Gruhalakshmi Scheme: ಗೃಹ ಲಕ್ಷ್ಮಿಯರಿಗೆ ಗುಡ್ ನ್ಯೂಸ್: 2000 ಗ್ಯಾರಂಟಿಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಇಲ್ವಾ ? ಇಲ್ಲಿದೆ ನೋಡಿ ಸಚಿವೆ ಕೊಟ್ಟ ಬಿಗ್ ಅಪ್ಡೇಟ್ !!

Gruhalakshmi scheme update no ration card required to apply for gruhalakshmi just do this

Gruhalakshmi Scheme: ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರಕಾರವು ‘ಗೃಹಲಕ್ಷ್ಮಿ’ ಯೋಜನೆ (Gruhalakshmi Scheme) ಆರಂಭಿಸಿದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ಸಿಗುತ್ತದೆ. ಇದೀಗ ಗೃಹ ಲಕ್ಷ್ಮಿಯರಿಗೆ ಗುಡ್ ನ್ಯೂಸ್ ಇಲ್ಲಿದೆ. ನಿಮ್ಮ ಬಳಿ 2000 ಗ್ಯಾರಂಟಿಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಇಲ್ವಾ ? ಇಲ್ಲಿದೆ ನೋಡಿ ಈ ಬಗ್ಗೆ ಸಚಿವೆ ಕೊಟ್ಟ ಬಿಗ್ ಅಪ್ಡೇಟ್ !!!

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿ 2,000ರೂ. ಗಳನ್ನು ಪಡೆದುಕೊಳ್ಳಬೇಕಾದರೆ ರೇಷನ್ ಕಾರ್ಡ್ (Ration Card) ಹೊಂದಿರುವುದು ಕಡ್ಡಾಯ. ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ಮನೆ ಯಜಮಾನಿ ಹೆಸರಿನಲ್ಲಿ ಇರಬೇಕು. ಇನ್ನೆನು ಗೃಹಲಕ್ಷ್ಮೀ ಯೋಜನೆ ಚಾಲನೆಯಾಗುವ ಸಮಯ ಹತ್ತಿರದಲ್ಲೇ ಇದೆ.
ಹಾಗಾದ್ರೆ ರೇಷನ್ ಕಾರ್ಡ್ ಹೊಂದಿಲ್ಲ ಅಥವಾ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ, ಮಿಸ್ಟೇಕ್ ಇದ್ದು ಯೋಜನೆ ಅರ್ಜಿ ಸಲ್ಲಿಸಲು ಆಗದವರು ಹೇಗೆ ಯೋಜನೆಯ ಪ್ರಯೋಜನ ಪಡೇಯೋದು ?

ರೇಷನ್ ಕಾರ್ಡ್ ಇಲ್ಲದವರು ‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ
ಸಲ್ಲಿಸಲು ಏನು ಮಾಡಬೇಕು ಗೊತ್ತಾ? ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಲ್ಲ, ಇದು ನಿರಂತರ ಪ್ರಕ್ರಿಯೆ ಆಗಿರುವುದರಿಂದ ಯಾರೆಲ್ಲಾ ರೇಷನ್ ಕಾರ್ಡ್ ಹೊಂದಿಲ್ಲ ಅಥವಾ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ, ಮಿಸ್ಟೇಕ್ ಇರುವ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲಾಗುತ್ತಿಲ್ಲ ಅವರೆಲ್ಲ ಇದನ್ನು ಸರಿಪಡಿಸಿಕೊಂಡ ನಂತರ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ. ರೇಷನ್ ಕಾರ್ಡ್ ಇಲ್ಲದವರು ಹೊಸದಾಗಿ ಮಾಡಿಸಿಕೊಂಡು ಅರ್ಜಿ ಸಲ್ಲಿಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದ.ಕ: ಬಾವಿಗೆ ಹಾರಿ ನವವಿವಾಹಿತ ಆತ್ಮಹತ್ಯೆ!!

Comments are closed.