Married men: ಮದುವೆಯಾದ ಗಂಡಸು ಬೇರೆಯವರ ಹೆಂಡ್ತಿಯನ್ನು ಹೊಗಳೋದ್ಯಾಕೆ?

Intresting fact about married men e Why married men appreciate to another married women

Married men: ಮದುವೆ ಒಂದು ಸುಂದರ ಬಾಂಧವ್ಯ ಎಂದು ಹೇಳಬಹುದು. ಮದುವೆಯ ನಂತರ ಹುಡುಗ ಹುಡುಗಿ ಇಬ್ಬರ ಜೀವನ ಕೂಡಾ ಸಂಪೂರ್ಣವಾಗಿ ಬದಲಾಗುತ್ತದೆ. ತಮಗಿರುವ ಕೆಲವೊಂದು ಅಭ್ಯಾಸಗಳನ್ನು ಸುಧಾರಿಸಿಕೊಳ್ಳುವ ಜೋಡಿಗಳು, ಕೆಲವೊಮ್ಮೆ ಜೀವನ ಸಂಗಾತಿಯನ್ನು ಅತೃಪ್ತಿ ಕೂಡಾ ಮಾಡುವ ಕಡೆ ಜಾರಬಹುದು. ಈ ಸಂದರ್ಭದಲ್ಲಿ ಅವರು ಮಾಡುವ ಪ್ರತಿಯೊಂದು ಕೆಲಸವೂ ಅವರಿಗೆ ತಪ್ಪಾಗಿ ಕಾಣಿಸುತ್ತದೆ.

 

ಹುಡುಗ ಅಥವಾ ಹುಡುಗಿ ಮದುವೆಯ ಮೊದಲು ತಮಗೆ ಬೇಕಾದ ಹಾಗೆ ಬದುಕುತ್ತಾರೆ. ಆದರೆ ಮದುವೆಯ ನಂತರ ತಮ್ಮ ಕೆಲವೊಂದು ಅಭ್ಯಾಸಗಳನ್ನು ಅವರು ಬದಲಾಯಿಸಲು ಪ್ರಯತ್ನ ಪಡುತ್ತಾರೆ. ಹಾಗೆ ಮಾಡುವಾಗ ಮದುವೆಯ ನಂತರ ಸ್ವಾತಂತ್ರ್ಯ ಇಲ್ಲವೇ ಎಂಬಂತೆ ಅನಿಸಲು ಶುರುವಾಗುತ್ತದೆ. ಇದಕ್ಕೆಲ್ಲ ಎಲ್ಲೋ ಒಂದು ಕಡೆ ಗಂಡ ತನ್ನ ಹೆಂಡತಿಯೇ ಇದಕ್ಕೆ ಮೂಲ ಕಾರಣ ಎಂಬ ಕಾರಣ ಹೇಳಬಹುದು. ಇದರ ನಂತರ ಆತ(Married men) ತನ್ನ ಹೆಂಡಿತಯನ್ನು ಬಿಟ್ಟು ಬೇರೆ ಮಹಿಳೆಯರತ್ರ ವಾಲಲು ಶುರು ಮಾಡುತ್ತಾನೆ. ಇದಕ್ಕೆ ಕಾರಣವೇನು? ಬನ್ನಿ ಇಲ್ಲಿ ತಿಳಿಯೋಣ.

ಪುರುಷರ ಮನಸ್ಸು ಚಂಚಲ. ಯಾವುದನ್ನಾದರೂ ಆತ ಆನಂದಿಸದಿದ್ದರೆ, ಆ ವಸ್ತು, ವಿಷಯದಿಂದ ದೂರ ಉಳಿಯಲು ಇಷ್ಟ ಪಡುತ್ತಾರೆ. ಆತ ವಿವಾಹಿತನಾದ ಮೇಲೆ ಈ ರೀತಿ ಎಲ್ಲ ಮಾಡಲು ಸಾಧ್ಯವಿದಲ್ಲ. ಯಾವಾಗ ಆತ ತನ್ನ ಪತ್ನಿಯ ಮೂಲಕ ನನಗೆ ಖುಷಿ ದೊರಕುತ್ತಿಲ್ಲ ಎಂದು ಭಾವಿಸುತ್ತಾನೋ ಆಗ ಆತ ತನ್ನ ಹೆಂಡತಿಯನ್ನು ಬಿಟ್ಟು ಇತರ ಮಹಿಳೆಯರತ್ತ ಆಕರ್ಷಣೆಗೊಳಗಾಗುತ್ತಾನೆ.

ಪತಿ ತನ್ನ ಮನಸ್ಸಿನಂತೆ ಬದುಕಲು ಬಯಸುತ್ತಾನೆ. ಆದರೆ ಹೆಂಡತಿ ಈ ವಿಷಯಗಳಿಗೆ ತಲೆ ಹಾಕಲು ಶುರುಮಾಡಿದಾಗ ಆತನಿಗೆ ಕಿರಿಕಿರಿ ಅನಿಸುತ್ತದೆ. ಪತಿ ಹೇಳಿದಾಗೆ ಕೇಳುವ ಹೆಂಡತಿಯನ್ನು ಗಂಡಸರು ಇಷ್ಟ ಪಡುತ್ತಾರೆ. ಅವನ ಸರಿ ತಪ್ಪು ಪ್ರಶ್ನಿಸಿದರೆ ಸಂಬಂಧದಲ್ಲಿ ನೆಮ್ಮದಿ ಇರೋದಿಲ್ಲ.

ಎಲ್ಲಾ ಗಂಡಸರು ತನ್ನ ಹೆಂಡತಿ ತನ್ನ ಇಷ್ಟ-ಕಷ್ಟ ತಿಳಿದುಕೊಳ್ಳಲಿ ಎಂದು ಆಸೆ ಪಡುತ್ತಾನೆ. ಆದರೆ ಯಾವಾಗ ಅದು ನಡೆಯುವುದಿಲ್ಲ ಎಂದು ಆತ ಭಾವಿಸುತ್ತಾನೋ ಆವಾಗ ಭಾವನಾತ್ಮಕವಾಗಿ ಅವಳಿಂದ ದೂರ ಇರಲು ಪ್ರಾರಂಭ ಮಾಡುತ್ತಾನೆ. ಇತರರ ಹೆಂಡತಿಯನ್ನು ನೋಡಿದಾಗ ಆತನಿಗೆ ಹೊಗಳಲು ಮನಸ್ಸಾಗುತ್ತದೆ.

ಇದನ್ನೂ ಓದಿ: ಇದು ಕೇವಲ ಕಲ್ಲಲ್ಲ! ಈ ಕಪ್ಪು ಕಲ್ಲಿನಿಂದ ರೈತನ ಅದೃಷ್ಟ ಖುಲಾಯಿಸಿತು! ಅಷ್ಟಕ್ಕೂ ಏನಿದು?

Comments are closed.