Government Workers:ನಾಗರಪಂಚಮಿಯ ದಿನದಂದು ಸರಕಾರಿ ನೌಕರರಿಗೆ ಖುಷಿ ಸುದ್ದಿ! ವೇತನ, ಬೋನಸ್‌ ಹೆಚ್ಚಳ, ಎಷ್ಟು? ಇಲ್ಲಿದೆ ಮಾಹಿತಿ

Government workers to get bonus and special allowance and Government employees salary

Government Workers : ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿಯೊಂದು ಇಲ್ಲಿದೆ. ಸರ್ಕಾರಿ ನೌಕರರು ಮಾಸಿಕ ವೇತನದ ಜೊತೆಗೆ ಬೋನಸ್(Bonus )ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಈ ಕುರಿತು ಇದೀಗ ಆದೇಶ ನೀಡಲಾಗಿದ್ದು, ಉದ್ಯೋಗಿಗಳಿಗೆ (Government Workers)ಎಷ್ಟು ಬೋನಸ್ ಸಿಗಲಿದೆ ಎಂದು ಘೋಷಿಸಲಾಗಿತ್ತೋ ಅಷ್ಟೇ ಮೊತ್ತವನ್ನು ನೀಡಲಾಗುತ್ತದೆ.

ಕೇರಳ (Kerala)ರಾಜ್ಯ ಸರ್ಕಾರಿ ನಾಗರಿಕ ಸರಬರಾಜು ನಿಗಮದ ಕಾಯಂ ನೌಕರರಿಗೆ(Permanent Wokers)8.33% ಬೋನಸ್ ಮ ತ್ತು 25000 ರೂ. ಓಣಂ ಅಡ್ವಾನ್ಸ್  ನೀಡಲಾಗುತ್ತದೆ. 24000 ರೂ. ವರೆಗೆ ಮಾಸಿಕ ವೇತನ ಪಡೆಯುವವರಿಗೆ ಈ ಸೌಲಭ್ಯ ನೀಡಲಾಗುತ್ತದೆ. ಬೋನಸ್ ಪಡೆಯಲು ಅರ್ಹರಲ್ಲದ ಕಾಯಂ ಮತ್ತು ನಿಯೋಜಿತ ನೌಕರರಿಗೆ ಅಭಿನಂದನಾ ಭತ್ಯೆಯಾಗಿ 2750 ರೂ. ನೀಡಲಾಗುತ್ತದೆ. ಅದೇ ರೀತಿ, ದೈನಂದಿನ ಮತ್ತು ಗುತ್ತಿಗೆ ಕಾರ್ಮಿಕರಿಗೆ 3,750 ರೂ. ಬೋನಸ್ ದೊರೆಯಲಿದೆ.

ಕಳೆದ ವರ್ಷ, ತುಟ್ಟಿಭತ್ಯೆ (DA) ಸೇರಿದಂತೆ ಒಟ್ಟು 35,040 ರೂ  ಗಳಿಸುವ ನೌಕರರಿಗೆ ಬೋನಸ್ ಮಂಜೂರು ಮಾಡಲಾಗಿದ್ದು, ಈ ವರ್ಷ ಮಿತಿಯನ್ನು 35,640 ರೂ.ಗೆ ಏರಿಸಲು ಹಣಕಾಸು ಇಲಾಖೆ ಶಿಫಾರಸು ಮಾಡಲಾಗಿದೆ. ಓಣಂ ಹಬ್ಬದ ಪ್ರಯುಕ್ತ ಸರ್ಕಾರಿ ನೌಕರರಿಗೆ (Government Workers)4000 ರೂ. ಬೋನಸ್ ಘೋಷಿಸಲಾಗಿದೆ. ಬೋನಸ್ ಸಿಗದ ಸರ್ಕಾರಿ ನೌಕರರಿಗಾಗಿ 2750 ವಿಶೇಷ ಭತ್ಯೆ ನೀಡುವ ಕುರಿತು ಮಾಹಿತಿ ಮಾಡಲಾಗಿದೆ ಎಂದು ಹಣಕಾಸು ಸಚಿವ ಪಾಲ್ ಗೋಪಾಲ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಹಬ್ಬದ ಸಂದರ್ಭದಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ 20,000 ರೂಪಾಯಿ ಮುಂಗಡ ವೇತನ ಪಾವತಿ ಮಾಡಲಾಗುತ್ತದೆ. ಅರೆಕಾಲಿಕ ಉದ್ಯೋಗಿಗಳಿಗೆ ಮುಂಗಡವಾಗಿ 6,000 ರೂ ಪಾವತಿ ಮಾಡಲಾಗುತ್ತದೆ ಎಂದು ಘೋಷಿಸಲಾಗಿದೆ. ಗ್ರೀನ್ ಆರ್ಡರ್ ಸೇವಾ ಸದಸ್ಯರಿಗೆ 1000 ರೂ. ಹಬ್ಬದ ಭತ್ಯೆ ನೀಡಲಾಗುತ್ತದೆ ಎಂದು ಸ್ಥಳೀಯಾಡಳಿತ ಸಚಿವ ಎಂ.ಪಿ.ರಾಜೇಶ್ ಅವರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ನಿರುದ್ಯೋಗಿಗಳಿಗೆ 2,500 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ.

ಓಣಂ ಸಂದರ್ಭದಲ್ಲಿ, ಆಗಸ್ಟ್ 25, 2023 ರಂದು, ಕೇರಳದ ಸರ್ಕಾರಿ ನೌಕರರ ಆಗಸ್ಟ್ ವೇತನವನ್ನು ಪಾವತಿಸಲಾಗುತ್ತದೆ. ಕೇರಳದಲ್ಲಿರುವ ಎಲ್ಲಾ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಈ ದಿನಾಂಕದಂದು ಬ್ಯಾಂಕ್‌ಗಳು/ಪಿಎಒಗಳ ಮೂಲಕ ಪಿಂಚಣಿ ವಿತರಣೆ ಮಾಡುವ ಸಾಧ್ಯತೆ ಇದೆ. ವೇತನ ಮತ್ತು ಪಿಂಚಣಿ ವಿತರಣೆಯನ್ನು ಮುಂಗಡವಾಗಿ ಪರಿಗಣಿಸಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA)ಮತ್ತು ಇತರ ಕಚೇರಿಗಳ ತಾತ್ಕಾಲಿಕ ಉದ್ಯೋಗಿಗಳಿಗೆ ಹಬ್ಬದ ವಿಶೇಷ ಭತ್ಯೆಯಾಗಿ 1,210 ರೂ ನೀಡಲಾಗುತ್ತದೆ. ಈ ಹಿಂದೆ ಕೇರಳ ಸರ್ಕಾರ ಪ್ರತಿಯೊಬ್ಬ ಸರ್ಕಾರಿ ನೌಕರರಿಗೂ ಬೋನಸ್ ಘೋಷಿಸಿದ್ದು, ಬೋನಸ್ ಪಡೆಯಲು ಅರ್ಹರಲ್ಲದವರಿಗೂ ವಿಶೇಷ ಹಬ್ಬದ ಭತ್ಯೆ ಕೊಡಲಾಗುತ್ತದೆ. ವೇತನವು ಮುಂಚಿತವಾಗಿ ಉದ್ಯೋಗಿಯ ಬ್ಯಾಂಕ್ ಖಾತೆಗೆ ತಲುಪಲಿದೆ. 13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಇದರ ಸೌಲಭ್ಯ ಪಡೆಯಲಿದ್ದಾರೆ.

ಇದನ್ನೂ ಓದಿ: Crime News: ಮದುವೆ ಆಸೆ ತೋರಿಸಿ ಮೋಸ ಮಾಡಿದ 70ರ ವೃದ್ಧನ ವಿರುದ್ಧ 63ರ ಅಜ್ಜಿಯ ದೂರು!!!

Comments are closed.