Home latest Mysuru: ನನ್ನ ಮಗಳನ್ನು ನಿನಗೆ ಕೊಡಲ್ಲ ಎಂದ ತಂದೆ! ಅಷ್ಟೇ, ಕಷ್ಟಪಟ್ಟು ಬೆಳೆಸಿದ್ದ 850 ಅಡಿಕೆ...

Mysuru: ನನ್ನ ಮಗಳನ್ನು ನಿನಗೆ ಕೊಡಲ್ಲ ಎಂದ ತಂದೆ! ಅಷ್ಟೇ, ಕಷ್ಟಪಟ್ಟು ಬೆಳೆಸಿದ್ದ 850 ಅಡಿಕೆ ಗಿಡಗಳನ್ನೇ ತುಂಡರಿಸಿ ಬಿಟ್ಟ ಯುವಕ!

Mysuru
Image source: Tv9 kannada

Hindu neighbor gifts plot of land

Hindu neighbour gifts land to Muslim journalist

Mysuru: ಮದುವೆ (Marriage) ಅನ್ನೋದು ಹೆಣ್ಣು ಮತ್ತು ಗಂಡಿನ ಜೀವನದಲ್ಲಿ ಘಟಿಸುವಂತಹ ಸುಂದರವಾದ ಘಟನೆ. ಕೆಲವರ ಜೀವನದಲ್ಲಿ ಮದುವೆ ಎರಡು ಮೂರು ಬಾರಿ ನಡೆಯುತ್ತದೆ. ಇದು ಇತ್ತೀಚಿನ ದಿನದಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಆದರೆ ಮದುವೆ ವಿಚಾರವಾಗಿ ಇಲ್ಲೊಂದು ಆಘಾತಕಾರಿ ಮತ್ತು ಮನಕಲುಕುವ ಘಟನೆ ನಡೆದಿದೆ.

ಹೌದು, ಮಗಳನ್ನು ಕೊಟ್ಟು ಮದುವೆ ಮಾಡಲಿಲ್ಲವೆಂದು ಕಿಡಿಗೇಡಿ ಕೃಷಿನಾಶ ಮಾಡಿರುವ ಘಟನೆ ಮೈಸೂರು (Mysuru) ಜಿಲ್ಲೆ ಹುಣಸೂರು ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಗಳನ್ನು ಕೊಟ್ಟು ಮದುವೆ ಮಾಡಲಿಲ್ಲವೆಂಬ ಸಿಟ್ಟಿಗೆ ಯುವತಿಯ ತಂದೆ ಶ್ರಮವಹಿಸಿ ಬೆಳೆದಿದ್ದ 850 ಅಡಕೆ (Arecanut) ಗಿಡಗಳನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ.

ವೆಂಕಟೇಶ ಎಂಬಾತ ತನ್ನ ಮಗಳನ್ನು ಅಶೋಕ ಎಂಬಾತನಿಗೆ ಮದುವೆ ಮಾಡಿಕೊಡಲು ಮುಂದಾಗಿದ್ದ. ಮದುವೆ ಮಾತುಕತೆಯೂ ನಡೆದಿತ್ತು. ಆದರೆ ಯುವತಿ ಅಶೋಕನ ನಡತೆ ಸರಿಯಿಲ್ಲ ಎಂದು ಹೇಳಿ ಅವನೊಂದಿಗೆ ಮದುವೆಯಾಗಲು ನಿರಾಕರಿಸಿದ್ದಳು.

ಯುವತಿ ಮದುವೆ ನಿರಾಕರಿಸಿದ್ದಕ್ಕೆ ಆಕೆಯ ಕುಟುಂಬದ ಮೇಲೆ
ಅಶೋಕ್ ದ್ವೇಷ ಬೆಳೆಸಿಕೊಂಡಿದ್ದ. ಕೊನೆಗೆ ಸಿಟ್ಟಿನಿಂದ ನಿನ್ನೆ ರಾತ್ರಿ ವೆಂಕಟೇಶನ ಜಮೀನಿಗೆ ನುಗ್ಗಿ ಅಡಕೆ ಗಿಡಗಳ ನಾಶ ಮಾಡಿದ್ದಾನೆ ಎಂದು ಯುವತಿಯ ತಂದೆ ವೆಂಕಟೇಶ ಆರೋಪ ಮಾಡಿದ್ದಾರೆ. ಸದ್ಯ ಈ ಘಟನೆ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೊಂದೇ ಅಲ್ಲದೆ, ಈ ಹಿಂದೆಯೂ ಅರ್ಧ ಎಕರೆಯಲ್ಲಿ ಬೆಳೆದಿದ್ದ ಶುಂಠಿಯನ್ನು ಅಶೋಕ್ ನಾಶ ಮಾಡಿದ್ದಾನೆ ಎಂಬ ಆರೋಪವಿದೆ.

ಇದನ್ನೂ ಓದಿ: Agriculture : ಸಹಕಾರಿ ಕೃಷಿ ಯೋಜನೆ ಜಾರಿ! ಸಿಗಲಿದೆ 2 ಎಕರೆ ಜಮೀನು; ಯಾರಿಗೆ? ಇಲ್ಲಿದೆ ಸಂಪೂರ್ಣ ವಿವರ