Mysuru News: ಸೆ.10 ರಿಂದ ಚಾಮುಂಡಿ ಬೆಟ್ಟದಲ್ಲಿ ಹೊಸ ನಿಯಮ ಜಾರಿ: ಸ್ವಲ್ಪ ತಪ್ಪಿದರೂ ದುಬಾರಿ ದಂಡದಿಂದ ಜೇಬು ಖಾಲಿ

Mysuru News: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಸೆಪ್ಟೆಂಬರ್ 1 ರಿಂದ ಚಾಮುಂಡಿ ಬೆಟ್ಟದಲ್ಲಿ (Chamumdi Hill)ಈ ನಿಯಮಗಳನ್ನು ನೀವು ಪಾಲಿಸಲೇಬೇಕು.ಇಲ್ಲದಿದ್ದರೆ ದಂಡ ಪಾವತಿ ಮಾಡಬೇಕಾಗಬಹುದು ಎಚ್ಚರ!.

ಚಾಮುಂಡಿ ಬೆಟ್ಟದ ಪವಿತ್ರತೆ, ಬೆಟ್ಟದಲ್ಲಿರುವ ನೈಸರ್ಗಿಕ ಪರಿಸರವನ್ನ ಕಾಪಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಟ್ಟುನಿಟಿನ ಕ್ರಮ ಕೈಗೊಂಡಿರದ್ದು, ಸೆಪ್ಟೆಂಬರ್ 1 ರಿಂದ ದಂಡ ವಿಧಿಸಲು ಮುಂದಾಗಿದೆ.

ಹಸಿರೀಕರಣ ವಲಯವಾಗಿರುವ ಚಾಮುಂಡಿ ಬೆಟ್ಟ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿರುವ ಹಿನ್ನೆಲೆ ಅಲ್ಲಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹೀಗಾಗಿ, ಅರಣ್ಯ ಇಲಾಖೆ ಸುರಕ್ಷತೆಗೆ ದಕ್ಕೆ ತರುವವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದೆ. ಅರಣ್ಯ ಪ್ರದೇಶದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6:00 ವರೆಗೆ ಮದ್ಯ ಮತ್ತು ಇನ್ನಿತರ ಹಾನಿಕಾರಕ ವಸ್ತುಗಳನ್ನ ಸಾಗಿಸುವ ಜೊತೆಗೆ ಅರಣ್ಯ ಪ್ರದೇಶದಲ್ಲಿ ಸೇವಿಸಿದಲ್ಲಿ ಅಂತವರಿಗೆ 5,000 ದಂಡ ವಿಧಿಸಲಾಗುತ್ತದೆ. ಕರ್ನಾಟಕ ಅರಣ್ಯ ಕಾಯ್ದೆ 1969 ಕಾಲಂ 70 ಮತ್ತು 99(1) ರ ಅಡಿಯಲ್ಲಿ ಮೀಸಲು ಅರಣ್ಯ ಪ್ರದೇಶವಾದ ಚಾಮುಂಡಿ ಬೆಟ್ಟದ ಅರಣ್ಯ ಸುರಕ್ಷತೆ ಮತ್ತು ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಹೊಸ ಆದೇಶವನ್ನು ನೀಡಿದೆ.

ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದರೆ 500 ದಂಡ ವಿಧಿಸಲಾಗುತ್ತದೆ. ಅದೇ ರೀತಿ, ನಿರ್ಬಂಧಿಸಿದ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಿದ್ದಲ್ಲಿ ಒಂದು ಸಾವಿರ ರೂಪಾಯಿ ವಿಧಿಸಲಾಗುತ್ತದೆ. ಒಂದು ವೇಳೆ ಚಾಮುಂಡಿ ಬೆಟ್ಟದ ಸುತ್ತಮುತ್ತಲಿನ ಅಂಗಡಿಯವರು(Shops )ಚಾಮುಂಡಿ ಬೆಟ್ಟದಲ್ಲಿ ತ್ಯಾಜ್ಯವನ್ನು ಚೆಲ್ಲಿದರೆ 2,500 ದಂಡ ವಿಧಿಸಲಾಗುತ್ತದೆ. ಅದೇ ರೀತಿ ಮತ್ತೊಮ್ಮೆ ಎರಡನೇ ಬಾರಿ ಮತ್ತೆ ತ್ಯಾಜ್ಯ ಸುರಿದರೆ 5,000 ದಂಡ (Fine)ಮತ್ತು ಮೂರನೇ ಬಾರಿಗೆ 10 ಸಾವಿರ ರೂ. ದಂಡ ವಿಧಿಸಿ ಅಂಗಡಿಯ ಲೈಸೆನ್ಸ್ (shop licence)ಅನ್ನು ರದ್ದು ಮಾಡಲಾಗುತ್ತದೆ.

ಇಷ್ಟೇ ಅಲ್ಲದೆ, ಕಾಡುಪ್ರಾಣಿಗಳಿಗೆ ಆಹಾರ ತಿಂಡಿ ತಿನಿಸುಗಳನ್ನು ನೀಡಿದ್ದಲ್ಲಿ 1,000 ದಂಡ ವಿಧಿಸಲಾಗುವ ಕುರಿತು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.ಇದರ ಜೊತೆಗೆ, ಪ್ರವಾಸಿಗರು ಪ್ಲಾಸ್ಟಿಕ್ ಬಾಟಲ್ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಕಂಡುಬಂದರೆ 500 ದಂಡ ವಿಧಿಸಲಾಗಿತ್ತದೆ. ಹೀಗಾಗಿ, ಪ್ರವಾಸಿಗರು ಚಾಮುಂಡಿ ಬೆಟ್ಟದ ಸುತ್ತಮುತ್ತಲು ಭೇಟಿ ನೀಡಿದಾಗ ಮೇಲೆ ತಿಳಿಸಿದ ವಿಚಾರದ ಬಗ್ಗೆ ತಿಳಿದಿರುವುದು ಒಳ್ಳೆಯದು.ಇಲ್ಲ ಎಂದಾದರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಫಿಕ್ಸ್!

Comments are closed.