ಸೌಜನ್ಯ ಪ್ರಕರಣ: ನ್ಯಾಯಕ್ಕಾಗಿ ಸುಳ್ಯದಲ್ಲಿ ಆ.8(ಇಂದು) ರಂದು ವಾಹನ ಜಾಥಾ; ಬೃಹತ್ ಸಂಖ್ಯೆಯ ಜನ ಪ್ರತಿಭಟನೆಗೆ ರಸ್ತೆಗೆ ಇಳಿಯುವ ಸಾಧ್ಯತೆ !
Sullia news vehicle rally on August 8 in sullia for Dharmasthala sowjanya rape and murder case justice

Sowjanya murder case protest:ಧರ್ಮಸ್ಥಳ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Sowjanya murder case protest) ಇದೀಗ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದ್ದು ಹೋರಾಟದ ತೀವ್ರತೆ ಹೆಚ್ಚುತ್ತಿದೆ. ಕರಾವಳಿ ಭಾಗದಲ್ಲಿ ತಾಲ್ಲೂಕು, ತಾಲ್ಲೂಕುಗಳಲ್ಲಿ ಹೋರಾಟದ ಸಮಿತಿಗಳು ರಚನೆಗೊಂಡಿವೆ.

ಇದನ್ನೂ ಓದಿ: ಭಾರತದ ಕೊನೆಯ ಗ್ರಾಮ ಯಾವುದು ಗೊತ್ತಾ ? ಅರೆ, ಇದೇನು ಫಸ್ಟ್ – ಲಾಸ್ಟ್ ವಿಲೇಜ್ ?!
ಹೌದು, ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕರಾವಳಿ ಜನರು ಜಾಗೃತರಾಗಿದ್ದಾರೆ. ಈ ನಿಟ್ಟಿನಲ್ಲಿ ಹೋರಾಟ ಸಮಿತಿಗಳನ್ನು ರಚಿಸಿಕೊಂಡು ಜಾತಗಳನ್ನು ಮಾಡಿ ತನಿಖೆಗಾಗಿ ಸರ್ಕಾರದ ಗಮನ ಸೇರುತ್ತಿದ್ದಾರೆ. ಅಂತೆಯೇ ಸುಳ್ಯ ತಾಲೂಕಿನಲ್ಲೂ ಕೂಡ ಇಂತಹ ಒಂದು ಹೋರಾಟ ಸಮಿತಿ ರಚನೆಯಾಗಿದೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಮದುವೆಯಾಗಲು ಕೊನೆಗೂ ಸಿಕ್ಲು ಬ್ಯೂಟಿ ಫುಲ್ ಹುಡುಗಿ ! ಆದ್ರೆ ಒಂದು ಕಂಡೀಷನ್ ನಡೆಸಿ ಕೊಟ್ರೆ ಮಾತ್ರ !
ಅಂದಹಾಗೆ ಇಂದು(ಆಗಸ್ಟ್ 8) ಸುಳ್ಯದ ನಿಂತಿಕಲ್ಲಿನಿಂದ ಸುಳ್ಯ ನಗರದವರೆಗೆ ವಾಹನ ಜಾತಾ ಏರ್ಪಡಿಸಲಾಗಿದೆ. ಸಾಮಾಜಿಕ ಹೋರಾಟಗಾರ ಹಾಗೂ ಕಳೆದ 11 ವರ್ಷಗಳಿಂದಲೂ ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸಿಕೊಡಲು ಧಣಿವರಿಯದೆ ಶ್ರಮಿಸುತ್ತಿರುವ, ಹೋರಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಭಾಗವಹಿಸಲಿದ್ದಾರೆ. ಹಾಗೆಯೇ ಸೌಜನ್ಯಳ ತಾಯಿ ಕುಸುಮಾವತಿ ಕೂಡ ಪಾಲ್ಗೊಳ್ಳುತ್ತಾರೆ.
ನಂತರ ಸುಳ್ಯ ನಗರದಲ್ಲಿ ಜಾತವು ಸಮಾವೇಶಗೊಳ್ಳಲಿದ್ದು, ಸಭೆ ನಡೆಯಲಿದೆ. ಬಳಿಕ ಹೋರಾಟಗಾರರೆಲ್ಲರೂ ಸೇರಿ ತಹಶೀಲ್ದಾರರಿಗೆ ಮನವಿ ಪತ್ರ ನೀಡಿ ಮರು ತನಿಖೆ ಮಾಡುವಂತೆ ಸಿಎಂ ಗೆ ಈ ಮೂಲಕ ಮನವಿ ಮಾಡಲಿದ್ದಾರೆ.
ಇದನ್ನೂ ಓದಿ: ಶ್ರವಣರ ಊರು ಸವಣೂರಿನಲ್ಲಿ ಸೌಜನ್ಯಳ ಕೊಲೆಯ ನೈಜ ಆರೋಪಿಗಳ ಶಿಕ್ಷೆಗೆ ಆಗ್ರಹ; ಬೀದಿಗೆ ಇಳಿದ ಮಹಿಳೆಯರು, ಸಮಾನ ಮನಸ್ಕರು !

Comments are closed.