Crime News: ಬುರ್ಖಾದಾರಿಯಿಂದ ಮಹಿಳೆಯರ ಟಾಯ್ಲೆಟ್ ನಲ್ಲಿ ವಿಡಿಯೋ ರೆಕಾರ್ಡ್: ಟೆಕ್ಕಿಯನ್ನು ಹಿಡಿದು ಹಾಕಿದ ಸಿಬ್ಬಂದಿ

crime news kerala techie filming women washroom through hidden camera arrested

Kerala: ಕೇರಳದಲ್ಲಿ(Kerala )ಮಹಿಳೆಯರ ಶೌಚಾಲಯದಲ್ಲಿ(Ladies Toilet)ಟೆಕ್ಕಿಯೊಬ್ಬ ಬುರ್ಖಾ ಧರಿಸಿ ಶೌಚಾಲಯಕ್ಕೆ ಪ್ರವೇಶಿಸಿದ್ದಲ್ಲದೆ, ಮಹಿಳೆಯರ ವೀಡಿಯೋ ರೆಕಾರ್ಡ್ ಮಾಡಿರುವ ಘಟನೆ ನಡೆದಿದೆ.

ಕೇರಳದ ಕೊಚ್ಚಿಯಲ್ಲಿರುವ ಲುಲುಮಾಲ್ನಲ್ಲಿ ಈ ಘಟನೆ ನಡೆದಿದ್ದು, ಐಟಿ ಉದ್ಯೋಗಿಯಾದ ಅಭಿಮನ್ಯು(23) ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಮಹಿಳೆಯಂತೆ(Women )ನಟಿಸುತ್ತಾ ಬುರ್ಖಾ ಧರಿಸಿ ಲುಲುಮಾಲ್ಗೆ ಬಂದಿದ್ದ ಆರೋಪಿ, ಮಹಿಳೆಯರ ಶೌಚಾಯಲಕ್ಕೆ ತೆರಳಿ ವಿಡಿಯೋ ಚಿತ್ರೀಕರಣ (Video record)ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಪೊಲೀಸರ ಮಾಹಿತಿ ಅನುಸಾರ, ಕೊಚ್ಚಿಯ ಲುಲು ಮಾಲ್‌ನಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕೊಚ್ಚಿಯಲ್ಲಿ ಕೆಲಸ ಮಾಡುವ ರೊಬೊಟಿಕ್ಸ್ ಎಂಜಿನಿಯರಿಂಗ್ ಪದವೀಧರನಾದ ಆರೋಪಿ ಅಭಿಮನ್ಯು ಮಹಿಳೆಯಂತೆ ಬುರ್ಖಾ (Burqa) ಧರಿಸಿ ಮಹಿಳೆಯರ ವಾಶ್‌ರೂಮ್‌ನಲ್ಲಿ ವೀಡಿಯೊಗಳನ್ನು ಚಿತ್ರೀಕರಿಸುವಾಗ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ.

ಆತ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹೊರಬಂದಿದ್ದು, ಆರೋಪಿಯ ಚಲನವಲನ ಗಮನಿಸಿದ ಸಿಬ್ಬಂದಿಗೆ ಅನುಮಾನ ಬಂದು ಮಾಲ್ನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೊಚ್ಚಿ ಪೊಲೀಸರು ಅಭಿಮನ್ಯುವನ್ನು ಬಂಧಿಸಿದ್ದಾರೆ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯದಿಂದ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಆರೋಪಿಯ ಫೋನ್ ಮತ್ತು ಅಪರಾಧ ಮಾಡಲು ಬಳಕೆ ಮಾಡಿದ ಬುರ್ಖಾವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Comments are closed.