Home Interesting Flying Kiss: ನೀವು ಯಾರಿಗೆ ʼಫ್ಲೈಯಿಂಗ್‌ ಕಿಸ್‌ʼ ನೀಡಬಹುದು?

Flying Kiss: ನೀವು ಯಾರಿಗೆ ʼಫ್ಲೈಯಿಂಗ್‌ ಕಿಸ್‌ʼ ನೀಡಬಹುದು?

Flying Kiss

Hindu neighbor gifts plot of land

Hindu neighbour gifts land to Muslim journalist

Flying Kiss: ಕಿಸ್‌ ಎನ್ನುವುದು ನಮ್ಮ ಭಾರತ ದೇಶದಲ್ಲಿ ಇಂದಿಗೂ ಎಲ್ಲರೂ ಇರುವಾಗ ಹೇಳುವಂತಹ ಪದ ಅಲ್ಲ. ಈಗ ಈ ಕಿಸ್‌ ಬಗ್ಗೆ ಅದರಲ್ಲೂ ಫ್ಲೈಯಿಂಗ್‌ ಕಿಸ್‌ ಬಗ್ಗೆ ಯಾಕೆ ಉಲ್ಲೇಖ ಮಾಡುತ್ತಿದ್ದೇವೆ ಎಂದರೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಫ್ಲೈಯಿಂಗ್‌ ಕಿಸ್‌ ನೀಡಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿತ್ತು. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ರಾಹುಲ್‌ ಭಾಷಣ ಮಾಡಿದ್ದರು. ಇದಾದ ನಂತರ ಬಿಜೆಪಿಯ ಮಹಿಳಾ ಸಂಸದರು ರಾಹುಲ್‌ ಗಾಂಧಿ ವಿರುದ್ಧ ಆರೋಪ ಮಾಡಿದ್ದಾರೆ. ಸಂಸತ್ತಿನಲ್ಲಿ ಫ್ಲೈಯಿಂಗ್‌ ಕಿಸ್‌ ನ್ನು ರಾಹುಲ್‌ ನೀಡಿದ್ದಾರೆ ಎಂದು. ಇದು ಲೋಕಸಭೆಯಲ್ಲಿ ಸಾಕಷ್ಟು ಕೋಲಾಹಲ ಎಬ್ಬಿಸಿತ್ತು. ಹಾಗೂ ಇದರ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇದೊಂದು ಅಸಭ್ಯ ವರ್ತನೆ ಎಂದು ಹೇಳಿದರು.

ಈ ಕೋಲಾಹಲ ಇನ್ನೂ ಭಾರೀ ಚರ್ಚೆಗೆ ಕಾರಣವಾಗಿದೆ. ಇದು ಇತ್ಯರ್ಥದ ಹಂತದಲ್ಲಿ ಇರಲಿ. ಆದರೆ ನಾವಿಲ್ಲಿ ನಿಮಗೆ ಈ ಫ್ಲೈಯಿಂಗ್‌ ಕಿಸ್‌ ಕುರಿತು ಕೆಲವು ಮಾಹಿತಿ ತಂದಿದ್ದೇವೆ. ಹಾಗಾದರೆ ಈ ಫ್ಲೈಯಿಂಗ್‌ ಕಿಸ್‌ (Flying Kiss) ಯಾಕೆ ಎಂದು ಯೋಚಿಸಿದ್ದೀರಾ? ಈ ಫ್ಲೈಯಿಂಗ್‌ ಕಿಸ್‌ ಯಾರಿಗೆ ಕೊಡಬಹುದು? ಬನ್ನಿ ತಿಳಿಯೋಣ.

ಈ ನೀವು ವೇದಿಕೆಯಲ್ಲಿ ಯಾವುದಾದರೂ ಪ್ರದರ್ಶನ ನೋಡಿದಾಗ ನಿಮ್ಮ ಉತ್ತಮ ಪ್ರತಿಕ್ರಿಯೆ ನೀಡಲು ಫ್ಲೈಯಿಂಗ್‌ ಕಿಸ್‌ ನೀಡುತ್ತೀರಿ. ಇದರಲ್ಲಿ ನಿಮ್ಮ ಸಹೋದ್ಯೋಗಿಗಳು, ಸ್ನೇಹಿತರು, ಪ್ರೇಕ್ಷಕರು, ಪೋಷಕರು, ಸಹೋದರಿಯರು ಮತ್ತು ಸಹೋದರರೂ ಇರಬಹುದು.

ʼಕಿಸ್‌ʼ ಸಂಸ್ಕೃತಿಯು ಪ್ರಾಚೀನ ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ಪ್ರಾರಂಭವಾಯಿತು ಎಂದು ಇದರ ಮೇಲೆ ನಡೆದ ಹಲವಾರು ಸಂಶೋಧನೆಗಳು ಹೇಳುತ್ತದೆ. ಆದರೆ ಕೆಲವು ಸಂಶೋಧನೆಯು ಮೆಸೊಪಟ್ಯಾಮಿಯಾದಲ್ಲಿ ಪ್ರಾರಂಭವಾಯಿತು ಎಂದು ಹೇಳುತ್ತದೆ. ಫ್ಲೈಯಿಂಗ್‌ ಕಿಸ್‌ ಬಗ್ಗೆ ಹೇಳುವುದಾದರೆ, ಓರ್ವ ವ್ಯಕ್ತಿ ತನ್ನ ಬೆರಳ ತುದಿಗಳನ್ನು ಚುಂಬಿಸಿ ಯಾರಿಗಾದರೂ ಆ ಸಂದರ್ಭಕ್ಕೆ ಅನುಗುಣವಾಗಿ ತನ್ನ ಪ್ರೀತಿಯನ್ನು ತೋರಿಸುವುದು, ಅಂದರೆ ತನ್ನ ಭಾವನೆಯನ್ನು ವ್ಯಕ್ತಪಡಿಸುವುದು.

ಅಂದರೆ, ಒಬ್ಬ ವ್ಯಕ್ತಿಯ ಚರ್ಮವನ್ನು ಚರ್ಮಕ್ಕೆ ಸ್ಪರ್ಶಿಸುವ ಅಗತ್ಯವಿಲ್ಲದೇ ಇದ್ದಾಗ, ವ್ಯಕ್ತಿಯು ‘ಫ್ಲೈಯಿಂಗ್ ಕಿಸ್’ ನೀಡುತ್ತಾನೆ. ಇದನ್ನು ‘ಫ್ಲೈಯಿಂಗ್ ಕಿಸ್’ ಎಂದು ಮಾತ್ರವಲ್ಲದೆ ‘ಬ್ಲೋನ್ ಕಿಸ್'(Blown Kiss) ಎಂದೂ ಕರೆಯುತ್ತಾರೆ ಎಂದು ಹೇಳುತ್ತಾರೆ. ಈ ಕಿಸ್‌ ನ್ನು ʼರೋಮಿಯೋ ಆಂಡ್‌ ಜೂಲಿಯೆಟ್‌ʼ ಎಂಬ ನಾಟಕದಲ್ಲಿ ಉತ್ತಮವಾಗಿ ಪ್ರಸ್ತುತಪಡಿಸಲಾಗಿದೆ.

ಇದನ್ನೂ ಓದಿ: Agriculture : ಸಹಕಾರಿ ಕೃಷಿ ಯೋಜನೆ ಜಾರಿ! ಸಿಗಲಿದೆ 2 ಎಕರೆ ಜಮೀನು; ಯಾರಿಗೆ? ಇಲ್ಲಿದೆ ಸಂಪೂರ್ಣ ವಿವರ