Rakshabandhan 2023: ಸಹೋದರರ ಕೈಯಲ್ಲಿ ರಕ್ಷೆಯಾಗಿ ಕಟ್ಟಿದ ರಾಖಿಯನ್ನು ನಂತರ ಏನು ಮಾಡಬೇಕು? ಈ ರೀತಿ ಮಾಡಿದರೆ ಖಂಡಿತ ಅಶುಭ!

Rakshabandhan 2023: What to do next with the rakhi tied in the hands of brothers

Rakshabandhan 2023: ಸಹೋದರ ಸಹೋದರಿಯ ನಡುವಿನ ಅವಿನಾಭಾವ ಸಂಬಂಧದ ಸಂಕೇತವಾಗಿ ರಕ್ಷಾಬಂಧನವನ್ನು(Rakshabandhan 2023) ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ರಕ್ಷಾಬಂಧನವು ಪ್ರಮುಖ ಹಬ್ಬ. ಈ ದಿನ ಸಹೋದರಿಯರು ತಮ್ಮ ಸಹೋದರರ ಕೈಗೆ ರಕ್ಷಾ ಸೂತ್ರವನ್ನು ಕಟ್ಟಿ ಆಶೀರ್ವಾದ ಪಡೆಯುತ್ತಾರೆ. ಹಾಗೆನೇ ಸಹೋದರರು ತಮ್ಮ ಸಹೋದರಿಯರನ್ನು ಜೀವನದುದ್ದಕ್ಕೂ ರಕ್ಷಿಸುವ ಭರವಸೆ ನೀಡುತ್ತಾರೆ. ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್‌ 30ರಂದು ಈ ಹಬ್ಬ ಆಚರಣೆ ಮಾಡಲಾಗುತ್ತದೆ.

ಈ ವರ್ಷ ಹುಣ್ಣಿಮೆಯ ತಿಥಿಯ ಜೊತೆಗೆ ಭದ್ರನ ಛಾಯೆ ಇರುವುದರಿಂದ ರಾಖಿ ಕಟ್ಟುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಆಗಸ್ಟ್‌ 30 ಮತ್ತು 31ರಂದು ಈ ಹಬ್ಬ ಆಚರಣೆ ಮಾಡಲಾಗುತ್ತದೆ.

ರಾಖಿ ಕಟ್ಟಲು ಹೇಗೆ ಹಲವು ನಿಯಮಗಳು ಇದೆಯೋ ಅದೇ ರೀತಿ ರಾಖಿ ಕಟ್ಟಿದ ನಂತರ ಅವುಗಳನ್ನು ತೆಗೆಯಲು ಕೂಡಾ ಪ್ರತ್ಯೇಕ ನಿಯಮ ಇದೆ. ಹಲವಾರು ಮಂದಿ ರಾಖಿಯನ್ನು ಕಳಚಿ ಅಲ್ಲಿ ಇಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಹಾಗೆ ಮಾಡುವುದು ಸರಿಯಲ್ಲ. ಹಾಗಾದರೆ ಕೈಗೆ ಕಟ್ಟಿದ ರಾಖಿಗಳನ್ನು ಏನು ಮಾಡಬೇಕು? ಬನ್ನಿ ತಿಳಿಯೋಣ.

ರಾಖಿಯನ್ನು ತೆಗೆಯುವಾಗ ಅದನ್ನು ಅಲ್ಲಿ ಇಲ್ಲಿ ಎಸೆಯಬಾರದು. ಅದನ್ನು ಒಂದು ರೂಪಾಯಿ ನಾಣ್ಯದೊಂದಿಗೆ ಮರದ ಕೆಳಗೆ ಇಡಬೇಕು ಅಥವಾ ನೀರಿನಲ್ಲಿ ಬಿಡಬೇಕು.

ರಾಖಿ ಕಟ್ಟಲು ಹಿಂದೂ ಧರ್ಮದಲ್ಲಿ ಹಲವು ನಿಯಮಗಳಿದೆ. ಸಹೋದರಿಯರು ಮನಿಕಟ್ಟಿನ ಮೇಲೆ ಕಪ್ಪುಬಣ್ಣದ ಅಥವಾ ಮುರಿದ ರಾಖಿಯನ್ನು ಕಟ್ಟಬಾರದು. ರಾಖಿ ಕಟ್ಟುವ ಸಮಯದಲ್ಲಿ ಸಹೋದರರು ಯಾವಾಗಲೂ ತಮ್ಮ ತಲೆಯನ್ನು ಕರವಸ್ತ್ರದಿಂದ ಮುಚ್ಚಬೇಕು. ರಾಖಿ ಕಟ್ಟುವಾಗ ಸಹೋದರರು ನೆಲದ ಮೇಲೆ ಸಣ್ಣ ಮಣೆಯ ಮೇಲೆ ಕುಳಿತಿರಬೇಕು. ಹಾಗೂ ಸಹೋದರಿಯರು ನೈಋತ್ಯ ದಿಕ್ಕಿಗೆ ಮುಖ ಮಾಡಿ ರಾಖಿ ಕಟ್ಟಬೇಕು

ಆಗಸ್ಟ್‌ 30 ರಂದು ಬೆಳಿಗ್ಗೆ 10.58 ರಿಂದ ಪ್ರಾರಂಭವಾಗಿ ಆಗಸ್ಟ್‌ 31 ರಂದು ಬೆಳಿಗ್ಗೆ 7.05 ರವರೆಗೆ ಇರುತ್ತದೆ. ರಾಖಿ ಕಟ್ಟಲು ಆಗಸ್ಟ್ 30 ರಂದು ರಾತ್ರಿ 09.01 ರಿಂದ ಆಗಸ್ಟ್ 31 ರ ಬೆಳಿಗ್ಗೆ 07.05 ರವರೆಗೆ ಶುಭ ಮುಹೂರ್ತವಿರುತ್ತದೆ.

ಇದನ್ನೂ ಓದಿ: Flying Kiss: ನೀವು ಯಾರಿಗೆ ʼಫ್ಲೈಯಿಂಗ್‌ ಕಿಸ್‌ʼ ನೀಡಬಹುದು?

Comments are closed.