Uttar Pradesh: ಭಾರೀ ಮೊತ್ತಕ್ಕೆ ಕನ್ನ ಹಾಕಿದ ಕಳ್ಳರು ; ಕದ್ದೊಯ್ಯುವಾಗ ಕಾರಿಗೆ ಅಡ್ಡ ಬಂದ ಬೆಕ್ಕು ! ಮುಂದೇನಾಯ್ತು ?

Uttar Pradesh news cat crossing path superstition lands 3 thieves in jail in UP Jhansi

Uttar Pradesh: ದುಷ್ಕರ್ಮಿಗಳು ಕಳ್ಳತನ ಮಾಡಿ ಹಿಂತಿರುಗುವಾಗ ಕಾರಿಗೆ ಬೆಕ್ಕೊಂದು ಅಡ್ಡ ಬಂದಿದ್ದು, ಬೆಕ್ಕು ಅಪಶಕುನ ಎಂದು ಕಳ್ಳರು ಕಾರು ನಿಲ್ಲಿಸಿದ್ದಾರೆ. ಇದರಿಂದಾಗಿ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ ನಡೆದಿದೆ.

ಸಿಪಿ ಬಜಾರ್ ಪೊಲೀಸ್ ಠಾಣಿ ವ್ಯಾಪ್ತಿಯ ರಾಜೀವ್ ಎಂಬಾತನ ಕಳ್ಳತನವಾಗಿತ್ತು. ಈತನ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ. ಈ ಬಗ್ಗೆ
ಆಗಸ್ಟ್ 11ರಂದು ರಾಜೀವ್ ಪೊಲೀಸರಿಗೆ ದೂರು ನೀಡಿದ್ದನು. ಪೊಲೀಸರು ಕಳ್ಳರಿಗೆ ಬೆಲೆ ಬೀಸಿದ್ದರು. ಆದರೆ, ಕಳ್ಳರ ಎಡವಟ್ಟಿಂದಾಗಿ ಅವರೇ ಸಿಕ್ಕಿಹಾಕಿಕೊಂಡರು.

ಹೌದು, ದುಷ್ಕರ್ಮಿಗಳು ಕಳ್ಳತನ ಮಾಡಿ ಕಾರಿನಿಂದ ಹಿಂತಿರುಗುತ್ತಿದ್ದರು. ಬೆಕ್ಕು ದಾರಿಯನ್ನು ದಾಟಿದಾಗ, ಅವರು ಕಾರನ್ನು ನಿಲ್ಲಿಸಿದ್ದು, ಇದರಿಂದ ಅಲ್ಲಿಯೇ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಾರಿನ ಸಂಖ್ಯೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶುಕ್ರವಾರ ಢಾಬಾ ಮಾಲೀಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಮಿತ್ ಪಾಠಕ್ ಅಲಿಯಾಸ್ ಅಕ್ಕು, ಸೋನು ಅಲಿಯಾಸ್ ಸೈನಿಕ್ ಮತ್ತು ರಾಹುಲ್ ಸೇನ್ ಎಂದು ಹೇಳಲಾಗಿದೆ.

ಆರೋಪಿಗಳನ್ನು ಬಂಧಿಸಿ, ಅವರಿಂದ 5 ಲಕ್ಷ 50 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ 25 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಇವರ ಸಹಚರನೊಬ್ಬ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ವಿಚಿತ್ರ! 31ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾಕೆಗೆ ಹೆರಿಗೆಯಾದದ್ದು 92ನೇ ವಯಸ್ಸಿನಲ್ಲಿ!!!

Comments are closed.