Government Employees : ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ; ಹಬ್ಬದ ಹಿನ್ನೆಲೆ ಇವರಿಗೆಲ್ಲ ಸಿಗಲಿದೆ ಮುಂಗಡ ವೇತನ & ಪಿಂಚಣಿ !!

central government employees good news pension and salary details

Government Employees: ಈ ಬಾರಿ ಸಾಲು ಸಾಲು ಹಬ್ಬಗಳು (Festival) ಇವೆ. ಈ ಹಿನ್ನೆಲೆ ಸರ್ಕಾರ (government) ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರಿ ನೌಕರರಿಗೆ ಎರಡು ರಾಜ್ಯ ಸರ್ಕಾರಗಳು ಸಿಹಿಸುದ್ಧಿ (Good News For Government Employees) ನೀಡಿದೆ. ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರವು ಉದ್ಯೋಗಿಗಳಿಗೆ (Government Employees) ಮುಂಗಡ ವೇತನ ಮತ್ತು ಪಿಂಚಣಿ ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

 

ಓಣಂ (onam) ಮತ್ತು ವಿನಾಯಕ ಚತುರ್ಥಿ (Ganesha chaturthi) ಹಬ್ಬಗಳ ಹಿನ್ನೆಲೆಯಲ್ಲಿ ಈ ಬಾರಿ ವೇತನವನ್ನು ಮೊದಲೇ ಬಿಡುಗಡೆ ಮಾಡಲು ರಾಜ್ಯ ಸರ್ಕಾರಗಳು ನಿರ್ಧರಿಸಿವೆ ಎಂದು ವರದಿಯಾಗಿದೆ. ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಎಲ್ಲಾ ಉದ್ಯೋಗಿಗಳ ವೇತನವನ್ನು ಮುಂಗಡವಾಗಿ ಕೇಳಲಾಗಿದೆ. ಜೊತೆಗೆ ಓಣಂ ಹಬ್ಬದ ಸಂದರ್ಭದಲ್ಲಿ 4 ಸಾವಿರ ಮುಂಗಡ ಹಣ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

ಕೇರಳದ (Kerala) ಉದ್ಯೋಗಿಗಳಿಗೆ ಆಗಸ್ಟ್ 25ರಂದು ಹಣ ವರ್ಗಾವಣೆಯಾಗಲಿದೆ. ಮಹಾರಾಷ್ಟ್ರ (maharastra) ನೌಕರರ ಖಾತೆಗೆ ಸೆ. 27ರಂದು ಹಣ ವರ್ಗಾವಣೆಯಾಗಲಿದೆ ಎಂದು ವರದಿಯಾಗಿದೆ. ಕೇರಳದ ಎಲ್ಲಾ ಕೇಂದ್ರ ಪಿಂಚಣಿದಾರರ ಪಿಂಚಣಿಯನ್ನು ಪಿಎಒ ಮೂಲಕ ರವಾನೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಹಬ್ಬದ ಪ್ರಯುಕ್ತ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ನೌಕರರಲ್ಲಿ ಸಂತಸ ಉಂಟುಮಾಡಿದೆ.

Comments are closed.