Indian Railways: ರೈಲು ಹಳಿಯ ಮೇಲೆ ಕಲ್ಲು, 35 ಕೆಜಿ ಕಬ್ಬಿಣದ ತುಂಡು ಇರಿಸಿ ಸಂಚು, ತಪ್ಪಿದ ಭಾರೀ ಅವಘಡ !

kerala news closet piece stone found near kasaragod railway track

Indian Railways ಕೇರಳದ( Kerala) ಕಾಸರಗೋಡು( Kasaragod) ಬಳಿ ರೈಲ್ವೆ ಹಳಿಯಲ್ಲಿ ಕಲ್ಲು ಹಾಗೂ ಕ್ಲೋಸೆಟ್‌ ತುಂಡು ಇರಿಸಲಾದ ಘಟನೆ ಬೆಳಕಿಗೆ ಬಂದಿದೆ.

 

ರೈಲು ಹಳಿಯಲ್ಲಿ ಕಲ್ಲು ಹಾಗೂ ಕ್ಲೋಸೆಟ್ ನ ತುಂಡುಗಳನ್ನು ಇರಿಸಿದ ಘಟನೆ ಕಾಸರಗೋಡಿನ ಕೋಟಿಕುಲಂನ ಚೆಂಬರಿಕ ಸುರಂಗ ಸಮೀಪ ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದವರು ಮಾಹಿತಿ ನೀಡಿದ ಬಳಿಕ ತೆಗೆದ ಹಾಕಲಾಗಿದ್ದು, ಇದರಿಂದ ಭಾರೀ ಅನಾಹುತವೊಂದು ತಪ್ಪಿದೆ.

ಕಾಸರಗೋಡಿನಿಂದ ಕೊಯಮತ್ತೂರು – ಮಂಗಳೂರು ಇಂಟರ್ ಸಿಟಿ( Coimbatore Mangalore Intercity Express) ಕಡೆಗೆ ಸಾಗುತ್ತಿದ್ದ ಎಕ್ಸ್ ಪ್ರೆಸ್ ರೈಲಿನ ಲೋಕೊ ಪೈಲಟ್ ಒಬ್ಬರಿಗೆ ರೈಲು ಹಾದು ಹೋಗುವ ಸಂದರ್ಭದಲ್ಲಿ ಏನೋ ಬಡಿದ ಶಬ್ದ ಕೇಳಿದೆ. ಇದರಿಂದ ಕಾಸರಗೋಡು ರೈಲ್ವೆ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ರೈಲ್ವೆ ಪೊಲೀಸರು ಹಾಗೂ ರೈಲ್ವೆ ಭದ್ರತಾ ಪಡೆ ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದ ಸಂದರ್ಭ ರೈಲ್ವೇ ಕಲ್ಲು ಹಾಗೂ ತುಂಡಾದ ಕ್ಲೋಸೆಟ್ ಪತ್ತೆಯಾಗಿದೆ.ಈ ಕುರಿತು ತನಿಖೆ ನಡೆಸಲಾಗುತ್ತಿದ್ದು,ಹತ್ತಿರದ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದು ವರದಿಯಾಗಿದೆ.

Comments are closed.