RBI: `ಮಿನಿಮಮ್ ಬ್ಯಾಲೆನ್ಸ್’ ಕಾಯ್ದುಕೊಳ್ಳದವರಿಗೆ ಬಿಗ್ ಶಾಕ್ : ಬರೋಬ್ಬರಿ 21,000 ಕೋಟಿ ರೂ. ದಂಡ ಹಾಕಲಿದೆ RBI

business news bank account holders not maintaining minimum balance fine charged about 21 thousand crore rupees

RBI: ಬ್ಯಾಂಕ್ (Bank) ಗ್ರಾಹಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ‘ಮಿನಿಮಮ್ ಬ್ಯಾಲೆನ್ಸ್’ (Minimum Balance) ಕಾಯ್ದುಕೊಳ್ಳದವರಿಗೆ ಇದೀಗ RBI ಬಿಗ್ ಶಾಕ್ ನೀಡಿದೆ. ಹೌದು, ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ ಅದಕ್ಕೆ ದಂಡ ನಿಗದಿತ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸಿದರೆ ಹೆಚ್ಚುವರಿ ಶುಲ್ಕ ಹಾಗೂ ಎಸ್ಎಂಎನ್ ಸಂದೇಶಕ್ಕೆ ಶುಲ್ಕ ವಿಧಿಸಲಾಗುತ್ತಿದೆ.

ಆರ್’ಬಿಐ ಬ್ಯಾಂಕ್ ಖಾತೆದಾರರಿಗೆ ಕೆಲವು ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಇದರಲ್ಲಿ ಗ್ರಾಹಕರು ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು, ನಿಗದಿತ ಸಂಖ್ಯೆಯ ಎಟಿಎಂ ವಹಿವಾಟು, ಎಸ್ಎಂಎಸ್ ಸೇವಾ ಶುಲ್ಕ ಇತ್ಯಾದಿ ಒಳಗೊಂಡಿದೆ.
ಇದೀಗ `ಮಿನಿಮಮ್ ಬ್ಯಾಲೆನ್ಸ್’ ಕಾಯ್ದುಕೊಳ್ಳದವರಿಗೆ ಬರೋಬ್ಬರಿ 21,000 ಕೋಟಿ ರೂ. ದಂಡ ಬೀಳಲಿದೆ.

ರಾಜ್ಯಸಭೆಯಲ್ಲಿ ಹಣಕಾಸು ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ. ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳದಿರುವುದಕ್ಕೆ 21,044.04 ಕೋಟಿ ರೂಪಾಯಿ, ಎಸ್ಎಂಎಸ್ ಶುಲ್ಕ 6,254.32 ಕೋಟಿ ರೂಪಾಯಿಗಳನ್ನು ಹಾಗೂ ಎಟಿಎಂ ಗಳಲ್ಲಿ ನಿಗದಿಗಿಂತ ಹೆಚ್ಚುವರಿ ವಹಿವಾಟಿನ ಶುಲ್ಕವಾಗಿ 8,289 32 ಕೋಟಿ ರೂಪಾಯಿ ಬ್ಯಾಂಕುಗಳು ಸಂಗ್ರಹಿಸಿದೆ.

2018 ರಿಂದ ಬ್ಯಾಂಕುಗಳು ಬರೋಬ್ಬರಿ 35,587.68 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

Comments are closed.