RTI ನಿರ್ವಹಣೆ ಬಗ್ಗೆ ಬಂದಿದೆ ಹೊಸ ಸುತ್ತೋಲೆ: ಇನ್ನು ಮಾಹಿತಿ ಕೇಳೋದು ಮತ್ತಷ್ಟು ಸುಲಭ
RTI rule Karnataka government Implementation of right to information Act Karnataka government circular
RTI Rules: ಕರ್ನಾಟಕ ಸರ್ಕಾರದ ಖಜಾನೆ ಆಯುಕ್ತರು ಬೆಂಗಳೂರು ಕಾರ್ಯಾಲಯ ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರ ಅಧಿಕಾರಿಗಳಿಗೆ ಮಾಹಿತಿ ಅಧಿನಿಯಮ 2005ರ ಸಮರ್ಪಕ ನಿರ್ವಹಣೆ ಕುರಿತು ಸುತ್ತೋಲೆ ಹೊರಡಿಸಲಾಗಿದೆ.
ಮಾನ್ಯ ರಾಜ್ಯ ಮುಖ್ಯ ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗ, ಇವರ ಅಧ್ಯಕ್ಷತೆಯಲ್ಲಿ ದಿನಾಂಕ 4/5/2023 ರಂದು ನಡೆದ ಸಭೆಯ ತೀರ್ಮಾನದಲ್ಲಿ, ಸರ್ಕಾರದ ಸುತ್ತೋಲೆ 19/7/2023 ರಲ್ಲಿ ಉಲ್ಲೇಖಿಸಲಾಗಿದೆ.
ಆರ್‌ಟಿಐ ಕಾರ್ಯಕರ್ತರ ವಿರುದ್ಧ ಸಿಡಿದೆದ್ದ ಭೂಮಿ ರೈತರು ಸುತ್ತೋಲೆಯಲ್ಲಿ (RTI Rules) ಸೂಚಿಸಿರುವಂತೆ ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರಾಧಿಕಾರಿಗಳು ಸರ್ಕಾರದ ಎಲ್ಲಾ ಇಲಾಖೆಗಳು ಇವುಗಳನ್ನು ಪಾಲಿಸುತ್ತಿರುವ ಬಗ್ಗೆ ಇಲಾಖೆಗಳ ಮುಖ್ಯಸ್ಥರು/ ಕಾರ್ಯದರ್ಶಿಗಳು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಈಗಾಗಲೇ 4/5/2023ರಂದು ನಡೆದ ಸಭೆಯ ತೀರ್ಮಾನಗಳಂತೆ ಮಾಹಿತಿ ಹಕ್ಕು ಅಧಿನಿಯಮ 2005 ರಲ್ಲಿ ಸೂಚಿಸಲಾದ ಕರ್ತವ್ಯಗಳನ್ನು ಸಾರ್ವಜನಿಕ ಅಧಿಕಾರಿಗಳು ಸರಿಯಾಗಿ ನಿರ್ವಹಿಸದೆ ಇರುವುದನ್ನು ಗಮನಿಸಿದ ಕರ್ನಾಟಕ ಮಾಹಿತಿ ಆಯೋಗವು ರಾಜ್ಯ ಮುಖ್ಯ ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗ, ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲು ಈ ಕೆಳಕಂಡ ಸೂಚನೆಗಳನ್ನು ನಿರ್ವಹಿಸಲು ಕಟ್ಟುನಿಟ್ಟಾಗಿ ರೂಪಿಸಲಾಗಿದೆ.
ರಾಜ್ಯದಲ್ಲಿ ಎಲ್ಲಾ ಪ್ರಥಮ ಮೇಲ್ಮನವಿ ಪ್ರಾಧಿಕಾರಗಳು ಮಾಹಿತಿ ಹಕ್ಕು ಅಧಿನಿಯಮ 2005ರ ಕಲಾಂ 19(1)ರ ಪ್ರದತ್ತವಾಗಿರುವ ಶಾಸನಬದ್ಧ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವುದು.
ಎಲ್ಲಾ ಇಲಾಖೆಗಳು ತಮ್ಮ ಕಛೇರಿ ವ್ಯಾಪ್ತಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪಥಮ ಮೇಲ್ಮನವಿ ಪ್ರಾಧಿಕಾರಗಳ ವಿವರಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಆಯಾ ಇಲಾಖೆಗಳ ಜಾಲತಾಣದಲ್ಲಿ ಕಾಲಕಾಲಕ್ಕೆ ನಿರ್ವಹಣೆ ಮಾಡುವಂತೆ ಇಲಾಖಾ ಅಧ್ಯಕ್ಷರು ಪ್ರಕಟಿಸಿದರು.
ಪ್ರತಿ ಸಾರ್ವಜನಿಕ ಪ್ರಾಧಿಕಾರವು, ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ-6(1) ಮತ್ತು 19(1)ರಡಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಗಳ ನಾಮನಿರ್ದೇಶನ ಮಾಡಿ ಪ್ರಕಟಣೆ/ಅಧಿಸೂಚನೆ ಪ್ರತಿಯನ್ನು ಕಡ್ಡಾಯವಾಗಿ ಕರ್ನಾಟಕ ಮಾಹಿತಿ ಆಯೋಗಕ್ಕೆ ಇಲಾಖಾ ಮುಖ್ಯಸ್ಥರು ಸಲ್ಲಿಸುವುದು.
ಯಾವ ಕಛೇರಿಯಲ್ಲಿ ಅಂಕಿತ ದರ್ಜೆಯ ಅಧಿಕಾರಿ ಲಭ್ಯವಿರುತ್ತದೆಯೋ ಅಂತಹ ಕಚೇರಿಗಳಲ್ಲಿ ಒಬ್ಬ ಜವಾಬ್ದಾರಿಯುತ ಅಧಿಕಾರಿ/ ಸಿಬ್ಬಂದಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ನೇಮಕ ಮಾಡುವುದು.
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗಳೇ , ವಿದ್ಯಾರ್ಥಿವೇತನ ಪಡೀಬೇಕಾ? ಇಲ್ಲಿದೆ ನೋಡಿ ಅಂಥ 3 ಅವಕಾಶ
Comments are closed.