Own Flat Purchase : ನೀವು ಸ್ವಂತ ಮನೆಯ ಕನಸು ಕಾಣುತ್ತಿದ್ದೀರಾ ? ಈ ಖಾತೆಯೊಂದಿದ್ದರೆ ಸಾಕು ನಿಮ್ಮ ಕನಸು ನನಸಾಗುತ್ತೆ !!
Business news withdraw pf amount to Own Flat Purchase rules detailes
Own Flat Purchase: ಈಗಾಗಲೇ ಕೆಲವರು ಮನೆ ಕಟ್ಟಿರುತ್ತಾರೆ ಅಥವಾ ಖರೀದಿಸಿರುತ್ತಾರೆ. ಆದರೆ ಇನ್ನು ಕೆಲವರು ಮನೆ (home) ಖರೀದಿಸಲು ಯೋಜನೆ ರೂಪಿಸಿರುತ್ತಾರೆ. ಸ್ವಂತ ಮನೆ ಖರೀದಿಸುವ (Own Flat Purchase) ಕನಸು ಎಲ್ಲರಿಗೂ ಇರುತ್ತೆ. ಹೌದು, ಪುಟ್ಟದಾದರೂ ಸರಿ ಸ್ವಂತ ಮನೆಯನ್ನು ಹೊಂದಿರಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ, ಇಂದಿನ ದಿನದಲ್ಲಿ ಮನೆ ಖರೀದಿಸೋದು ಭಾರೀ ಕಷ್ಟ. ಆದರೆ, ಈ ಖಾತೆಯೊಂದಿದ್ದರೆ ಸಾಕು ನಿಮ್ಮ ಸ್ವಂತ ಮನೆಯ ಕನಸು ನನಸಾಗುತ್ತೆ!.
ಮನೆ ಖರೀದಿಸಲು ಕನಸು ಕಾಣುವ ಮಂದಿಗೆ ಇಪಿಎಫ್ಒ (EPFO) ಸಾಥ್ ನೀಡಲಿದೆ. ಭಾರತೀಯ ನಾಗರಿಕರಿಗೆ ಉದ್ಯೋಗಿಗಳ (work) ಭವಿಷ್ಯ ನಿಧಿಯನ್ನು ನಿರ್ವಹಣೆ ಮಾಡುವ ಸಂಸ್ಥೆಯಾದ ಇಪಿಎಫ್ಒ (EPFO) ನಿಧಿ ಹಣಕಾಸು ಸುರಕ್ಷತೆಯನ್ನು ಜನರಿಗೆ ನೀಡುತ್ತದೆ. ಈ ಯೋಜನೆಯಲ್ಲಿ ನಾವು ಹಣವನ್ನು ಹೂಡಿಕೆ ಮಾಡುವುದು ಮಾತ್ರವಲ್ಲದೆ ನಾವು ಹೂಡಿಕೆ ಮಾಡಿದ ಮೊತ್ತವು ತುಂಬಾನೇ ಸುರಕ್ಷಿತವಾಗಿರುತ್ತದೆ.
ಮನೆ ಖರೀದಿಗೆ ನೀವು ಇಪಿಎಫ್ನಲ್ಲಿ ಠೇವಣಿ ಮಾಡಿದ ಮೊತ್ತವನ್ನು ಬಳಸಬಹುದು. ಇಪಿಎಫ್ ಠೇವಣಿ ಮಾಡಿದ ಮೊತ್ತವನ್ನು ಪ್ರತಿ ತಿಂಗಳು ಉದ್ಯೋಗಿಗಳ ವೇತನದಿಂದ ಕಡಿತಗೊಳಿಸಲಾಗುತ್ತದೆ. ಮನೆ ಖರೀದಿಗಾಗಿ ಯಾವುದೇ ಉದ್ಯೋಗಿ ತನ್ನ ಸಕ್ರಿಯ EPF ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಅಂದಹಾಗೆ, ಈ ಮೊತ್ತವನ್ನು ಮರಳಿ ಪಡೆಯಲು ಎರಡು ಮಾರ್ಗಗಳಿವೆ.
• ಇಪಿಎಫ್ನ ಭಾಗಶಃ ವಾಪಸಾತಿ ವಿಧಾನದ ಅಡಿಯಲ್ಲಿ, ಇಪಿಎಫ್ಒ ಸದಸ್ಯರು ಪಿಎಫ್ನಿಂದ ಹಣವನ್ನು ಹಿಂಪಡೆಯಬಹುದು. ನಿಮ್ಮ ಇಪಿಎಫ್ ಸದಸ್ಯತ್ವವು 5 ವರ್ಷಗಳಾಗಿದ್ದರೆ, ಇಪಿಎಫ್ ಖಾತೆಯಿಂದ ನೀವು ಪ್ಲಾಟ್ ಖರೀದಿಸಲು ಮಾಸಿಕ ಸಂಬಳದ 24 ಪಟ್ಟು ಮತ್ತು ಮನೆ ಖರೀದಿಸಲು ಅಥವಾ ನಿರ್ಮಿಸಲು ಮಾಸಿಕ ವೇತನದ 36 ಪಟ್ಟು ವರೆಗೆ ಹಿಂಪಡೆಯಬಹುದು. ನಿಮ್ಮ ಉದ್ಯೋಗದಾತರ ಕೊಡುಗೆ ಮತ್ತು ಬಡ್ಡಿ ಎರಡನ್ನೂ ಹಿಂಪಡೆಯಬಹುದು.
ಹಣ ಹಿಂಪಡೆಯುವಿಕೆ :-
• ಹಣವನ್ನು ಹಿಂಪಡೆಯಲು, ಮೊದಲು EPFO ನ ಅಧಿಕೃತ ವೆಬ್ಸೈಟ್ https://unifiedportal-mem.epfindia.gov.in/memberinterface/ ಗೆ ಭೇಟಿ ನೀಡಿ
• ಯುಎಎನ್ ಸಂಖ್ಯೆ, ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಲಾಗಿನ್ ಆಗಿ.
• KYC ಆಯ್ಕೆಯಲ್ಲಿ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ. ಆನ್ಲೈನ್ ಸೇವೆಗೆ ಹೋಗಿ ಮತ್ತು CLAIM (FORM-31, 19&10C) ಕ್ಲಿಕ್ ಮಾಡಿ.
• EPF ಹಣವನ್ನು ಹಿಂಪಡೆಯಲು ಕೆಲವು ಆಯ್ಕೆಗಳಿರುತ್ತವೆ. ಆಯ್ಕೆ ಮಾಡಿ.
• ಡ್ರಾಪ್ ಮೆನು ತೆರೆಯುತ್ತದೆ. ಗೋ ಟು ಆನ್ಲೈನ್ ಕ್ಲೈಮ್ ಆಯ್ಕೆಯನ್ನು ಕ್ಲಿಕ್ ಮಾಡಿ ಕ್ಲೈಮ್ ಫಾರ್ಮ್ ಅನ್ನು ಸಲ್ಲಿಸಿ.
• EPF ನಿಂದ ಹಿಂತೆಗೆದುಕೊಳ್ಳಲಾದ ಮೊತ್ತವು ಸುಮಾರು 10 ದಿನಗಳಲ್ಲಿ ನಿಮ್ಮ ಖಾತೆಗೆ ಬರುತ್ತದೆ.
• ನೀವು EPFOನಿಂದ ಹಣವನ್ನು ಹಿಂಪಡೆಯಲು ಬಯಸಿದರೆ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ವಸತಿ ಯೋಜನೆಯಡಿ ಇಪಿಎಫ್ನ ಶೇ 90ರಷ್ಟು ಹಣವನ್ನು ಹಿಂಪಡೆಯುವ ಅವಕಾಶ ನೀಡುತ್ತದೆ. ಹೋಮ್ ಲೋನ್ ಮರುಪಾವತಿ ಯೋಜನೆಯಡಿಯಲ್ಲಿ, ಇಪಿಎಫ್ಒ ಸದಸ್ಯರು ತಮ್ಮ ಪಿಎಫ್ ಖಾತೆಯಿಂದ ಗೃಹ ಸಾಲಕ್ಕಾಗಿ ಮಾಸಿಕ ಇಎಂಐ ಅನ್ನು ಸಹ ಪಾವತಿಸಬಹುದಾಗಿದೆ.
ಇಪಿಎಫ್ಒ ವಸತಿ ಯೋಜನೆಯ ಮೂಲಕ ಹಣವನ್ನು ಹಿಂಪಡೆಯಲು, ನೀವು 10 ಸದಸ್ಯರೊಂದಿಗೆ ವಸತಿ ಉದ್ದೇಶಕ್ಕಾಗಿ ರಚಿಸಲಾದ ಸಹಕಾರಿ ಅಥವಾ ಸೊಸೈಟಿಯ ಸದಸ್ಯರಾಗಿರಬೇಕು.
ಇಪಿಎಫ್ಒ ಸದಸ್ಯರು 3 ವರ್ಷಗಳವರೆಗೆ ಇಪಿಎಫ್ಗೆ ಕೊಡುಗೆ ನೀಡಿರಬೇಕು. ಒಬ್ಬರ ಖಾತೆಯಲ್ಲಿ ಪಿಎಫ್ ಹಣ 20 ಸಾವಿರಕ್ಕಿಂತ ಕಡಿಮೆ ಇದ್ದರೆ, ಅವರು ಅದನ್ನು ಪಡೆಯಲು ಸಾಧ್ಯವಿಲ್ಲ. ಯಾವುದೇ ಸದಸ್ಯರು ಈ ಯೋಜನೆಯನ್ನು ಒಮ್ಮೆ ಮಾತ್ರ ಪಡೆಯಬಹುದು.
Comments are closed.