Kiss in Lokh Sabha: ಲೋಕಸಭೆಯಲ್ಲೇ ಸಚಿವೆಗೆ ಕಿಸ್: ಸ್ಮೃತಿ ಇರಾನಿಗೆ ಫ್ಲೈಯಿಂಗ್‌ ಕಿಸ್‌ ಹೊಡೆದ ರಾಹುಲ್‌ ಗಾಂಧಿ !

India News rahul gandhi blew flying kiss on smriti irani and parliament

Kiss in Lokh Sabha: ಲೋಕಸಭೆಯಲ್ಲಿ ಸ್ಮೃತಿ ಇರಾನಿ ಮಾತಾಡುವಾಗ ಮಹಿಳಾ ಸಂಸದರತ್ತ ನೋಡಿ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂಬ ಆರೋಪ ರಾಹುಲ್ ಗಾಂಧಿ (Rahul Gandhi) ಮೇಲೆ ಹೊರಿಸಲಾಗಿದೆ. ಹೌದು, ಈಗಾಗಲೇ ಕಣ್ಣುಹೊಡೆದು ಸುದ್ದಿಯಾಗಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಬುಧವಾರ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಫ್ಲೈಯಿಂಗ್‌ ಕಿಸ್‌ ನೀಡಿರುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

ಸ್ಮೃತಿ ಇರಾನಿ ಮಾತಾಡುವಾಗ ಮಹಿಳಾ ಸಂಸದರತ್ತ ನೋಡಿ ಫ್ಲೈಯಿಂಗ್ ಕಿಸ್ (Kiss in Lok Sabha) ನೀಡಿದ್ದಾರೆ ಈ ಬಗ್ಗೆ ಸ್ಪೀಕರ್ ಗೆ ಬಿಜೆಪಿ ಮಹಿಳಾ ಸಂಸದರು ಸ್ಪೀಕರ್ ಗೆ ದೂರು ನೀಡಿದ್ದು, ಸಿಸಿಟಿವಿ ಮತ್ತು ವಿಡಿಯೋಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವತ್ತ ಆಗ್ರಹಿಸಿದ್ದಾರೆ . ಎಂಥ ನಾಯಕರು ಇವರು. ಮಹಿಳಾ ಸಂಸದರು ಇರುವ ಕಡೆ ಈ ರೀತಿ ಮಾಡಿದ್ದಾರೆ . ಎಂಥ ಸಂಸ್ಕೃತಿ ಇದು ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಕುರಿತು ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ 21 ಮಂದಿ ಮಹಿಳಾ ಸಂಸದರು ಸ್ಪೀಕರ್‌ ಓಂ ಬಿರ್ಲಾಗೆ ಲಿಖಿತ ದೂರು ನೀಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ತಮ್ಮ ಮಾತನ್ನು ಮುಗಿಸಿ ಸದನದಿಂದ ಹೊರಹೋಗುವ ಪ್ರಯತ್ನದಲ್ಲಿದ್ದರು. ಈ ವೇಳೆ ಮಾತನಾಡಲು ಆರಂಭಿಸಿದ ಸ್ಮೃತಿ ಇರಾನಿಗೆ ಫ್ಲೈಯಿಂಗ್‌ ಕಿಸ್‌ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಇದರ ಮೂಲ ದೃಶ್ಯಾವಳಿ ಕ್ಯಾಮೆರಾದಲ್ಲಿ ಇನ್ನೂ ಸೆರೆಯಾಗಿಲ್ಲ. ಲೋಕಸಭೆಯಿಂದ ಅವರು ಹೊರಹೋಗುವ ವೇಳೆ ಆಡಳಿತ ಪಕ್ಷದ ಮಹಿಳಾ ಸಂಸದರಿದ್ದ ಕಡೆ ಫ್ಲೈಯಿಂಗ್‌ ಕಿಸ್‌ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅವಿಶ್ವಾಸ ಗೊತ್ತುವಳಿ ಭಾಷಣ ಮುಗಿಸಿ ಲೋಕಸಭೆಯ ಆವರಣದಿಂದ ಹೊರಬರುತ್ತಿದ್ದ ರಾಹುಲ್ ಗಾಂಧಿ ಅವರು ಕೆಲವು ಫೈಲ್‌ಗಳನ್ನು ಬೀಳಿಸಿದ್ದರು. ಅವುಗಳನ್ನು ತೆಗೆದುಕೊಳ್ಳಲು ಅವರು ಬಗ್ಗಿದ ವೇಳೆ ಕೆಲವು ಬಿಜೆಪಿ ಸಂಸದರು ಅವರನ್ನು ನೋಡಿ ನಗಲು ಪ್ರಾರಂಭಿಸಿದರು ಎಂದು ಈ ಕ್ಷಣವನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಫ್ಲೈಯಿಂಗ್ ಕಿಸ್ ಬಗ್ಗೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, “ಸ್ತ್ರೀದ್ವೇಷದ ಪುರುಷ ಮಾತ್ರ ಸಂಸತ್ತಿನಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ. ಇಂತಹ ಉದಾಹರಣೆ ಹಿಂದೆಂದೂ ಕಂಡಿರಲಿಲ್ಲ. ಇದು ಅವರ ಮಾನಸಿಕತೆ ಮತ್ತು ನೈತಿಕತೆ ತೋರಿಸುತ್ತದೆ. ಇದು ಅಶ್ಲೀಲ ಪ್ರಕರಣ’ ಎಂದಿದ್ದಾರೆ.

ಇನ್ನು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ಫ್ಲೈಯಿಂಗ್ ಕಿಸ್ ಕುರಿತು ಕಾಂಗ್ರೆಸ್ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದು, ಲೋಕಸಭೆ ಸ್ಪೀಕರ್‌ಗೆ ದೂರು ಸಲ್ಲಿಸಿದ್ದಾರೆ. ರಾಹುಲ್‌ ಗಾಂಧಿಯ ನಡವಳಿಕೆಯನ್ನು ‘ಅನುಚಿತ’ ಎಂದಿರುವ ಅವರ ಪತ್ರಕ್ಕೆ ಹಲವು ಮಹಿಳಾ ಸಂಸದರು ಸಹಿ ಹಾಕಿರುವ ಮಾಹಿತಿ ಬೆಳಕಿಗೆ ಬಂದಿದೆ.

Comments are closed.