Indian Coast Guard Recruitment 2023: ನೀವು SSLC ಪಾಸಾಗಿದ್ದೀರಾ? ಹಾಗಾದರೆ ನಿಮಗಿದೋ ಕೋಸ್ಟ್‌ ಗಾರ್ಡ್‌ನಲ್ಲಿ ಉದ್ಯೋಗಾವಕಾಶ! ಹೆಚ್ಚಿನ ಮಾಹಿತಿ ಇಲ್ಲಿದೆ

Central Government job news Indian Coast Guard Recruitment 2023 here is detail

Indian Coast Guard Recruitment 2023: ಉದ್ಯೋಗಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಇಂಡಿಯನ್ ಕೋಸ್ಟ್ ಗಾರ್ಡ್(Indian Coast Guard Recruitment) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಂತೆ ಮಾಹಿತಿ ತಿಳಿದಿರುವುದು ಅವಶ್ಯಕ.

ಅರ್ಜಿ ಸಲ್ಲಿಕೆಗೆ 05.08.2023 ಆರಂಭಿಕ ದಿನವಾಗಿದ್ದು, ಸೆಪ್ಟೆಂಬರ್ 18, 2023 ಕೊನೆಯ ದಿನವಾಗಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ಸಂಸ್ಥೆಯು (Indian Coast Guard Recruitment 2023)ಲಾಸ್ಕರ್, ಎಂಜಿನ್ ಡ್ರೈವರ್, ಮಲ್ಟಿ ಟಾಸ್ಕಿಂಗ್ 17 ಹುದ್ದೆಗಳು ಖಾಲಿಯಿದ್ದು, ಆಸಕ್ತರು ಸೆಪ್ಟೆಂಬರ್ 18, 2023 ರ ಮೊದಲು ಅರ್ಜಿ ಸಲ್ಲಿಸುವುದು ಉತ್ತಮ.

ಹುದ್ದೆಯ ಮಾಹಿತಿ:
ಸಿವಿಲಿಯನ್ ಮೋಟಾರ್ ಟ್ರಾನ್ಸ್ಪೋರ್ಟ್ ಡ್ರೈವರ್- 2
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಮಾಲಿ)-1
ಎಂಜಿನ್ ಡ್ರೈವರ್- 5
ಲಾಸ್ಕರ್- 7
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಪಿಯೋನ್)- 2

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳ ಜೊತೆಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.
ವಿಳಾಸ:
ಕಮಾಂಡರ್
ಹೆಡ್‌ಕ್ವಾರ್ಟರ್ಸ್
ಕೋಸ್ಟ್ ಗಾರ್ಡ್ ಪ್ರದೇಶ (ವಾಯವ್ಯ)
ಪೋಸ್ಟ್ ಬಾಕ್ಸ್ ನಂ.-09
ಸೆಕ್ಟರ್-11
ಗಾಂಧಿನಗರ
ಗುಜರಾತ್-382010

ಅರ್ಹತಾ ಮಾನದಂಡಗಳು ಹೀಗಿವೆ:
ಇಂಡಿಯನ್ ಕೋಸ್ಟ್ ಗಾರ್ಡ್ ನೇಮಕಾತಿ ಅಧಿಸೂಚನೆಯ ಅನುಸಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿಯನ್ನು ಮುಗಿಸಿರಬೇಕು.ವಯೋಮಿತಿ ಗಮನಿಸಿದರೆ, ಸಿವಿಲಿಯನ್ ಮೋಟಾರ್ ಟ್ರಾನ್ಸ್ಪೋರ್ಟ್ ಡ್ರೈವರ್- 18 ರಿಂದ 27 ವರ್ಷ ವಯೋಮಿತಿ ಆಗಿದ್ದು, ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಮಾಲಿ)- 18 ರಿಂದ 27 ವರ್ಷ ಆಗಿರಬೇಕು. ಎಂಜಿನ್ ಡ್ರೈವರ್- 18 ರಿಂದ 30 ವರ್ಷ ಆಗಿದ್ದು, ಲಾಸ್ಕರ್- 18 ರಿಂದ 30 ವರ್ಷ ಆಗಿರಬೇಕು.ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಪಿಯೋನ್)- 18 ರಿಂದ 27 ವರ್ಷ ಆಗಿರಬೇಕು.

ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರಲಿದ್ದು,SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ. ಈ ಹುದ್ದೆಗೆ ಲಿಖಿತ ಪರೀಕ್ಷೆ,ದಾಖಲಾತಿ ಪರಿಶೀಲನೆ, ಟ್ರೇಡ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ವೇತನದ ಬಗ್ಗೆ ಮಾಹಿತಿ ಶೀಘ್ರದಲ್ಲೇ ನೀಡಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.

ಇದನ್ನೂ ಓದಿ : Sanitary Napkins: ಕರ್ನಾಟಕದ ಹುಡುಗಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್: ಈ ಯೋಜನೆಗೆ ಯಾರು ಅರ್ಹರು ಗೊತ್ತಾ ?

Comments are closed.