Spandana Vijay Raghavendra: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವಿಗೆ ಇದೇನಾ ಅಸಲಿ ಕಾರಣ, ಅಬ್ಬಬ್ಬಾ.. ಭಯ ಹುಟ್ಟಿಸುತ್ತಿದೆ ಆ ಒಂದು ರೀಸನ್ ?
Spandana Vijay Raghavendra: ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ(Spandana Vijay Raghavendra) ಅವರು ತೀರಿಕೊಂಡಿದ್ದಾರೆ. ತೀವ್ರ ಹೃದಯಘಾತದಿಂದ ಸ್ಪಂದನ ಅವರು ಮರಣ ಹೊಂದಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿದ್ದ ಬಿಕೆ ಶಿವರಾಮ ಅವರ ಪುತ್ರಿ ಸ್ಪಂದನ ಅವರು ಒಂದರ್ಥದಲ್ಲಿ ರಾಜ್ ಕುಟುಂಬದ ಕುಡಿ. ರಾಜು ಕುಮಾರ್ ಅವರ ಪತ್ನಿ ರಾಘವೇಂದ್ರ ರಾಜಕುಮಾರ್ ಅವರ ತಮ್ಮ ಚಿನ್ಹೆಗೌಡರ ಮಗನೇ ಈ ಚಿನ್ನಾರಿ ಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ. ಇದೀಗ ಕೇವಲ 39 ವರ್ಷ ವಯಸ್ಸಿಗೆ ಸ್ಪಂದನ ರಾಘವೇಂದ್ರ ಅವರು ತೀರಿಕೊಂಡಿದ್ದಾರೆ. ಮಲಗದಲ್ಲಿಯೇ ಆಕೆಯ ಮರಣ ಆಗಿದೆ ಎನ್ನುವುದು ಇದೀಗ ತಾನೇ ಗೊತ್ತಾಗಿದೆ.
ಸ್ಪಂದನ ರಾಘವೇಂದ್ರ ಸಾವಿಗೆ ಕಾರಣ:
ಇದೀಗ ಸ್ಪಂದನ ರಾಘವೇಂದ್ರ ಅವರ ಸಾವಿಗೆ ಕಾರಣ ಹುಡುಕುವ ಕೆಲಸ ಶುರುವಾಗಿದೆ. ಕೇವಲ 39 ವರ್ಷ ವಯಸ್ಸಿನ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ಅವರಿಗೆ ಮೆನೋಪಾಸ್ ಆಗಿಲ್ಲ ಅಂದರೆ ಮುಟ್ಟು ನಿಂತಿಲ್ಲ. ಮುತ್ತು ನಿಂತ ನಂತರ ಮಹಿಳೆಯರಿಗೆ ಹೃದಯವಾತದ ಸಮಸ್ಯೆ ಸಾಮಾನ್ಯವಾಗಿ ಕಂಡು ಬರಬಹುದು ಮುಟ್ಟು ಆಗುತ್ತಾ ಇರುವ ಸಂದರ್ಭದಲ್ಲಿ ಮಹಿಳೆಯರಿಗೆ ಹೃದಯವಾತ ಆಗುವ ಸನ್ನಿವೇಶ ತೀರಾ ವಿರಳ. ಆದುದರಿಂದ ವಯಸ್ಸಿನ ಕಾರಣದಿಂದ ಹೃದಯಘಾತ ಆಗಿರುವ ಸಂದರ್ಭ ಸಾಧ್ಯತೆ ಕಡಿಮೆ.
ಇದನ್ನೂ ಓದಿ: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಹೃದಯಘಾತ! ಸ್ಯಾಂಡಲ್ ವುಡ್ ಗೆ ಭಾರಿ ಶಾಕ್ ಕೊಟ್ಟ ನಿಧನ ಸುದ್ದಿ
ಇನ್ನೊಂದು ಸಾಧ್ಯತೆ ಇದೀಗ ಚರ್ಚೆಯಾಗುತ್ತಿರುವುದು ಕೊರೊನಾ ಲಸಿಕೆ ಬಗ್ಗೆ. ಸ್ಪಂದನ ರವರು 2 ರಿಂದ 3 ಬಾರಿ ಕೊರೋನಾ ಲಸಿಕೆ ಪಡೆದುಕೊಂಡಿದ್ದರು. ಆ ಕಾರಣದಿಂದ ಅವರಿಗೆ ಹೃದಯಘಾತವಾಗಿದೆ ಎನ್ನುವ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದೀಗ ಹೃದಯ ತಜ್ಞರೊಬ್ಬರು ಇದನ್ನು ಖಂಡ ತುಂಡವಾಗಿ ತಿರಸ್ಕರಿಸಿದ್ದಾರೆ. ಇದರ ಮೂಲಕ ಕೊರೊನಾದ ಲಸಿಕೆಯ ಕಾರಣದಿಂದ ಹೃದಯಘಾತವಾಗುವ ಯಾವುದೇ ಸಾಧ್ಯತೆ ಇಲ್ಲ ಎನ್ನುವುದು ಅವರ ಅಭಿಪ್ರಾಯ.
ಸ್ಪಂದನಾ ಕೂಡಾ ಕೋವಿಡ್ ಸಂತ್ರಸ್ತೆ. ಕೋವಿಡ್ ನಂತರ ಆಕೆ ವೀಕ್ ಆಗಿದ್ದರು. ಇದು ಕೂಡಾ ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರದೆ ಇಲ್, ಎನ್ನಲಾಗುತ್ತಿದೆ. ಸ್ಪಂದನಾ ಅವರಿಗೆ ಲೊ ಬೀಪಿ ಇತ್ತು. ದೈಹಿಕವಾಗಿ ಸ್ವಲ್ಪ ವೀಕ್ ಆಗಿಯೇ ಇದ್ದರು. ಲೋ ಬೀಪಿ ಸಾವಿಗೆ ಕಾರಣ ಅಂತ ಕೂಡಾ ಹೇಳಲಾಗುತ್ತಿದೆ. ಅವರಿಗೆ ಮಲಗಿದ್ದಲ್ಲೇ ಹೃದಯಾಘಾತ ಆಗಿತ್ತು.
ಇದೀಗ ಹೃದಯ ತಜ್ಞರು ಒಬ್ಬರ ಅಭಿಪ್ರಾಯದ ಪ್ರಕಾರ, ಲೈಫ್ಸ್ಟೈಲ್ ಸಮಸ್ಯೆಯೇ ಸ್ಪಂದನ ಅವರ ಸಾವಿಗೆ ಕಾರಣ ಎನ್ನಲಾಗಿದೆ. ಸ್ಪಂದನ ಅವರು 40 ವರ್ಷದ ಆಸುಪಾಸಲ್ಲಿ ಇರುವ ಕಾರಣ ಅವರ ಆಹಾರ ಮತ್ತು ವಿಹಾರ ಅಂದರೆ ಲೈಫ್ ಸ್ಟೈಲ್ ಕಾರಣದಿಂದ ಅವರ ತೂಕ ಏರಿತ್ತು. ಇತ್ತೀಚೆಗೆ ಸ್ಪಂದನ ಅವರು ತಮ್ಮ ತೂಕ ಇಳಿಸಿಕೊಂಡಿದ್ದರು. ಅವರು ತೂಕ ಇಳಿಸಿಕೊಳ್ಳಲು ಮೊರೆ ಹೋದದ್ದು ಕೀಟೋ ಡಯಟ್. ಕಡಿಮೆ ಕಾರ್ಬೋಹೈಡ್ರೇಟ್ ಇರುವ ಹೆಚ್ಚಿನ ಕೊಬ್ಬಿನ ಮತ್ತು ಹೆಚ್ಚಿನ ಪ್ರೋಟೀನ್ ಅಂಶಗಳನ್ನು ಉಳ್ಳ ಆಹಾರ ಪದ್ಧತಿಯೇ ಕಿಟೋ ಡಯಟ್. ಈ ಕೀಟೋ ಡಯಟ್ ಜೊತೆಗೆ ಜಿಮ್ ಮಾಡಿದ್ದರು ಎನ್ನಲಾಗಿದೆ. ಈಗ ಬಂದ ಮಾಹಿತಿಗಳ ಪ್ರಕಾರ ತೂಕ ಇಳಿಸಿಕೊಂಡು ಸ್ಟ್ರಕ್ಚರ್ ಮೈನ್ಟೈನ್ ಮಾಡಲು ಹೊರಟ ಸ್ಪಂದನ ಅವರು ಕೀಟೋ ಡಯಟ್ ಗೆ ಮೊರೆ ಹೋಗಿದ್ದರು ಮತ್ತು ಜಿಮ್ಮಿನಲ್ಲಿ ಹೆಚ್ಚು ಕಾಲ ಕಾಲ ಕಳೆಯುತ್ತಿದ್ದರು. ಹಾಗೆ ಕಾಲ ಕಳೆದು ಬರೋಬ್ಬರಿ 16 ಕೆಜಿ ತೂಕ ಇಳಿಸಿಕೊಂಡಿದ್ದರು ಎನ್ನುವ ಮಾಹಿತಿ ಲಭ್ಯ ಆಗಿದೆ. ಇದುವೇ ಅವರ ಸಾವಿಗೆ ಮುನ್ನುಡಿ ಬರೆದಿತ್ತಾ ಎನ್ನುವ ಬಲವಾದ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಇದಕ್ಕೆ ಇಂದು ಕೊಡುವಂತೆ ಪುನೀತ್ ರಾಜಕುಮಾರ್ ಸಾವು ಕೂಡ ಇದೇ ರೀತಿ ಆಗಿತ್ತು.
ಪುನೀತ್ ರಾಜಕುಮಾರ್ ತನ್ನ 46ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು. ಸಣ್ಣ ಪ್ರಾಯದಿಂದಲೂ ಫಿಟ್ನೆಸ್ ಗೆ ಅತ್ಯಂತ ಮಹತ್ವ ಕೊಡುತ್ತಿದ್ದ ಪುನೀತ್ ರಾಜಕುಮಾರ್ ಅವರು ಅಥ್ಲೆಟಿಕ್ ಮತ್ತು ಕಾಪಾಡಿಕೊಂಡಿದ್ದರು. ಅವರಿಗೆ ಪವರ್ ಸ್ಟಾರ್ ಅನ್ನುವ ಬಿರುದು ಕೊಟ್ಟದ್ದು ಸಾರ್ಥಕ ಅನ್ನುವಂತಿತ್ತು ಅವರ ಫಿಟ್ ನೆಸ್ ಲೆವೆಲ್. ಅಂತಹ ಲವಲವಿಕೆಯ ಹುಡುಗ ದೇಹಕ್ಕೆ ತಕ್ಕ ತೂಕ, ತೂಕಕ್ಕೆ ತಕ್ಕ. ಊಟ, ಊಟಕ್ಕೆ ತಕ್ಕ ವ್ಯಾಯಾಮ ಎಲ್ಲವನ್ನು ಸರಿಯಾಗಿ ಮಾಡಿದ್ದರೂ, ಕೇವಲ 46 ನೆಯ ವಯಸ್ಸಿಗೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಪುನೀತ್ ಕೂಡ ವಿಪರೀತವಾಗಿ ಜಿಮ್ ನಲ್ಲಿ ಕಾಲ ಕಳೆಯುತ್ತಿದ್ದರು. ಹೆಚ್ಚು ಕಾಲ ಜಿಮ್ ಮಾಡುವುದು ಫಿಟ್ನೆಸ್, ಅಂದರೆ ದೈಹಿಕ ಸಾಮರ್ಥ್ಯವನ್ನು ನೀಡಬಹುದು. ಆದರೆ ಅದು ಹೃದಯಕ್ಕೆ ಬಲ ನೀಡಿಯೇ ನೀಡುತ್ತದೆ ಎನ್ನುವುದನ್ನು ಹೇಳಲು ಆಗುವುದಿಲ್ಲ. ದೇಹ ಬಲಿಶಾಲಿಯಾದರು ಹೃದಯ ವೀಕ್ ಆದರೆ ಇಂತಹ ಹೃದಯಘಾತದ ಅಥವಾ ಹೃದಯ ಸ್ತಂಬನದ ಸಾಧ್ಯತೆ ಹೆಚ್ಚಿರುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯ.
ಇದನ್ನೂ ಓದಿ: ಏನಿದು ರಾಜ್ ಕುಟುಂಬಕ್ಕೆ ಹೃದಯ ಕಂಟಕ? ಪುನೀತ್ ರಾಜ್ ನಿಧನದ ಬೆನ್ನಲ್ಲೇ ಮತ್ತೊಂದು ಎಳೆಯ ರಾಜ್ ಕುಡಿ ನಿರ್ಗಮನ !
ಈ ಮೂಲಕ ಸದ್ಯಕ್ಕೆ ದೊರೆತ ಮಾಹಿತಿ ಪ್ರಕಾರ, ತನ್ನ ಫಿಟ್ನೆಸ್ ಆಕಾಂಕ್ಷೆಯೇ ಸ್ಪಂದನ ರಾಘವೇಂದ್ರ ಅವರ ಸಾವಿಗೆ ಕಾರಣ ಆಯ್ತಾ ಎನ್ನುವ ದೊಡ್ಡ ಪ್ರಶ್ನೆ ಮತ್ತು ಅನುಮಾನ ಬಲಗೊಳ್ಳುತ್ತಿದೆ. ಸೆಲೆಬ್ರಿಟಿಗಳು ಮತ್ತು ಸಿನಿಮಾ ತಾರೆಯರು ಮಾಡಲ್ ಗಳು ಈ ದೇಹ ಸೌಂದರ್ಯದ ಹಿಂದೆ ಬಿದ್ದು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಂಡು ತಮ್ಮ ಕುಟುಂಬವನ್ನು ದುಃಖದ ಮಡಿಲಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಇದೆಲ್ಲಾ ಸಾಧುವೆ ಎನ್ನುವ ಪ್ರಶ್ನೆಯ ಜೊತೆ ನಿಮ್ಮನ್ನು ಯೋಚನೆಗೆ ಹಚ್ಚುತ್ತಾ ಮತ್ತಷ್ಟು ವಿಷಯಗಳ ಬಗ್ಗೆ ಸದ್ಯದಲ್ಲೇ ಮಾಹಿತಿ ನಿಮಗೆ ನೀಡಲಿದ್ದೇವೆ.
Comments are closed.