BIG BOSS KANNADA: ಬಿಗ್ ಬಾಸ್’ಗೆ ಕ್ಷಣ ಗಣನೆ, ನಿಮ್ಮ ಈ ಪರಿಚಿತರ ದೊಡ್ಮನೆ ಎಂಟ್ರಿ ಫಿಕ್ಸ್ !

entertainment news bigg boss season 10 participants name details

Bigg Boss Kannada: ಕನ್ನಡದ ಬಿಗ್ ಬಾಸ್‌ 10ರ ಬಿಸಿ ಬಿಸಿ ಸುದ್ದಿ ಇಲ್ಲಿದೆ ನೋಡಿ. ಬಿಗ್ ಬಾಸ್ ರಿಯಾಲಿಟಿ ಶೋ ಸಕತ್ ಮನೋರಂಜನೆ ಕೊಡುವ ಶೋ ಎಂದರೆ ಖಂಡಿತಾ ತಪ್ಪಾಗಲಾರದು. ಯಾಕೆಂದರೆ ಬಿಗ್ ಬಾಸ್ ಹಲವಾರು ಭಾಷೆಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವುದೇ ಇದಕ್ಕೆ ಸಾಕ್ಷಿ . ಇದೀಗ ಕನ್ನಡದಲ್ಲಿ ಜನಪ್ರಿಯ ಬಿಗ್ ಬಾಸ್ ಕನ್ನಡದ 10 ನೇ ಸೀಸನ್‌ಗೆ ತಯಾರಿ ಪ್ರಾರಂಭವಾಗಿದೆ. ಬನ್ನಿ ಏನೆಲ್ಲಾ ತಯಾರಿ ನಡೆದಿದೆ ಮತ್ತು ಹೇಗೆ ತಯಾರಿ ನಡೆಯುತ್ತಿದೆ ಎಂದು ಸ್ವಲ್ಪ ನಿಮಗೂ ಹೇಳ್ತೀವಿ.

 

ಕಳೆದ ವರ್ಷ, ಆಗಸ್ಟ್ ಆರಂಭದಲ್ಲಿ, ಮೊದಲ ಬಾರಿಗೆ ಬಿಗ್ ಬಾಸ್ ಕನ್ನಡ OTT ಸೀಸನ್‌ ಶುರುವಾಗಿತ್ತು. ಇದು Voot ಸೆಲೆಕ್ಟ್‌ನಲ್ಲಿ 24/7 ಪ್ರಸಾರವಾಯಿತು. ವಿವಿಧ ವೃತ್ತಿಪರ ಕ್ಷೇತ್ರಗಳ 16 ಸ್ಪರ್ಧಿಗಳೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕೇವಲ 6 ವಾರಗಳು (42 ದಿನಗಳು) ಮಿನಿ-ಸೀಸನ್ ನಡೆಯಿತು ಮತ್ತು ಉತ್ತಮ ನಾಲ್ಕು ಫೈನಲಿಸ್ಟ್‌ಗಳು 100 ದಿನಗಳ ಟಿವಿ ಸೀಸನ್, ಬಿಗ್ ಬಾಸ್ ಕನ್ನಡ ಸೀಸನ್ 9 ಗೆ ಪ್ರವೇಶಿಸಲು ನೇರ ಅವಕಾಶವನ್ನು ಪಡೆದರು. ಇದೀಗ ಮತ್ತೇ ನಿಮ್ಮೆಲ್ಲರ ನೆಚ್ಚಿನ ಕನ್ನಡದ ಬಿಗ್ ಬಾಸ್ ವಾಪಸ್ಸಾಗ್ತಿದೆ. ಆದರೆ, ಈ ಬಾರಿ ಬಿಗ್ ಬಾಸ್ ಓಟಿಟಿ (Bigg Boss 2) ಆಟಕ್ಕೆ ಬ್ರೇಕ್ ಕೊಡಲಾಗಿದೆ. ಮೊದಲು ಒಟಿಟಿ ಆ ನಂತರ ಟಿವಿಗೆ ಅನ್ನೋ ಕಾನ್ಸೆಪ್ಟ್ ಅನ್ನು ಕೈ ಬಿಟ್ಟಿದೆಯಂತೆ.

ಇನ್ನು ಬಿಗ್ ಬಾಸ್ ಕಾರ್ಯಕ್ರಮ ಎಲ್ಲಿ ನಡೆಯುತ್ತೆ? ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಯಾರೆಲ್ಲ ಅನ್ನುವ ಕುತೂಹಲ ಇದ್ದೇ ಇರುತ್ತೆ. ಅದರಲ್ಲೂ ಈ ಬಾರಿ ಹೊಸ ಸೀಸನ್‌ನಲ್ಲಿ ನಾಗಿಣಿ 2 (Nagini 2) ನಟಿ ನಮ್ರತಾ ಗೌಡ (Namratha Gowda), ಹುಚ್ಚ ಚಿತ್ರದ ನಾಯಕಿ ರೇಖಾ (Rekha), ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾದ ಭೂಮಿಕಾ ಬಸವರಾಜ್(Bhoomika Basavaraj), ವರ್ಷ ಕಾವೇರಿ, ಅಗ್ನಿಸಾಕ್ಷಿ ರಾಜೇಶ್ ಧ್ರುವ, ಸೇರಿದಂತೆ ಹಲವರು ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ.

ಸದ್ಯಕ್ಕೆ ವಾಹಿನಿಯ ಕಡೆಯಿಂದ ಬಿಗ್ ಬಾಸ್ ಸೀಸನ್ 10ಕ್ಕೆ(Bigg Boss Kannada 10) ಭರ್ಜರಿ ತಯಾರಿ ಮಾಡಿಕೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಬಿಗ್ ಬಾಸ್ ಸೀಸನ್ 10ಕ್ಕೆ ತೆರೆಮರೆಯಲ್ಲಿ ತಯಾರಿ ಕೂಡ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಈ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ನಡೆಯಲಿದ್ದು, ಇದು ಮುಗಿದ ನಂತರ ಕೊನೆಯ ವಾರದ ವೇಳೆಗೆ ಸುದೀಪ್‌ (Kiccha Sudeep) ನಿರೂಪಣೆಯಲ್ಲಿ ಬಿಗ್ ಬಾಸ್ ಆರಂಭ ಆಗಬಹುದು ದಟ್ಟವಾದ ಸುದ್ದಿ ಇದೆ. ಆದರೆ ಪ್ರಸ್ತುತ, ನಟ ಬ್ಯಾಕ್-ಟು-ಬ್ಯಾಕ್ ಸಿನಿಮಾಗಳಲ್ಲಿ ನಿರತರಾಗಿದ್ದಾರೆ ಮತ್ತು ಅವರು ಬಿಡುವಿದ್ದಾಗಲೆಲ್ಲಾ ಬಿಗ್ ಬಾಸ್‌ಗೆ ಚಿತ್ರೀಕರಣಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತಿದೆ.

Comments are closed.