Chandrayaan-3: ಸುರ್ಯೋದಯಕ್ಕಾಗಿ ಕಾಯುತ್ತಿರುವ ಚಂದ್ರಯಾನ-3! ಈ ಕಾಯುವಿಕೆಯಲ್ಲೂ ಒಂದು ಅರ್ಥವಿದೆ!

National news Chandrayaan-3 status Chandrayaan-3 mission just 25 km away from the moon crosses the last stage of the landing

Chandrayaan-3: ದೇಶದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 (Chandrayaan-3) ಉಡಾವಣೆ ಯಶಸ್ವಿಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಆಂಧ್ರ ಪ್ರದೇಶದ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ನೌಕೆಯು ಬೆಂಕಿ ಬೆರೆಸಿಕೊಂಡು ಉರಿಯುತ್ತ ಸುಧೀರ್ಘ ಪ್ರಯಾಣಕ್ಕೆ ಹೊರಟಿದ್ದು, ಇದೀಗ ಚಂದ್ರನ ಅಂಗಳದಲ್ಲಿದೆ.

 

ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆ ಚಂದ್ರನ ಐದನೇ ಹಾಗೂ ಕೊನೆಯ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಈ ಮೂಲಕ ಚಂದ್ರನ (Moon) ಮೇಲ್ಮೈಗೆ ಸಮೀಪಿಸಿದೆ. ಚಂದ್ರನ ಕಾಂಪೌಂಡ್ ನಷ್ಟು ಸನಿಹದಲ್ಲಿ ವಿಕ್ರಮ ತಲುಪಿದೆ. ಸದ್ಯ ಚಂದ್ರಯಾನ-3 ಚಂದ್ರನ ಮೇಲ್ಮೈಗೆ ಇಳಿಯಲು ಕೇವಲ 3 ದಿನಗಳು ಮಾತ್ರ ಬಾಕಿ ಉಳಿದಿವೆ. ವಿಕ್ರಮ್ ಲ್ಯಾಂಡರ್ ತನ್ನ ಎತ್ತರ ಹಾಗೂ ವೇಗವನ್ನು ಕಡಿಮೆ ಮಾಡುತ್ತಿದೆ. ಚಂದ್ರಯಾನ-3 ತಡರಾತ್ರಿ 1.50ಕ್ಕೆ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ದಾಟಿದೆ.

ಇಂದು ಬೆಳಗಿನ ಜಾವ 1.50ಕ್ಕೆ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಡಿ-ಬೂಸ್ಟ್ ಮಾಡಲಾಗಿದ್ದು, ಚಂದ್ರಯಾನ-3 ಅನ್ನು ನಿಧಾನಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ. ಜೊತೆಗೆ ಅಂತಿಮ ಡೀಬೂಸ್ಟಿಂಗ್ ಕಾರ್ಯಾಚರಣೆಯು LM ಕಕ್ಷೆಯನ್ನು 25 km x 134 km ಗೆ ಯಶಸ್ವಿಯಾಗಿ ತಗ್ಗಿಸಿದೆ. ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗಾಬೇಕು ಮತ್ತು ಲ್ಯಾಂಡಿಂಗ್ ಸೈಟ್‌’ನಲ್ಲಿ ಸೂರ್ಯೋದಯಕ್ಕಾಗಿ ಕಾಯಬೇಕಾಗುತ್ತದೆ. ಇದು ಆಗಸ್ಟ್ 23 ರಂದು ಸಂಜೆ ಸುಮಾರು 45 ನಿಮಿಷಗಳಲ್ಲಿ ಇಳಿಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಈ ಡೀಬೂಸ್ಟಿಂಗ್‌’ನೊಂದಿಗೆ, ವಿಕ್ರಮ್ ಲ್ಯಾಂಡರ್ ಚಂದ್ರನ ಅತ್ಯಂತ ಕಡಿಮೆ ಕಕ್ಷೆಯನ್ನು ತಲುಪಿದೆ. ಈಗ ಚಂದ್ರನಿಂದ ಅದರ ಕನಿಷ್ಠ ದೂರ ಕೇವಲ 25 ಮತ್ತು ಗರಿಷ್ಠ ದೂರ 134 ಕಿಲೋಮೀಟರ್ ನಲ್ಲಿದೆ. ಚಂದ್ರಯಾನ-3 ಈಗ ಸೂರ್ಯನು ಚಂದ್ರನ ಮೇಲ್ಮೈಯಲ್ಲಿ ಉದಯಿಸಲು ಕಾಯುತ್ತಿದೆ. ಇದೀಗ ಚಂದ್ರನಲ್ಲಿ ರಾತ್ರಿಯಾಗಿದ್ದು, 23ರಂದು ಸೂರ್ಯೋದಯವಾಗಲಿದೆ. ವಿಕ್ರಮ್ ಲ್ಯಾಂಡರ್ ಸೂರ್ಯನ ಬೆಳಕು ಮತ್ತು ಶಕ್ತಿಯನ್ನು ಬಳಸಿಕೊಂಡು ತನ್ನ ಕಾರ್ಯಾಚರಣೆಯನ್ನು ಮುಂದಕ್ಕೆ ತೆಗೆದುಕೊಳ್ಳುತ್ತದೆ. ಎರಡೂ ರೋವರ್‌ಗಳು ವಿದ್ಯುತ್ ಉತ್ಪಾದಿಸಲು ಸೌರ ಫಲಕಗಳನ್ನು ಬಳಸುತ್ತವೆ. ಈ ಕಾರ್ಯಾಚರಣೆಯಲ್ಲಿ, ಪ್ರಗ್ಯಾನ್ ರೋವರ್ ಮುಂದಿನ 14 ದಿನಗಳವರೆಗೆ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ.

ಅಂದಹಾಗೆ ಯಾವುದೇ ಬಾಹ್ಯಾಕಾಶ ನೌಕೆಗೆ, ಚಂದ್ರನ ಮೇಲ್ಮೈಯಲ್ಲಿ ಇಳಿಯುವುದು ಕಷ್ಟ. ಈ ಹಾದಿಯಲ್ಲಿ
ಸಾವಿರಾರು ಸವಾಲುಗಳಿಂದ ತುಂಬಿರುತ್ತದೆ. ಈ ಎಲ್ಲವನ್ನೂ ದಾಟಿ ಹೋಗೋದು ಭಾರೀ ದೊಡ್ಡ ಸವಾಲೇ ಸರಿ. ಇದೀಗ ಚಂದ್ರಯಾನ-3 ಸುರ್ಯೋದಯಕ್ಕಾಗಿ ಕಾಯುತ್ತಿದೆ. ಚಂದ್ರಯಾನ-3 ಭಾರತದ ಹೆಮ್ಮೆ ಎಂದರೆ ತಪ್ಪಾಗಲಾರದು!!. ಸದ್ಯ ಈ ಯೋಜನೆ ಯಶಸ್ವಿಯಾದರೆ ಭಾರತದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಲಿದೆ.

ಇದನ್ನೂ ಓದಿ: Indira Canteen: ಇಂದಿರಾ ಕ್ಯಾಂಟೀನ್‌ ಊಟದ ಬೆಲೆ ಏರಿಕೆ ಕುರಿತು ಸರಕಾರದಿಂದ ಬಂತು ಮಹತ್ವದ ಸ್ಪಷ್ಟನೆ! ಇಲ್ಲಿದೆ ಸಂಪೂರ್ಣ ಮಾಹಿತಿ

Comments are closed.