Shivamogga: ಫ್ರೀ ಎಫೆಕ್ಟ್‌! ಮುಸ್ಲಿಂ ಮಹಿಳೆಗೆ ಪಾಕಿಸ್ತಾನಕ್ಕೆ ಹೋಗು ಎಂದ ಕಂಡಕ್ಟರ್!!‌ ಅನಂತರ ಆದದ್ದೇ ರೋಚಕ ಘಟನೆ!

Shivamogga news fight between ksrtc bus conductor and women passanger

Shivamogga: ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯ ಸುದ್ದಿ ಮಾಡುತ್ತಲೇ ಇದೆ. ಉಚಿತ ಪ್ರಯಾಣದ ಸಂದರ್ಭದಲ್ಲಿ ಹಲವಾರ ಅವಾಂತರಗಳನ್ನು ನೀವು ನೋಡಿರಬಹುದು. ಇದು ಯಾವುದರ ಎಫೆಕ್ಟ್‌ ಯಾವುದಕ್ಕೆ ಎನ್ನುವ ರೀತಿ ಆಗಿದೆ.

ಇದು ಕೆಎಸ್‌ಆರ್‌ಟಿಸಿ ಮತ್ತು ಪಾಕಿಸ್ತಾನದ ವಿಷಯದ ಗಲಾಟೆ. ಬನ್ನಿ ಅದೇನು ತಿಳಿಯೋಣ. ಶಿವಮೊಗ್ಗದಿಂದ (Shivamogga) ಭದ್ರಾವತಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬುರ್ಖಾಧಾರಿ ಮುಸ್ಲಿಂ ಮಹಿಳೆಯೊಬ್ಬಳು ಬಸ್‌ ಹತ್ತಿದ್ದರು. ಇದೇ ಸಂದರ್ಭದಲ್ಲಿ ಇನ್ನೊಬ್ಬ ಮಹಿಳೆ ಕೂಡಾ ಬಸ್‌ ಹತ್ತಿದ್ದು, ಇಬ್ಬರೂ ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣ ಬೆಳೆಸಿದ್ದಾರೆ. ಆದರೆ ಈ ಕಂಡಕ್ಟರ್‌ ಇಬ್ಬರು ಮಹಿಳೆಯರನ್ನು ಸೇರಿಸಿ ಒಂದು ಟಿಕೆಟ್‌ ನೀಡಿದ್ದಾನೆ. ಇದು ಮೂಲ ಕಾರಣ ಜಗಳಕ್ಕೆ.

ಆಗ ಮುಸ್ಲಿಂ ಮಹಿಳೆ ಒಬ್ಬೊಬ್ಬರು ಒಂದೊಂದು ಕಡೆ ಇಳಿಯುವುದರಿಂದ ಒಂದೇ ಟಿಕೆಟ್‌ ಯಾಕೆ ಕೊಟ್ಟಿದ್ದೀರಾ? ಚೆಕಿಂಗ್‌ ಬಂದರೆ ತೊಂದರೆ ಆಗುವುದಿಲ್ಲವೇ ಎಂದು ಕೇಳಿದ್ದಾಳೆ. ಇಷ್ಟಕ್ಕೇ ರೊಚ್ಚಿಗೆದ್ದ ಕಂಡಕ್ಟರ್‌ ನೀವೇನು ಪಾಕಿಸ್ತಾನದಲ್ಲಿ ಇಳಿತೀರಾ? ಎಂದು ಮರು ಪ್ರಶ್ನಿಸಿದ್ದ. ಬಸ್‌ ಏನು ಪಾಕಿಸ್ತಾನದಲ್ಲಿ ಓಡಿಸ್ತಾ ಇದ್ದೀರಾ ಎಂದು ಮಹಿಳೆ ಮರು ಉತ್ತರ ನೀಡಿದ್ದಾಳೆ.

ಇದಕ್ಕೆ ಕಂಡಕ್ಟರ್‌ ನೀವು ಪಾಕಿಸ್ತಾನಕ್ಕೆ ಹೋಗಿ ಎಂದಿದ್ದಾನೆ. ಅದಕ್ಕೆ ಮಹಿಳೆ, ಫ್ರೀ ಟಿಕೆಟ್‌ ಬೇಕಾದರೆ ಪಾಕಿಸ್ತಾನಕ್ಕೆ ಹೋಗಬೇಕಾ? ಕರ್ನಾಟಕ ಸರಕಾರ ಕೊಟ್ಟದ್ದಲ್ವಾ? ನೀವು ಕೊಟ್ಟದ್ದಾ? ಎಂದು ಹೇಳಿದ್ದಾಳೆ. ಈ ಜಗಳ ಭದ್ರಾವತಿಯ ಬಸ್‌ ನಿಲ್ದಾಣ ತಲುಪುವವರೆಗೆ ನಡೆದಿದೆ. ನಂತರ ಈ ವಿಷಯ ತಿಳಿದಯ ಮುಸ್ಲಿಂ ಮಹಿಳೆಯ ಪತಿ ಹಾಗೂ ಸಮುದಾಯದ ಗುಂಪು ಕಂಡಕ್ಟರ್‌ನನ್ನು ಸುತ್ತುವರಿದಿತ್ತು.

ಈ ಕಡೆ ಕಂಡಕ್ಟರ್‌ ಕೂಡಾ ತನ್ನ ಸಹ ಕಂಡಕ್ಟರ್‌ ಗುಂಪು ಸೇರಿಸಿಕೊಂಡಿದ್ದ. ಆದರೆ ಪಾಕಿಸ್ತಾನ ಹೆಸರು ತೆಗೆದ ಕಂಡಕ್ಟರ್‌ನನ್ನೇ ಅಲ್ಲಿದ್ದ ಜನರೇ ಬೈದಿದ್ದರು. ಸಹ ಕಂಡಕ್ಟರ್‌ಗಳ ಗುಂಪು ಕೂಡಾ ಕೆಎಸ್‌ಆರ್‌ಟಿಸಿ ಈ ಮೊದಲು ಖಾಲಿ ಹೋಗುತ್ತಿತ್ತು. ಆದರೆ ಸರಕಾರದ ಗ್ಯಾರಂಟಿ ಯೋಜನೆ ಮೂಲಕ ಫುಲ್‌ ರಶ್‌ ಆಗ್ತಿದೆ. ಹಾಗಾಗಿ ಪ್ರಯಾಣಿಕರ ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ಬೈದಿತ್ತು.

ಮುಸ್ಲಿಂ ಮಹಿಳೆಯ ಪತಿಗೆ ಕೂಡಾ ಕಂಡಕ್ಟರ್‌ ನೀನ್ಯಾರು ಆಕೆಯ ಪರವಾಗಿ ಮಾತಾಡೋಕೆ ಎಂದು ಹೇಳಿದ್ದು, ಮತ್ತೆ ಪರಿಸ್ಥಿತಿಯನ್ನು ರೊಚ್ಚಿಗೆಬ್ಬಿಸಿತ್ತು. ಕೊನೆಗೆ ಕಂಡಕ್ಟರ್‌ ತನ್ನಿಂದಾದ ತಪ್ಪಿಗೆ ಕ್ಷಮೆ ಕೇಳಿದ್ದಾನೆ. ನಂತರ ಈ ಪ್ರಕರಣ ಅಂತ್ಯಗೊಂಡಿತು.

ಇದನ್ನೂ ಓದಿ: SpiceJet Flight: ವಿಮಾನ ಪ್ರಯಾಣದಲ್ಲಿ ಕದ್ದು ಗಗನಸಖಿಯ ಫೋಟೋ ಕ್ಲಿಕ್ಕಿಸಿದ ಮುದುಕ! ಫೋನ್‌ನಲ್ಲಿತ್ತು ಫೋಟೋ ರಹಸ್ಯ!

Comments are closed.