Home Interesting New Research: ಮಾನವನ ಪ್ರಾಣ ಉಳಿಸಿದ ಹಂದಿ: ವೈದ್ಯ ಲೋಕದಲ್ಲಿ ಒಂದು ಬೆರಗಿನ ಬೆಳವಣಿಗೆ!

New Research: ಮಾನವನ ಪ್ರಾಣ ಉಳಿಸಿದ ಹಂದಿ: ವೈದ್ಯ ಲೋಕದಲ್ಲಿ ಒಂದು ಬೆರಗಿನ ಬೆಳವಣಿಗೆ!

New Research
Image source: Nnyulaanone.com

Hindu neighbor gifts plot of land

Hindu neighbour gifts land to Muslim journalist

New Research: ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗಿ ಅನೇಕ ಮಾರಕ ರೋಗಗಳಿಗೆ ಔಷಧಗಳನ್ನು ಕಂಡುಹಿಡಿಯಲಾಗಿದ್ದು, ಈ ಮೂಲಕ ವಿಜ್ಞಾನ (Science)ಮತ್ತು ವೈದ್ಯಕೀಯ ಲೋಕದಲ್ಲಿ ಅಚ್ಚರಿಯ(New Research) ಬೆಳವಣಿಗೆ ಆಗಿರುವುದು ಗೊತ್ತಿರುವ ಸಂಗತಿ. ಇದೀಗ, ಅಂಗಾಂಗ ಕಸಿ ಮಾಡುವಿಕೆಯ ಹೊಸ ಅಧ್ಯಾಯಕ್ಕೆ ವೈದ್ಯಲೋಕ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಹಂದಿಯ ಮೂತ್ರಪಿಂಡವನ್ನು ಮೆದುಳು-ಸತ್ತ ರೋಗಿಗೆ ಕಸಿ ಮಾಡಿ, ಒಂದು ತಿಂಗಳವರೆಗೆ ಸಾಮಾನ್ಯವಾಗಿ ಕಾರ್ಯನಿರ್ವಹಿಸಿದ್ದು ಇದೊಂದು ಹೊಸ ದಾಖಲೆಗೆ ಮುನ್ನುಡಿ ಬರೆದಿದೆ. ಹೌದು!! ನ್ಯೂಯಾರ್ಕ್ ತಂಡ ಜೀವಂತ ರೋಗಿಯಲ್ಲಿ ಹಂದಿ ಮೂತ್ರಪಿಂಡವನ್ನು ಅಳವಡಿಸುವತ್ತ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ದೀರ್ಘಕಾಲದವರೆಗೆ ಮಾನವ ಜೀವಗಳನ್ನು ಉಳಿಸಲು ಪ್ರಾಣಿಗಳ ಅಂಗಗಳನ್ನು ಹೇಗೆ ಬಳಕೆ ಮಾಡುವುದು ಎಂಬುದನ್ನು ತಿಳಿಯಲು ನಾನಾ ಬಗೆಯ ಪ್ರಯೋಗಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪ್ರಾಣಿಗಳ ಅಂಗಾಂಗಗಳನ್ನು ರೋಗಿಗಳಿಗೆ ಅಳವಡಿಸಿ ಈ ಪ್ರಯತ್ನದಲ್ಲಿ ಯಶ ಕಂಡಿದ್ದಾರೆ ಎನ್ನಲಾಗಿದೆ.

ಪ್ರಾಣಿಗಳ ಅಂಗಗಳನ್ನು ಮನುಷ್ಯರಿಗೆ ಅಳವಡಿಸುವ ಕುರಿತು ಸಂಶೋಧನೆಯ ಭಾಗವಾಗಿ, ನ್ಯೂಯಾರ್ಕ್‌ನ ಎನ್‌ವೈಯು ಲಾಂಗನ್ ಆರೋಗ್ಯ ಕೇಂದ್ರದ ವಿಜ್ಞಾನಿಗಳು ಹೊಸ ಪ್ರಯೋಗವನ್ನು ನಡೆಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಅಂಗಾಂಗ ಕಸಿ ಸಾಮಾನ್ಯ ವಿಚಾರ ಆಗಿದ್ದರೂ ಕೂಡ ಮಾನವರಿಂದ ಅಂಗಾಂಗ ಕೊರತೆಯ ಹಿನ್ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ವಿಜ್ಞಾನಿಗಳು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಈ ಪ್ರಯತ್ನದಲ್ಲಿ ನ್ಯೂಯಾರ್ಕ್ ವಿಜ್ಞಾನಿಗಳು ಇತ್ತೀಚೆಗೆ ಹಂದಿ ಮೂತ್ರಪಿಂಡವನ್ನು ಮಾನವ ದೇಹಕ್ಕೆ ಅಳವಡಿಸಿದ್ದು, ಈ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ವಿಜ್ಞಾನಿಗಳು (Scientists)ಬಹಿರಂಗಪಡಿಸಿದ್ದಾರೆ.

ನ್ಯೂಯಾರ್ಕ್‌ನ ಅಪ್‌ಸ್ಟೇಟ್‌ನಿಂದ ಮಾರಿಸ್ ಮಿಲ್ಲರ್ 57 ನೇ ವಯಸ್ಸಿನಲ್ಲಿ ಮಾರಿಸ್ ಮಿಲ್ಲರ್ ಮೆದುಳಿನ ಕ್ಯಾನ್ಸರ್ ಮೂಲಕ ನಿಧನರಾಗಿದ್ದಾರೆ. ನ್ಯೂಯಾರ್ಕ್‌ನಲ್ಲಿ ಮೆದುಳು ಸತ್ತ ವ್ಯಕ್ತಿಗೆ ಕಸಿ ಮಾಡಲು ಹಂದಿಯ ಮೂತ್ರಪಿಂಡವನ್ನು ಅಳವಡಿಸಲಾಗಿ, ಸತತ ಒಂದು ತಿಂಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವುದು ಕಂಡುಬಂದಿದೆ.

ಕಳೆದ ವರ್ಷ ನಿಯಂತ್ರಕರಿಂದ ವಿಶೇಷ ಅನುಮತಿಯೊಂದಿಗೆ, ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ಶಸ್ತ್ರಚಿಕಿತ್ಸಕರು ಜೀನ್-ಸಂಪಾದಿತ ಹಂದಿ ಹೃದಯವನ್ನು ಇತರ ಆಯ್ಕೆಯಿಲ್ಲದೆ ಸಾಯುತ್ತಿರುವ ಮನುಷ್ಯನಿಗೆ ಕಸಿ ಮಾಡಿಸಿದ್ದಾರೆ. ಆ ಬಳಿಕ ಅವರು ಎರಡು ತಿಂಗಳು ಅವರು ಬದುಕುಳಿದರು ಎನ್ನಲಾಗಿದೆ.ಹಂದಿ ಮೂತ್ರಪಿಂಡವು ಸಾಮಾನ್ಯವಾಗಿ ಮಾನವ ದೇಹದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದು, ಹಂದಿಯಿಂದ ಒಂದೇ ಮೂತ್ರಪಿಂಡದಿಂದ ಬದಲಾಯಿಸಿದ ಪರಿಣಾಮ ಅದು ತಕ್ಷಣವೇ ಮೂತ್ರವನ್ನು ಉತ್ಪಾದಿಸಲು ಪ್ರಾರಂಭಿಸಿತಂತೆ. ಈ ಪ್ರಯತ್ನಗಳು ಅಂಗಗಳ ಕೊರತೆಯನ್ನು ನೀಗಿಸಲು ಭರವಸೆ ನೀಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Postal Circle Driver Recruitment: ಕರ್ನಾಟಕ ಅಂಚೆಯಲ್ಲಿ ಉದ್ಯೋಗವಕಾಶ! ಸೆ.15 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ!