

Bihar: ಬಿಹಾರದಲ್ಲಿ (Bihar) ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಸಣ್ಣ ವಯಸ್ಸಿನಲ್ಲೇ ಸಾವಿನ(Death )ದವಡೆಗೆ ಮಗಳು ಸಿಲುಕಿದ ದುಃಖದಲ್ಲಿ ಇಡೀ ಕುಟುಂಬ ಮುಳುಗಿತ್ತು. ಆದ್ರೆ, ಮಗಳ(Daughter )ಅಂತ್ಯ ಸಂಸ್ಕಾರದ ಬಳಿಕ ಪೋಷಕರಿಗೆ ಕರೆಯೊಂದು ಬಂದಿದ್ದು, ಪಪ್ಪಾ ನಾನಿನ್ನು ಬದುಕಿದ್ದೇನೆ ಎಂಬ ಧ್ವನಿ ಕೇಳಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.
ಒಂದು ತಿಂಗಳ ಹಿಂದೆ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ ಯುವತಿ ಅಂಶು ಕುಮಾರಿ ನಾಪತ್ತೆಯಾಗಿದ್ದಾಳೆ. ಆಕೆಯ ಪತ್ತೆಗೆ ಪೋಷಕರು ತೀವ್ರ ಶೋಧ ಕಾರ್ಯ ನಡೆಸಿದರು ಕೂಡ ಆಕೆ ಎಲ್ಲಿದ್ದಾಳೆ ಎಂಬ ಮಾಹಿತಿ ತಿಳಿಯಲಿಲ್ಲ. ಮಾಹಿತಿಯ ಅನುಸಾರ, ಆಗಸ್ಟ್ 15 ರಂದು ದುಧ್ವಾ ಗ್ರಾಮದ ಕಾಲುವೆಯಲ್ಲಿ ತೇಲುತ್ತಿದ್ದ ಅಪರಿಚಿತ ಹುಡುಗಿಯ ಶವವನ್ನು ಪೊಲೀಸರು ವಶಪಡಿಸಿಕೊಂಡ ವಿಚಾರ ಆಂಶು ಪೋಷಕರಿಗೆ ಗೊತ್ತಾಗಿದೆ.
ಮೃತದೇಹದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿ, ಬಿಶನ್‌ಪುರದ ನಿವಾಸಿ ವಿನೋದ್ ಮಂಡಲ್ ಮೃತ ದೇಹವನ್ನು ತನ್ನ ಮಗಳು ಅಂಶು ಕುಮಾರಿ ಎಂದು ಗುರುತಿಸಿದ್ದು, ಹಲವು ದಿನಗಳ ಶವವಾಗಿದ್ದರಿಂದ ಆಕೆಯ ಮುಖ ತುಂಬಾ ವಿಕಾರ ರೂಪದಲ್ಲಿತ್ತು. ಅಂಶುವನ್ನು ಯಾರೋ ಕೊಂದು(Kill) ಶವವನ್ನು (Dead body)ಕಾಲುವೆಗೆ ಎಸೆಯಲಾಗಿದೆ ಎಂದು ಸಂಬಂಧಿಕರು ಅಂದುಕೊಂಡಿದ್ದಾರೆ. ಯುವತಿಯ ದೇಹದ ಮೇಲಿದ್ದ ಬಟ್ಟೆ ಮತ್ತು ಬೆರಳುಗಳ ಆಧಾರದ ಮೇರೆಗೆ ಸಂಬಂಧಿಕರು ಮೃತದೇಹವನ್ನು ಪತ್ತೆ ಹಚ್ಚಿ ಅಂತಿಮ ವಿಧಿ ವಿಧಾನಕ್ಕೆ ಒಲ್ಲದ ಮನದಲ್ಲೇ ತಯಾರಿ ನಡೆಸಿದ್ದಾರೆ. ಮಗಳ ಅಂತ್ಯಸಂಸ್ಕಾರದ ವೇಳೆ ವೀಡಿಯೋ ಕರೆ ಬಂದಿದ್ದು, ಪಪ್ಪಾ ನಾನಿನ್ನೂ ಬದುಕಿದ್ದೀನಿ’ ಎಂದಿತು ಆ ಧ್ವನಿ, ಹಾಗಾದರೆ ಇದ್ಯಾರು? ಎಂದು ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ.
ಅಂಶು ಕುಮಾರಿ ಮನೆಯಿಂದ ನಾಪತ್ತೆಯಾದ ಬಳಿಕ ತನ್ನ ಪ್ರಿಯಕರನನ್ನು ದೇವಸ್ಥಾನದಲ್ಲಿ ಮದುವೆಯಾಗಿ ತನ್ನ ಅತ್ತೆಯೊಂದಿಗೆ ನೆಲೆಸಿದ್ದಳು. ಆದರೆ, ತನ್ನ ಅಂತ್ಯಕ್ರಿಯೆಯ ಸುದ್ದಿ ಮಾಧ್ಯಮದಲ್ಲಿ ಬರುತ್ತಿದ್ದ ವಿಚಾರ ತಿಳಿದು ಅಂಶು ತನ್ನ ಮನೆಗೆ ವಿಡಿಯೋ ಕಾಲ್ ಮಾಡಿ ತಾನು ಬದುಕಿರುವುದಾಗಿ ತಂದೆಗೆ ತಿಳಿಸಿದ್ದಾಳೆ. ಮನೆಯವರ ಒಪ್ಪಿಗೆ ಇಲ್ಲದೇ ಮದುವೆಯಾಗಿರುವ ಭಯದಿಂದ ಕರೆ ಮಾಡದೇ ಮೌನ ವಹಿಸಿರುವುದಾಗಿ ಇದೆ ವೇಳೆ ಅಂಶು ಹೇಳಿಕೊಂಡಿದ್ದಾಳೆ. ಅಂಶು ಬದುಕುಳಿದಿರುವ ವಿಚಾರ ತಿಳಿದ ಮೇಲೆ, ಮೃತದೇಹ ಯಾರದ್ದು ಎಂಬ ಪ್ರಶ್ನೆ ಭುಗಿಲೆದ್ದಿದೆ. ದೇಹವನ್ನು ಗಮನಿಸಿದ ಸಂದರ್ಭ ಅತ್ಯಾಚಾರ ನಡೆಸಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ,ಪೊಲೀಸರು ಮೃತ ದೇಹ ಯಾರದ್ದು ಎಂಬುದನ್ನು ತಿಳಿಯುವ ಪ್ರಯತ್ನದಲ್ಲಿದ್ದಾರೆ.
ಇದನ್ನೂ ಓದಿ: ಸಿಹಿ ಸುದ್ದಿ! ಪ್ರಾದೇಶಿಕ ಭಾಷೆಗಳಲ್ಲಿ ಇನ್ನು ಮುಂದೆ ಕೇಂದ್ರ ಸರಕಾರಿ ನೇಮಕಾತಿ ಪರೀಕ್ಷೆ!













