Free Education: ವಿದ್ಯಾರ್ಥಿಗಳೇ, ವಿದೇಶದಲ್ಲಿ ಉಚಿತ ಶಿಕ್ಷಣ ಬೇಕಾ ? ಹಾಗಿದ್ರೆ ಈ ದೇಶಗಳಲ್ಲಿ ಸಿಗತ್ತೆ ಪೂರ್ತಿ ಉಚಿತ ಶಿಕ್ಷಣ !
Education news world news countries that offer free education to Indian students here is complete detail
Free Education: ವಿದೇಶದಲ್ಲಿ ಶಿಕ್ಷಣದ ಕನಸು ಕಾಣುವವರಿಗೆ ಸಿಹಿಸುದ್ದಿ ಇದು. ಹೌದು, ಈ ದೇಶಗಳು ಭಾರತೀಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ (Free Education) ನೀಡುತ್ತವೆ. ಭಾರತೀಯರು ಸೇರಿದಂತೆ ವಿದೇಶಿ ವಿದ್ಯಾರ್ಥಿಗಳಿಗೆ ಫ್ರೀ ಶಿಕ್ಷಣ ನೀಡುವ ದೇಶಗಳು ಯಾವುದು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಹ್ !!!.
ಬ್ರೆಜಿಲ್ : ಬ್ರೆಜಿಲ್ ವಿದೇಶಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೌಲಭ್ಯವನ್ನು ಒದಗಿಸುತ್ತದೆ. ಆದರೆ, ಒಂದು ಷರತ್ತು, ಉಚಿತ ಶಿಕ್ಷಣ ಪಡೆಯಲು ನೀವು ಪೋರ್ಚುಗೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಆದರೆ, ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ನೋಂದಣಿ ಶುಲ್ಕವನ್ನು ವಿಧಿಸುತ್ತವೆ.
ಸ್ಪೇನ್ : ಸ್ಪೇನ್ ಕೂಡ ಉಚಿತ ಶಿಕ್ಷಣದ ಸೌಲಭ್ಯವನ್ನು ಹೊಂದಿದೆ. ಸ್ಪೇನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಬಾರ್ಲಿಸೋನಾ ವಿಶ್ವವಿದ್ಯಾಲಯ, ನವರ ವಿಶ್ವವಿದ್ಯಾಲಯದಂತಹ ಉನ್ನತ ಶಿಕ್ಷಣ ಸಂಸ್ಥೆಗಳಿವೆ.
ಫಿನ್‌ಲ್ಯಾಂಡ್ : ಫಿನ್‌ಲ್ಯಾಂಡ್ ಭಾರತೀಯರಿಗೆ ಮಾತ್ರವಲ್ಲದೆ ಎಲ್ಲಾ ದೇಶಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಸೌಲಭ್ಯವನ್ನು ಹೊಂದಿದೆ. ಇಲ್ಲಿ ಕೆಲವು ವಿಶ್ವವಿದ್ಯಾಲಯಗಳು ಇಂಗ್ಲಿಷ್ ಭಾಷಾ ವಿದ್ಯಾರ್ಥಿಗಳಿಂದ ಮಾತ್ರ ಬೋಧನಾ ಶುಲ್ಕವನ್ನು ವಿಧಿಸುತ್ತವೆ. ಡಯಾಕೋನಿಯಾ ವಿಶ್ವವಿದ್ಯಾಲಯ, ಇಂಟರ್ನಲ್ ಫಿನ್‌ಲ್ಯಾಂಡ್ ವಿಶ್ವವಿದ್ಯಾಲಯದಂತಹ ಉತ್ತಮ ಸಂಸ್ಥೆಗಳಿವೆ.
ಜೆಕ್ ಗಣರಾಜ್ಯ : ಇಲ್ಲಿ ಅಧ್ಯಯನಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಆದರೆ, ಈ ದೇಶದ ಭಾಷೆ ತಿಳಿದಿರಬೇಕು. ಇಲ್ಲಿ ಜೆಕ್ ತಾಂತ್ರಿಕ ವಿಶ್ವವಿದ್ಯಾಲಯ, ಸೈಡ್ ಬೊಹೆಮಿಯಾ ವಿಶ್ವವಿದ್ಯಾಲಯ ಮತ್ತು ಮಸಾರಿಕ್ ವಿಶ್ವವಿದ್ಯಾಲಯದಂತಹ ಉನ್ನತ ಸಂಸ್ಥೆಗಳಲ್ಲಿ ಪ್ರವೇಶವನ್ನು ಪಡೆಯಬಹುದು.
ಇದನ್ನೂ ಓದಿ: Viral Video: ಪಲ್ಟಿ ಬಿದ್ದ ಮದ್ಯಸಾಗಾಟದ ವಾಹನ: ಫುಲ್ ಬಾಟಲ್ ಗಳಿಗೆ ಮುಗಿಬಿದ್ದ ಜನ – ವೈರಲ್ ವಿಡಿಯೋ !
Comments are closed.