Google Banned Apps: 43 ಅಪ್ಲಿಕೇಶನ್‌ಗಳ ನಿಷೇಧಕ್ಕೆ ಗೂಗಲ್‌ನಿಂದ ಮಹತ್ವದ ನಿರ್ಧಾರ!!! ಈ ಅಪ್ಲಿಕೇಶನ್ ನಿಮ್ಮಲ್ಲಿದೆಯಾ ಚೆಕ್ ಮಾಡಿ
Google Banned Apps: ಮೊಬೈಲ್ ಎಂಬ ಮಾಯಾವಿ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಿ ಬಿಟ್ಟಿದೆ. ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿ ಮನೆಯಲ್ಲೇ ಕುಳಿತು ಅನೇಕ ಅಪ್ಲಿಕೇಷನ್ ಬಳಕೆ ಮಾಡಲು ಸಾಧ್ಯವಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಸರಿಯಾದ ಕ್ರಮದಲ್ಲಿ ಬಳಕೆ ಮಾಡಿದರೆ ಯಾವುದೇ ಸಮಸ್ಯೆ ಎದುರಾಗದು ಎಂಬುದು ಕೂಡ ಸತ್ಯವೇ!!
ಕೆಲವೊಮ್ಮೆ ನಮಗೆ ಅರಿವಿಲ್ಲದೆ ಕೆಲ ಅಪ್ಲಿಕೇಷನ್ ಗಳನ್ನ ನಾವು ಡೌನ್ಲೋಡ್ ಮಾಡಿಕೊಂಡಿರುತ್ತೇವೆ. ಇದರಿಂದ ಕ್ಷಣ ಮಾತ್ರದಲ್ಲಿ ನಮ್ಮ ವೈಯಕ್ತಿಕ ಮಾಹಿತಿಗಳು ಜೊತೆಗೆ ಹಣ ಕೂಡ ಖಾಲಿಯಾಗುವ ಸಂಭವವಿದೆ. ಹೀಗಾಗಿ, ಅಪ್ಲಿಕೇಷನ್ ಡೌನ್ಲೋಡ್ ಮಾಡುವಾಗ ಜಾಗ್ರತೆ ವಹಿಸುವುದು ಅಗತ್ಯ. ಆದರೆ, ಇದೀಗ, ಫೋನ್‌ನ ಬ್ಯಾಟರಿಗೆ ಮಾರಕವಾಗಿದ್ದ 43 ಅಪ್ಲಿಕೇಶನ್‌ಗಳನ್ನು ಗೂಗಲ್ (Google Banned Apps)ನಿಷೇಧಿಸಿದ್ದು, ಮ್ಯಾಕ್‌ಅಫೀಯ ಭದ್ರತಾ ತಂಡ ಇದನ್ನು ಪತ್ತೆ ಮಾಡಿದ್ದು, ನಿಷೇಧಿತ ಅಪ್ಲಿಕೇಶನ್‌ಗಳು ಫೋನ್‌ನ ಬ್ಯಾಟರಿಯನ್ನು ತ್ವರಿತವಾಗಿ ಖಾಲಿ ಮಾಡಿ ಬಿಡುತ್ತಿತ್ತು. ಮಾತ್ರವಲ್ಲದೆ, ಸ್ಕ್ರೀನ್ ಆಫ್ ಆದ ನಂತರ ಡೇಟಾ ಬಳಕೆ ಮಾಡುತ್ತಿತ್ತು ಎನ್ನಲಾಗಿದೆ.
ಗೂಗಲ್ ಏಕಾಏಕಿ 43 ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದು,ಈ ಅಪ್ಲಿಕೇಶನ್‌ಗಳು ಫೋನ್ ಹಿಂಬದಿಯಿಂದ ಜಾಹೀರಾತುಗಳನ್ನು ಪ್ರದರ್ಶಿಸುತ್ತಿತ್ತು ಎಂದು ಮ್ಯಾಕ್‌ಅಫೀಯ ಭದ್ರತಾ ತಂಡ ಗುರುತಿಸಿದೆ. ಗೂಗಲ್ ಬ್ಯಾನ್ (Google banned application)ಮಾಡಿರುವ 43 ಅಪ್ಲಿಕೇಶನ್‌ಗಳಲ್ಲಿ ಕೆಲವು ಅಪ್ಲಿಕೇಶನ್‌ಗಳು ಟಿವಿ ಪ್ಲೇಯರ್, ಸಂಗೀತ ಡೌನ್‌ಲೋಡರ್, ಸುದ್ದಿ ಮತ್ತು ಕ್ಯಾಲೆಂಡರ್ ಅಪ್ಲಿಕೇಶನ್‌ಗಳು ಎನ್ನಲಾಗಿದೆ. ಇದರ ಜೊತೆಗೆ ಗೂಗಲ್ ನಿಷೇಧಿತ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್ ನಲ್ಲಿ ಇದ್ದರೆ ಅವುಗಳನ್ನು ತಕ್ಷಣವೇ ಅನ್ ಇನ್ಸ್ಟಾಲ್ (Uninstall )ಮಾಡುವಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.
Comments are closed.