ATM Pin Number: ATM ಪಿನ್ ನಂಬರ್ 4 ಅಂಕೆಯದ್ದು ಯಾಕಾಗಿರುತ್ತೆ ? ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ !

TM Pin Number: ಸದ್ಯ ಎಟಿಎಂ (ATM) ಇಲ್ಲದಿರುವವರು ಯಾರೂ ಇರಲಿಕ್ಕಿಲ್ಲ. ಹೋದ ಕಡೆಯೆಲ್ಲಾ ಹಣ ತೆಗೆದುಕೊಂಡು ಹೋಗುವ ಬದಲು ಎಟಿಎಂ ಕಾರ್ಡ್ ಇದ್ದರೆ ಬಹಳ ಅನುಕೂಲವಾಗುತ್ತದೆ. ಹಾಗಾಗಿ ಎಲ್ಲರೂ ಎಟಿಎಮ್ ಅನ್ನೇ ಬಳಸುತ್ತಾರೆ. ಅಂದಹಾಗೆ ಹಣ ತೆಗೆಯಲು ಎಟಿಎಂ ಕಾರ್ಡ್ ಅನ್ನು ಬಳಸುವಾಗ ಪಿನ್ ಸಂಖ್ಯೆ ಕೇಳುತ್ತದೆ. ಆ ಪಿನ್ (ATM Pin Number) ನಾಲ್ಕು ಸಂಖ್ಯೆಯದಾಗಿರುತ್ತದೆ. ನಿಮಗೆ ಗೊತ್ತಾ? ಪಿನ್ ಯಾಕೆ ನಾಲ್ಕು ಸಂಖ್ಯೆ ಆಗಿರುತ್ತದೆ ಎಂದು!!!. ಇಲ್ಲಿದೆ ಇಂಟ್ರೆಸ್ಟಿಂಗ್​ ಮಾಹಿತಿ.

 

ಮೊದಲಿಗೆ ATM ಪಿನ್ 6 ಸಂಖ್ಯೆಗಳನ್ನು ಹೊಂದಿತ್ತಂತೆ. ಆದರೆ, 6 ಸಂಖ್ಯೆ ಉದ್ದ ಇರುವ ಕಾರಣವೇನೋ ಹಲವಾರು ಜನರು ಈ ನಂಬರ್​ ಮರೆತು ಹೋಗುತ್ತಿದ್ದರು. ಪಿನ್ ನಂಬರ್ ಸಿಕ್ರೆಟ್ ಆಗಿರೋದು ಬೇರೆಯವರಿಗೆ ಗೊತ್ತಾಗೋ ಹಾಗಿಲ್ಲ ಹಾಗಾಗಿ ಎಲ್ಲೂ ಬರೆದಿಡುವ ಹಾಗಿಲ್ಲ. ಪಿನ್ ಮರೆತು ಹೋಗುತ್ತದೆ ಎಂಬ ದೂರು ಬಂದ ಹಿನ್ನೆಲೆ 6 ನಂಬರ್ ಇದ್ದ ಪಿನ್ 4 ಕ್ಕೆ ಮಾಡಲಾಯಿತು.

ಅಂದಹಾಗೆ, ಎಟಿಎಂ (ATM) ಅಥವಾ ಅಟೋಮ್ಯಾಟಿಕ್ ಟೆಲ್ಲರ್ ಮೆಷಿನ್ ಅನ್ನು ಸ್ಕಾಟ್ಲೆಂಡ್ (Scotlad) ವಿಜ್ಞಾನಿ ಜಾನ್ ಅಡ್ರಿಯನ್ ಶೆಫರ್ಡ್ ಬರ್ರನ್ (John Adrian Shepherd Barron) 1969ರಲ್ಲಿ ಅನ್ವೇಷಿಸಿದ್ದಾರೆ. ಪ್ರಾರಂಭದಲ್ಲಿ ಈ ಮೆಷಿನ್ ಗೆ ಕೋಡಿಂಗ್ (Coding) ವ್ಯವಸ್ಥೆ ಅಳವಡಿಸುವ ಸಮಯದಲ್ಲಿ ಜಾನ್ 6 ಅಂಕೆಗಳನ್ನು ಬಳಸಲು ಬಯಸಿದ್ದರು. ಜಾನ್ ತಮ್ಮ ಪತ್ನಿ ಕರೋಲಿನ್ (Caroline) ಕೈಗೆ ಎಟಿಎಂ ಕಾರ್ಡ್ ಕೊಟ್ಟು ಬಳಸುವಂತೆ ತಿಳಿಸಿ ಆಕೆಯನ್ನು ಪರೀಕ್ಷಿಸಿದರು . ಆದ್ರೆ ಕರೋಲಿನ್ ಗೆ ಆರು ಸಂಖ್ಯೆಗಳ ಪಿನ್ ನಲ್ಲಿ ಎರಡು ಸಂಖ್ಯೆಗಳು ಪದೇಪದೆ ಮರೆತು ಹೋಗುತ್ತಿದ್ದವು. ಹೀಗಾಗಿ ಆಕೆ ಬರೀ 4 ಸಂಖ್ಯೆಗಳನ್ನಷ್ಟೇ ನೆನಪಿಟ್ಟುಕೊಳ್ಳುತ್ತಿದ್ದಳು. ಈ ಕಾರಣದಿಂದಾಗಿಯೂ ಎಟಿಎಂ ಪಿನ್ ನಾಲ್ಕು ಸಂಖ್ಯೆಯದ್ದಾಗಿದೆ.

Comments are closed.