EPFO: ಇಪಿಎಫ್ ಓ ನೌಕರರೇ ಇತ್ತ ಗಮನಿಸಿ; ಈ ಪಿಂಚಣಿ ನಿಯಮದಲ್ಲಿ ಆಗಲಿದೆ ಮುಖ್ಯ ಬದಲಾವಣೆ!!!
Government news employees provident fund organisation news big change in EPFO pension rules here is details
EPFO : ಭಾರತೀಯ ನಾಗರಿಕರಿಗೆ ಉದ್ಯೋಗಿಗಳ (work) ಭವಿಷ್ಯನಿಧಿಯನ್ನು ನಿರ್ವಹಣೆ ಮಾಡುವ ಸಂಸ್ಥೆಯಾದ ಇಪಿಎಫ್ಒ (EPFO) ನಿಧಿ ಹಣಕಾಸು ಸುರಕ್ಷತೆಯನ್ನು ಜನರಿಗೆ ನೀಡುತ್ತದೆ. ಕೆಲಸ ಮಾಡುವ ಸಂಸ್ಥೆ ಅಥವಾ ಉದ್ಯೋಗಿಗಳಿಗೂ ಈ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಬಹುದು. ಈ ನಿಧಿಯು ನಿಮ್ಮ ಕೆಲಸದ ನಿವೃತ್ತಿಯ ಬಳಿಕ ನೀಡುವ ಸುರಕ್ಷತೆಯಾಗಿದೆ (safe). ಸದ್ಯ EPFO ನೌಕರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಈ ಪಿಂಚಣಿ ನಿಯಮಗಳಲ್ಲಿ ಪ್ರಮುಖ ಬದಲಾವಣೆಗೆ ನಿರ್ಧರಿಸಲಾಗಿದೆ.
ಪ್ರಸ್ತುತ EPFO ನೌಕರರ ಪಿಂಚಣಿ ಯೋಜನೆ (EPS-95) ಅಡಿಯಲ್ಲಿ, ಪಿಂಚಣಿ ಲೆಕ್ಕಾಚಾರದ ಸೂತ್ರವು ಸೇವೆಯ ಕೊಡುಗೆ ಅವಧಿಯಲ್ಲಿ ಪಡೆದ ಸರಾಸರಿ ಮಾಸಿಕ ವೇತನವನ್ನು ಆಧರಿಸಿ ಪಿಂಚಣಿಯನ್ನು ಲೆಕ್ಕಹಾಕಲಾಗುತ್ತದೆ. ಆದರೆ ಇಪಿಎಸ್ (95) ಅಡಿಯಲ್ಲಿ ಮಾಸಿಕ ಪಿಂಚಣಿ ಸೂತ್ರವನ್ನು ಬದಲಾಯಿಸುವ ನಿರೀಕ್ಷೆಯಿದೆ. ಕಳೆದ 60 ತಿಂಗಳ ಸರಾಸರಿ ವೇತನದ ಬದಲಿಗೆ ಸೇವೆಯ ಸಮಯದಲ್ಲಿ ಗಳಿಸಿದ ಸರಾಸರಿಯನ್ನು ಪಿಂಚಣಿಗೆ ಸೇರಿಸುವ ಯೋಜನೆ ಇದೆ ಎನ್ನಲಾಗಿದೆ.
ಆದರೆ, ಇದು ಪ್ರಸ್ತಾವನೆಯ ಹಂತದಲ್ಲಿದ್ದು, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ವರದಿ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಅಸ್ತಿತ್ವದಲ್ಲಿರುವ ಸೂತ್ರದ ಪ್ರಕಾರ ಇಪಿಎಫ್‌ಒ ಪಿಂಚಣಿ ಸೂತ್ರವನ್ನು ಬದಲಾಯಿಸಿದರೆ, ಎಲ್ಲರಿಗೂ ಮಾಸಿಕ ಪಿಂಚಣಿಯನ್ನು ಕಟ್ಟುನಿಟ್ಟಾಗಿ ನಿಗದಿಪಡಿಸಲಾಗುವುದು. ದೀರ್ಘಾವಧಿಯಲ್ಲಿ ಹೆಚ್ಚಿನ ಪಿಂಚಣಿ ಪಾವತಿಸುವುದರಿಂದ ಆರ್ಥಿಕ ಹೊರೆ ಉಂಟಾಗುತ್ತದೆ. ಅದಕ್ಕಾಗಿಯೇ ಹೊಸ ಸೂತ್ರವನ್ನು ಪರಿಗಣಿಸಲಾಗುತ್ತಿದೆ.
ಹೆಚ್ಚಿನ ಪಿಂಚಣಿ ಆಯ್ಕೆ ಮಾಡುವ ವ್ಯಕ್ತಿಯ ಕಳೆದ 60 ತಿಂಗಳ ಸರಾಸರಿ ವೇತನ 80,000 ರೂ. ಮತ್ತು ಅವರ ಪಿಂಚಣಿ ಸೇವೆ 32 ವರ್ಷಗಳು ಆಗಿದ್ದರೆ ಈ ವೇಳೆ, ಅಸ್ತಿತ್ವದಲ್ಲಿರುವ ಸೂತ್ರದ ಅಡಿಯಲ್ಲಿ ಪಿಂಚಣಿ 36,571ರೂ ಆಗಿರುತ್ತದೆ. ಹಾಗೇ, ಪೂರ್ಣ ಪಿಂಚಣಿ ಉದ್ಯೋಗದ ಸಮಯದಲ್ಲಿ ಸರಾಸರಿ ವೇತನವನ್ನು ತೆಗೆದುಕೊಳ್ಳುವಾಗ, ಉದ್ಯೋಗದ ಆರಂಭಿಕ ದಿನಗಳಲ್ಲಿ ಸಂಬಳ ಕಡಿಮೆ ಇರುವುದರಿಂದ ಮಾಸಿಕ ಪಿಂಚಣಿ ಕೂಡಾ ಕಡಿಮೆಯಾಗಿರುತ್ತದೆ.
ಇದನ್ನೂ ಓದಿ: Actor Upendra: ಜಾತಿ ನಿಂದನೆ ಮಾಡಿಲ್ಲ, FIR ರದ್ದು ಮಾಡಿ ! ಸಿಡಿದು ನಿಂತ ಉಪೇಂದ್ರ ಹೈ ಕೋರ್ಟ್ ಗೆ ಮನವಿ !
Comments are closed.