Sanitary Napkins: ಕರ್ನಾಟಕದ ಹುಡುಗಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್: ಈ ಯೋಜನೆಗೆ ಯಾರು ಅರ್ಹರು ಗೊತ್ತಾ ?
Karnataka news shuchi free sanitary pad schemes start in Karnataka say Dinesh Gundu Rao
Free sanitary pad scheme: ಪದವಿಪೂರ್ವ ಶಿಕ್ಷಣದ ವರೆಗಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸುವ ಯೋಜನೆಯಾಗಿರುವ ಶುಚಿ ಯೋಜನೆ 2013- 2014ರಲ್ಲಿ ಪ್ರಾರಂಭಗೊಂಡಿದ್ದು, ಆದರೆ ಕೊರೋನಾ(Covid )ಮಹಾಮಾರಿ ಹಿನ್ನೆಲೆ ಯೋಜನೆ ಸ್ಥಗಿತವಾಗಿತ್ತು. ಇದೀಗ ಮತ್ತೆ ಕರ್ನಾಟಕದಲ್ಲಿ (Government)ಶುಚಿ ಯೋಜನೆಗೆ ಮತ್ತೆ ಚಾಲನೆ ಲಭ್ಯವಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಈ ಯೋಜನೆಗೆ ಹೆಚ್ಚು ಪ್ರಯೋಜನ ಮಾಡಲಾಗಿದೆ. ವಿದ್ಯಾರ್ಥಿಗಳ(Students)ಆರೋಗ್ಯ ದೃಷ್ಟಿಯಿಂದ ಈ ಯೋಜನೆ ಪ್ರಾರಂಭಿಸಲಾಗಿದೆ. ಕರ್ನಾಟಕದ ಅನುದಾನಿತ ಹಾಗೂ ಸರ್ಕಾರಿ ಶಾಲೆಯ(School) ವಿದ್ಯಾರ್ಥಿನಿಯರಿಗೆ (Students) ಉಚಿತ ಸ್ಯಾನಿಟರಿ ಪ್ಯಾಡ್ ವಿತರಿಸುವ ಶುಚಿ ಯೋಜನೆಯ(Shuchi free sanitary pad scheme ) ಅತೀ ಶೀಘ್ರದಲ್ಲಿಯೆ ಮತ್ತೆ ಶುರುವಾಗಲಿದ್ದು, ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao)ಅವರು ಮಾಹಿತಿ ನೀಡಿದ್ದಾರೆ.
ಈ ಯೋಜನೆ ಮರು ಆರಂಭವಾಗುತ್ತಿರುವ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಶುಚಿ ಯೋಜನೆ ಆರಂಭಗೊಳ್ಳಲು ಬೇಕಾದ ತಯಾರಿ ನಡೆಯುತ್ತಿದ್ದು, ಸೆಪ್ಟೆಂಬರ್ ನಿಂದ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ. ಕೊರೋನಾದ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಶುಚಿ ಯೋಜನೆಗೆ ಮತ್ತೆ ಜೀವ ಸಿಕ್ಕಂತಾಗಿದೆ.ಅಂದ ಹಾಗೆ ಈ ಯೋಜನೆಯ ಮೂಲಕ ಸ್ಯಾನಿಟರಿ ನ್ಯಾಪ್‍ಕಿನ್ ವಿತರಣೆ ಮಾಡುವ ಮುಖಾಂತರ ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ ಕಾಪಾಡುವ ಉದ್ದೇಶದೊಂದಿಗೆ ಈ ಯೋಜನೆ ಜಾರಿ ಮಾಡಲಾಗಿದೆ.
ಇದನ್ನೂ ಓದಿ: Intresting Fact:ಒಂದೇ ಒಂದು ದಿನ ಶಾಲೆಗೆ ಚಕ್ಕರ್ ಹಾಕದೆ 50 ದೇಶ ಸುತ್ತಿದ್ಲು 10 ರ ಈ ಪೋರಿ !ಹೆಂಗ್ ಸ್ವಾಮಿ ಸಾಧ್ಯ ?!
Comments are closed.