Gruha Lakshmi yojana: ಮಹಿಳೆಯರೇ ‘ಗೃಹಲಕ್ಷ್ಮಿ’ ಯೋಜನೆ ಕುರಿತು ಬಿಗ್ ಅಪ್ಡೇಟ್‌! ಸಿಗಲಿದೆ ‘ಸ್ಮಾರ್ಟ್ ಕಾರ್ಡ್’

Gruhalakshmi scheme latest news gruhalakshmi scheme smart Card distributed to gruha lakshmi beneficiaries

Gruha lakshmi Yojana: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (Gruha Lakshmi Yojana)ಅನುಸಾರ ಕರ್ನಾಟಕ ರಾಜ್ಯದ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000ಗಳನ್ನು ನೀಡಲಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಮನೆಯ ಯಜಮಾನಿಯರು ಎದುರು ನೋಡುತ್ತಿದ್ದಾರೆ. ಈ ನಡುವೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D. K. Shivakumar)ಈ ಯೋಜನೆಯ ಕುರಿತು ಬಿಗ್ ಅಪ್ಡೇಟ್ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಮುಗಿದು ಕೈ ಪಾಳಯ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಮಹಿಳೆಯರಿಗೆ ಮಾಸಿಕ 2 ಸಾವಿರ ರೂ.ನೀಡುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಕ್ಕೆ ಕ್ಯೂಆರ್ ಕೋಡ್ ಇರುವ ಸ್ಮಾರ್ಟ್ ಕಾರ್ಡ್ ಅನ್ನು ನೀಡಲಾಗುವ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು ಗುಲಾಬಿ ವರ್ಣದ ಸ್ಮಾರ್ಟ್ ಕಾರ್ಡ್ ಅನ್ನು ಪ್ರದರ್ಶಿಸಿ ಈ ಸ್ಮಾರ್ಟ್ ಕಾರ್ಡ್ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ತಮ್ಮ ಭಾವಚಿತ್ರಯಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಸ್ಮಾರ್ಟ್ ಕಾರ್ಡ್(Smart Card)ಹಿಂಭಾಗದಲ್ಲಿ ಮಹಿಳೆಯ ಭಾವಚಿತ್ರ ಮತ್ತು ಕ್ಯೂಆರ್ ಕೋಡ್ (QR Code) ಇರಲಿದ್ದು,ಸ್ಕ್ಯಾನ್ ಮಾಡಿದಾಗ ಮಹಿಳೆಯರಿಗೆ 2000 ರೂಪಾಯಿ ಹಣ ಯಾವಾಗ ಬಿಡುಗಡೆಯಾಗಿದೆ ಎಂಬ ಮಾಹಿತಿ ಕೂಡ ದೊರೆಯಲಿದೆಯಂತೆ.

ಇದರ ಜೊತೆಗೆ ಶಕ್ತಿ ಯೋಜನೆ ಬಗ್ಗೆ ಕೂಡ ಡಿಸಿಎಂ ಮಾಹಿತಿ ನೀಡಿದ್ದಾರೆ. ಶಕ್ತಿಯೋಜನೆಗೆ ಸ್ಮಾರ್ಟ್ ಕಾರ್ಡ್ ನೀಡುವ ಬಗ್ಗೆ ಚುನಾವಣಾ ಪೂರ್ವದಲ್ಲೇ ಮಾಹಿತಿ ನೀಡಲಾಗಿತ್ತು. ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ತಯಾರಿಕಾ ಪಕ್ರಿಯೆ ನಡೆಯುತ್ತಿದೆ. ಮಹಿಳೆಯರು ಬಸ್ ನಲ್ಲಿ ಹತ್ತುವ ಸಂದರ್ಭ ಇದನ್ನು ಸ್ವೈಪ್ (Swipe)ಮಾಡಿ ಹತ್ತಬೇಕಾಗಿದ್ದು, ಸುಳ್ಳು ಮಾಹಿತಿ ನೀಡಿ ಬಸ್ ಹತ್ತುವವರ ಮೇಲೆ ನಿಗಾ ವಹಿಸಲು ಸ್ಮಾರ್ಟ್ ಕಾರ್ಡ್ ನೆರವಾಗುತ್ತದೆ. ಅಷ್ಟೇ ಅಲ್ಲದೆ, ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಲು ಸ್ಮಾರ್ಟ್ ಕಾರ್ಡ್ ನೆರವಾಗುವ ಕುರಿತು ಕೂಡ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Accident:ಬೈಕ್-ಪಿಕ್‌ಅಪ್‌ ವಾಹನ ಡಿಕ್ಕಿ; ಐಸ್‌ಕ್ರೀಂ ಕೊಡಿಸಲೆಂದು 3 ಮಕ್ಕಳನ್ನು ಕರೆದುಕೊಂಡು ಹೋದಾಗ ಅಪಘಾತ!

Comments are closed.