Kitchen Tips: ಹಾಲು ಸೀದು ಹೋಯಿತೇ! ಟೆನ್ಷನ್ ಮಾಡದಿರಿ ಈ ಟಿಪ್ಸ್ ಫಾಲೋ ಮಾಡಿ
Kitchen tips how to prevent milk curdling when cooking here is complete details
Milk curdling : ಹಾಲನ್ನು (Milk ) ಬಿಸಿಮಾಡಲು ಒಲೆಯ ಅಥವಾ ಗ್ಯಾಸ್ ಮೇಲೆ ಇರಿಸಿದಾಗ, ಹಾಲು ಉಕ್ಕದಂತೆ ಎಷ್ಟು ಕಾಳಜಿ ವಹಿಸಿದರೂ ಹಾಲು ಉಕ್ಕಿ ಹೋಗುತ್ತದೆ. ಇನ್ನು ಹಾಲುಕ್ಕಿದ ಒಲೆಯನ್ನು ಒರೆಸುವ ಕಷ್ಟ ಯಾರಿಗೂ ಬೇಡ. ಹಾಲು ಕುದಿಸುವಾಗ ಹಠದಲ್ಲಿ ಸ್ಟವ್ ಎದುರಲ್ಲೇ ನಿಂತಿದ್ದರೂ ಹಾಲು ಕುದಿಯೋದೇ ಇಲ್ಲ. ಒಟ್ಟಿನಲ್ಲಿ ಒಲೆಯಲ್ಲಿ ಹಾಲು ಇಟ್ಟು ನೀವು ಒಂದು ಕ್ಷಣಕ್ಕೆ ಯಾಮಾರಿದರು ಸಾಕು ಹಾಲು ಉಕ್ಕಿ ಹರಿದಿರುತ್ತದೆ.ಜೊತೆಗೆ ಹಾಲು ತಳವನ್ನೂ ಹಿಡಿದಿರುತ್ತದೆ. ಮೂಸಿ ನೋಡಿದರೆ, ಹಾಲಿನ ಪರಿಮಳ ಹಾರಿ ಹೋಗಿ ಸೀದ ವಾಸನೆ ಹಾಲಿಗೆ (Milk curdling) ಬಂದಿರುತ್ತದೆ. ಹಾಗಾದರೆ, ಇನ್ನೂ ಹಾಲನ್ನು ಚೆಲ್ಲಿ ಬಿಡುವುದಾ, ಇಟ್ಟುಕೊಳ್ಳುವುದಾ ಎಂದು ಅರ್ಥವಾಗದೆ, ಚೆಲ್ಲಿ ವೇಸ್ಟ್ ಮಾಡಲೂ ಮನಸು ಬಾರದೆ ಯೋಚನೆ ಮಾಡುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ಆ ಹಾಲನ್ನು ಹೇಗೆ ಬಳಕೆ ಮಾಡಬಹುದು ಎಂದು ಇಲ್ಲಿ ಸುಲಭ ಉಪಾಯ (Kitchen Tips) ತಿಳಿಸಲಾಗಿದೆ.
ಪಾತ್ರೆ ಬದಲಾಯಿಸಿ:
ಮೊದಲು ಹಾಲು ಸೀದಿದೆ ಅಂತ ಗೊತ್ತಾದ ತಕ್ಷಣ ಪಾತ್ರೆ ಬದಲಾಯಿಸಿಬಿಡಿ. ತಳವನ್ನು ಸೌಟಲ್ಲಿ ಕೆರೆಯದೆ, ಹಾಲನ್ನು ಅಲ್ಲಾಡದಂತೆ ನಿಧಾನವಾಗಿ ಬೇರೆ ಪಾತ್ರೆಗೆ ವರ್ಗಾಯಿಸಿ. ಆಗ ಪಾತ್ರೆಯ ತಳದಿಂದ ಇನ್ನಷ್ಟು ವಾಸನೆ ಹಾಲಿಗೆ ಹರಡುವುದು ತಪ್ಪುತ್ತದೆ.
ಬೇಗ ಮುಗಿಸಿ:
ಸೀದ ಹಾಲನ್ನು ಬೇಗ ಮುಗಿಸುವುದು ಯಾವತ್ತಿಗೂ ಒಳ್ಳೆಯದು. ಯಾಕೆಂದರೆ ಇದನ್ನು ಫ್ರಿಡ್ಜ್‌ನಲ್ಲಿಟ್ಟಷ್ಟೂ ಇದರ ವಾಸನೆ ಹೆಚ್ಚಾಗುತ್ತದೆ ಹಾಗೂ ಬಳಸಲು ಯೋಗ್ಯವಾಗಿ ಇರುವುದಿಲ್ಲ. ಸೀದ ಹಾಲು ಹೆಚ್ಚು ಹೊತ್ತು ಇಟ್ಟಂತೆಲ್ಲ ತನ್ನ ವಾಸನೆಯನ್ನು ಹೆಚ್ಚಿಸುತ್ತಾ ಹೋಗುವುದರಿಂದ ಅದೇ ದಿನ ಇಂಥ ಹಾಲನ್ನು ಬಳಸಿ ಮುಗಿಸಿ.
ಏಲಕ್ಕಿ ಹಾಕಿ :
ಸೀದ ಹಾಲನ್ನು ಬೇರೆ ಪಾತ್ರೆಗೆ ವರ್ಗಾಯಿಸಿ ಅದನ್ನು ಸಣ್ಣ ಉರಿಯಲ್ಲಿ ಕುದಿಯಲು ಇಡಿ. ಜೊತೆಗೆ ನಾಲೈದು ಏಲಕ್ಕಿಯನ್ನು ಜಜ್ಜಿ ಈ ಹಾಲಿಗೆ ಹಾಕಿ. ಕುದಿದ ಮೇಲೆ ಕೆಳಗಿಳಿಸಿ.
ದಾಲ್ಚಿನ್ನಿ ಪುಡಿ ಹಾಕಿ:
ಹಾಲು ಸೀದಾಗ ತಕ್ಷಣ ಹಾಲನ್ನು ಬೇರೆ ಪಾತ್ರೆಗೆ ವರ್ಗಾಯಿಸಿ, ದಾಲ್ಚಿನ್ನಿ ಅಥವಾ ಚೆಕ್ಕೆಗೆ ಬೇರೆಯದೇ ಗಂಧವಿದೆ. ಹಾಗಾಗಿ ಇದರ ಪುಡಿಯನ್ನು ಹಾಲಿಗೆ ಸೇರಿಸಿ ಕುದಿಸುವುದರಿಂದ ಹಾಲಿನ ಸೀದ ವಾಸನೆ ಹೋಗಿ, ಕೊಂಚ ಸಿಹಿ ರುಚಿಯ ದಾಲ್ಚಿನ್ನಿ ಘಮ ಹಾಲಿಗೆ ಹರಡಿಕೊಳ್ಳುತ್ತದೆ.
ಬೆಲ್ಲ ಹಾಕಿ ಕುಡಿಯಿರಿ :
ಸಿಹಿಯಾದ ಹಾಲು ಬಹುತೇಕ ಎಲ್ಲರಿಗೂ ಇಷ್ಟವೇ. ಹಾಗಾಗಿ ಹಾಲು ಸೀದಿದ್ದರೆ ಸಕ್ಕರೆ ಹಾಕುವ ಬದಲು, ಬೆಲ್ಲದ ಪುಡಿ ಹಾಕಿ. ಇದು ಬೇರೆಯದೇ ಆದ ರುಚಿ ಕೊಡುತ್ತದೆ. ಬೆಲ್ಲದ ಪುಡಿಯನ್ನು ಹಾಲಿಗೆ ಹಾಕಿ ಕುದಿಸಿ ಕುಡಿಯುವುದರಿಂದ ಸೀದಾ ವಾಸನೆ ಗಮನಕ್ಕೆ ಬರುವುದಿಲ್ಲ. ಆದರೆ ಬೆಲ್ಲದ ಪುಡಿ ಹಾಲಿಗೆ ಹಾಕಿ ಕುದಿಸುವಾಗ ಸಣ್ಣ ಉರಿಯಲ್ಲಿ ಮೆದುವಾಗಿ ಕುದಿಸಿ. ಯಾಕೆಂದರೆ ದೊಡ್ಡ ಉರಿಯಲ್ಲಿ ಬೆಲ್ಲದ ಜೊತೆಗೆ ಹಾಲು ಒಡೆಯುವ ಅಪಾಯವೂ ಇದೆ. ಈ ರೀತಿಯಾಗಿ ಸೀದ ಹಾಲನ್ನು ಮತ್ತೇ ಬಳಸಬಹುದು.
ಇದನ್ನೂ ಓದಿ: 7 Seater Cars : ಶೀಘ್ರದಲ್ಲಿ ಬಿಡುಗಡೆ ಆಗಲಿರುವ 7 ಸೀಟರ್ ಕಾರುಗಳ ಪಟ್ಟಿ ಇಲ್ಲಿದೆ!
Comments are closed.