Home latest Viral Video: ಪಲ್ಟಿ ಬಿದ್ದ ಮದ್ಯಸಾಗಾಟದ ವಾಹನ: ಫುಲ್ ಬಾಟಲ್ ಗಳಿಗೆ ಮುಗಿಬಿದ್ದ ಜನ –...

Viral Video: ಪಲ್ಟಿ ಬಿದ್ದ ಮದ್ಯಸಾಗಾಟದ ವಾಹನ: ಫುಲ್ ಬಾಟಲ್ ಗಳಿಗೆ ಮುಗಿಬಿದ್ದ ಜನ – ವೈರಲ್ ವಿಡಿಯೋ !

Liquor bottles
Image source: tv 9 kannada

Hindu neighbor gifts plot of land

Hindu neighbour gifts land to Muslim journalist

Liquor bottles: ಮದ್ಯ ಅಂದರೆ ಸಾಕು ಜನರಿಗೆ ಎಲ್ಲಿಲ್ಲದ ವ್ಯಾಮೋಹ. ಮದ್ಯದ ಮಾಯೆ ಎಷ್ಟರಮಟ್ಟಿಗಿದೆ ಎಂದರೆ ಮನೆ ಮಾರಿಯಾದ್ರೂ ಕೊಳ್ಳೋ ಜನರು ನಮ್ಮ ನಡುವೆ ಇದ್ದಾರೆ. ದುಡ್ಡು ಎಷ್ಟೇ ಇರಲಿ, ಸಂಜೆ ಆಗುತ್ತಿದ್ದಂತೆ ಒಂದು ಎರಡು ಮೂರು- ಹೀಗೆ ಭಟ್ಟಿ ಇಳಿಸಿದಂತೆ ಬಾರ್ ಗೆ ದೌಡಾಯಿಸಿ ಫ್ರೆಂಡ್ಸ್ ಜೊತೆಗೆ ತಮ್ಮ ಮನಸೋ ಇಚ್ಛೆ ಹೊಟ್ಟೆಗೆ ಪರಮಾತ್ಮ ಇಳಿದರೆ ಮಾತ್ರ ಮದ್ಯ ಪ್ರಿಯರಿಗೆ ಏನೋ ಒಂದು ಸಮಾಧಾನ.

ಇತ್ತೀಚೆಗೆ ಮದ್ಯದ ದರ (liquor Rate) ಭಾರೀ ಏರಿಕೆಯಾಗಿದ್ದು, ಮದ್ಯಪ್ರಿಯರಿಗೆ ಭಾರೀ ಆಘಾತವೇ ಉಂಟಾಗಿದೆ. ಆದರೆ, ಇಲ್ಲೊಂದೆಡೆ ಮದ್ಯಸಾಗಾಟದ ವಾಹನ ಪಲ್ಟಿಯಾಗಿದ್ದು, ಮದ್ಯಪ್ರಿಯರಿಗೆ ಖುಷಿಯೋ ಖುಷಿ, ಫುಲ್ ಬಾಟಲ್( Liquor bottles) ಗಳಿಗಾಗಿ ಮುಗಿಬಿದ್ದಿದ್ದಾರೆ (Viral Video). ಹೌದು, ಕಾಕಿನಾಡ (Kakinada) ಜಿಲ್ಲೆಯ ತುಣಿ ಮಂಡಲದ ಗವರಯ್ಯ ಕೋನೇರು ಬಳಿ ಮದ್ಯದ ಬಾಟಲಿ ತುಂಬಿದ್ದ ಮಿನಿ ವ್ಯಾನ್ ಪಲ್ಟಿಯಾಗಿದೆ. ವ್ಯಾನ್ ನಲ್ಲಿ ಬಿಯರ್ (Beer), ಬ್ರಾಂಡಿ, ವಿಸ್ಕಿ (Visky) ಮತ್ತು ವೈನ್ (wine) ಎಲ್ಲವೂ ತುಂಬಿತ್ತು.

ಘಟನೆಯಲ್ಲಿ ಕೆಲ ಬಾಟಲಿಗಳು ಚಿಂದಿಯಾಗಿವೆ. ಇನ್ನು ಕೆಲವು ಹಾಗೆಯೇ ಕೆಳಗೆ ಬಿದ್ದಿವೆ. ವ್ಯಾನ್ ಪಲ್ಟಿಯಾಗಿದ್ದೇ ತಡ ಸ್ಥಳೀಯರು ಅಲ್ಲಿಗೆ ಜಮಾಯಿಸಿ ಸಿಕ್ಕಿದ್ದೇ ಚಾನ್ಸ್ ಎಂದು ಕೈಗೆ ಸಿಕ್ಕಿದಷ್ಟು ಬಾಟಲ್ ಗಳನ್ನು ಬಾಚಿಕೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಜನರನ್ನು ನಿಯಂತ್ರಿಸಿದರು. ನಂತರ ಸಂಚಾರ ಮುಕ್ತಗೊಳಿಸಲಾಯಿತು. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: BSNL Recharge Plan: BSNLನ ಈ ಜಬರ್ದಸ್ತ್ ಪ್ಲಾನ್ ಕಂಡು ಪ್ರತಿಸ್ಪರ್ಧಿಗಳಲ್ಲಿ ನಡುಕ ; 730 GB ನ ಈ ಪ್ಲಾನ್ ಕೊಳ್ಳಲು ಮುಗಿಬಿದ್ದ ಜನ !