B Y Raghavendra: ಅಡಿಕೆ ಬೆಳೆಗಾರರ ಜೊತೆ ಕೇಂದ್ರ ಸರಕಾರವಿದೆ – ಬಿ ವೈ ರಾಘವೇಂದ್ರ

Agriculture news Central Government stands with arecanut growers B Y Raghavendra

B Y Raghavendra: ವಾರ್ಷಿಕ ಬೆಳೆ ಆಗಿರುವ ಅಡಿಕೆ ಬೆಳೆಗೆ ಫಸಲು ಗಳಿಸುವ ಜೊತೆಗೆ ಅಡಿಕೆ ಬೆಳೆಗಾರರ ಶ್ರಮಕ್ಕೆ ತಕ್ಕ ಬೆಲೆ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿರುವ ಕುರಿತು ಸಂಸದ ಬಿ.ವೈ.ರಾಘವೇಂದ್ರ (B Y Raghavendra) ಹೇಳಿದ್ದಾರೆ. ರಾಜ್ಯ ಸರಕಾರ ಮಧ್ಯ‌ ಪ್ರವೇಶ ಮಾಡಬೇಕಾಗಿದ್ದು, ಶಿವಮೊಗ್ಗ ಜಿಲ್ಲೆ ಹಾಗೂ ಇಡೀ ರಾಜ್ಯವನ್ನು ಬರಗಾಲ ರಾಜ್ಯ ಎಂದು ಘೋಷಣೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

ಭೂತಾನ್ ನಿಂದ ಅಡಕೆ ಆಮದು ಮಾಡಿಕೊಳ್ಳುತ್ತಿರುವ ಕೇವಲ ಶೇ.2% ರಷ್ಟು ಮಾತ್ರ ಆಗುತ್ತಿದ್ದು , ಅಡಿಕೆ ದರ ಕಡಿಮೆ ಆಗುತ್ತದೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ. ಅಡಿಕೆ ದರ ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ. ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ನೆರವಿಗೆ ನಿಲ್ಲಲ್ಲಿದ್ದು, ರಾಜಕೀಯ ಪಕ್ಷಗಳು ಇಲ್ಲಸಲ್ಲದ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಅನೇಕ ಸಮಸ್ಯೆಯನ್ನು ರೈತರು ಅನುಭವಿಸುತ್ತಿದ್ದು, ಬರಗಾಲದ ಛಾಯೆ ರಾಜ್ಯದಲ್ಲಿ ಆವರಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 77 ಸಾವಿರ ಹೆಕ್ಟೇರ್ ಭತ್ತ ನಾಟಿ ಆಗುತ್ತಿದ್ದು, ಆದರೆ ಈ ಬಾರಿ‌ ಮಳೆ ಇಲ್ಲದ ಕಾರಣ 54 ಸಾವಿರ ಹೆಕ್ಟೇರ್ ಭತ್ತಯಿದೆ. ಈ ಬಾರಿ ಮುಂಗಾರು ಮಳೆ ಕೊರತೆಯಾಗಿರುವ ಹಿನ್ನೆಲೆ ರೈತರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಶೇ 36% ರಷ್ಟು ಮಳೆ ಇಳಿಕೆಯಿಂದ ಮಳೆಗಾಲದಲ್ಲಿ ಸರಾಸರಿ ಶೇ. 40% ರಷ್ಟು ಮಳೆ ಕೊರತೆಯಾಗಿದೆ. ಆದ್ರೆ, ಬೆಳೆಗೆ ಅಡಿಕೆ ಬೆಳೆಗೆ ಫಸಲು ಗಳಿಸುವ ಜೊತೆಗೆ ಅಡಿಕೆ ಬೆಳೆಗಾರರ ಶ್ರಮಕ್ಕೆ ತಕ್ಕ ಬೆಲೆ ಕೊಡುವುದರ ಕುರಿತು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Crime News: ಆಗಷ್ಟೇ ಭೂಮಿಗೆ ಬಂದ ಕಂದಮ್ಮಗಳನ್ನು ಭಯಾನಕವಾಗಿ ಕೊಲ್ಲುತ್ತಿದ್ದ ನರ್ಸ್‌! ಭಾರತೀಯ ವೈದ್ಯನಿಂದ ಹತ್ಯೆ ಸುಳಿವು!

Comments are closed.