Traffic Rule: ಸರಕಾರಿ ನೌಕರರೇ ನಿಮಗಿದೋ ಶಾಕಿಂಗ್ ನ್ಯೂಸ್; ಬೈಕ್, ಕಾರು ಚಾಲನೆ ವೇಳೆ ಈ ನಿಯಮ ಕಡ್ಡಾಯ ಪಾಲನೆ!

Bidar news wear helmet while driving helmet and wear seat belt while driving car Bidar DC announcement to govt employees

Government Employee: ಸರಕಾರಿ ನೌಕರರಿಗೆ (Government Employee) ಶಾಕಿಂಗ್ ನ್ಯೂಸ್ ಇಲ್ಲಿದೆ. ಬೈಕ್, ಕಾರು ಚಾಲನೆ ವೇಳೆ ಈ ನಿಯಮ ಕಡ್ಡಾಯ ಪಾಲನೆ ಮಾಡಬೇಕು. ಹೌದು, ಬೀದರ್ ಜಿಲ್ಲೆಯಲ್ಲಿ ರಸ್ತೆ ಅಪಘಾತ ಹೆಚ್ಚಿದ್ದು, ಅನೇಕ ಸರ್ಕಾರಿ ನೌಕರರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಬೈಕ್, ಕಾರು ಚಾಲನೆ ವೇಳೆ ನಿಯಮ (Traffic Rule) ಕಡ್ಡಾಯ ಪಾಲನೆಗೆ ಜಿಲ್ಲಾಧಿಕಾರಿಯವರು‌ ಸುತ್ತೋಲೆ ಹೊರಡಿಸಿದ್ದಾರೆ.

ಸರ್ಕಾರಿ ನೌಕರರಿಗೆ ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಲು ಮತ್ತು ಕಾರು ಚಾಲನೆ ವೇಳೆಯಲ್ಲಿ ಸೀಟ್ ಬೆಲ್ಟ್ ಧರಿಸುವಂತೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೂಚನೆ ನೀಡಿದ್ದಾರೆ.

ಸಂಚಾರ ಮತ್ತು ರಸ್ತೆ ಸುರಕ್ಷತಾ ನಿಯಮ ಪಾಲಿಸದಿರುವುದು, ಹೆಮ್ಮೆಟ್ ಧರಿಸದಿರುವುದು, ಸೀಟ್ ಬೆಲ್ಟ್ ಹಾಕದಿರುವುದು ಸಾವಿಗೆ ಕಾರಣವಾಗಿದೆ. ಈ ಹಿನ್ನೆಲೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ವರ್ಷದ ಡಿಸೆಂಬರ್ ವರೆಗೆ ಬೀದರ್ ಜಿಲ್ಲಾ ಪೊಲೀಸ್ ಇಲಾಖೆಯಿಂದ ರಸ್ತೆ ಸುರಕ್ಷತಾ ಅಭಿಯಾನ ಕೈಗೊಳ್ಳಲಾಗಿದೆ.

ಬೀದರ್ ಜಿಲ್ಲೆಯಲ್ಲಿ 2020ರಲ್ಲಿ 15 ಜನ ಮೃತಪಟ್ಟಿದ್ದು, 2022 ರಲ್ಲಿ 332 ಮತ್ತು 2023ರಲ್ಲಿ 11 ಮಂದಿ ಸರ್ಕಾರದ ವಿವಿಧ ಇಲಾಖೆ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ. 2023ರ ಜುಲೈ ಅಂತ್ಯದವರೆಗೆ 197 ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹಾಗಾಗಿ ಸಾವಿನ ಸಂಖ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರಿ ವಾಹನ ಕಡ್ಡಾಯ ನಿಯಮ ಮಾಡಲಾಗಿದೆ.

ಇದನ್ನೂ ಓದಿ: Rahul Gandhi- Sherlyn Chopra: ರಾಹುಲ್ ಗಾಂಧಿಗೆ ಮದುವೆಯಾಗಲು ಕೊನೆಗೂ ಸಿಕ್ಲು ಬ್ಯೂಟಿ ಫುಲ್ ಹುಡುಗಿ, ಆದ್ರೆ ಒಂದು ಕಂಡೀಷನ್ ನಡೆಸಿ ಕೊಟ್ರೆ ಮಾತ್ರ !

Comments are closed.