲ್ಲ ಆತ ತನ್ನ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧವನ್ನೂ ಹೊಂದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಪತಿ ಮಹಿಳೆಯ ವಿರುದ್ಧ ಸುಳ್ಳು ಆರೋಪ ಮಾಡಿ, ಬೇಕಾಬಿಟ್ಟಿ ಥಳಿಸುತ್ತಿದ್ದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಅತ್ತಿಗೆಯೊಂದಿಗೂ ಜಗಳವಾಗಿದೆ. ಅತ್ತಿಗೆಯ ಪೋಷಕರು ಕೂಡ ಅನುಚಿತವಾಗಿ ವರ್ತಿಸಿದ್ದಾರೆ ಎಂದಿದ್ದಾರೆ. ಜಗಳ, ಗಂಡನ ಹೊಡೆತದಿಂದ ಬೇಸತ್ತ ಮಹಿಳೆ ತನ್ನ ತವರು ಮನೆಗೆ ತೆರಳಿದ್ದರು. ಈ ವೇಳೆ ಪತಿ ಫೋನ್ ಮೂಲಕ ಮೂರು ಬಾರಿ ತಲಾಖ್-ತಲಾಖ್-ತಲಾಖ್ ಎಂದು ಹೇಳಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.

ಸಂತ್ರಸ್ತೆ ದೂರಿನಲ್ಲಿ ಜೇತ್ ಮತ್ತು ಜೇಥಾನಿ ಎಂದೂ ಹೆಸರಿಸಿದ್ದಾರೆ.ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಆಕೆಯ ಪತಿ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.ತನಿಖೆಯ ನಂತರ ಸತ್ಯಾಂಶ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Prakash Raj: ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ನಟ ಪ್ರಕಾಶ್‌ ರಾಜ್‌ ಶೇರ್‌ ಮಾಡಿದ ಚಿತ್ರ ಯಾವುದು ಗೊತ್ತೇ?