Snake and Ladder Board Game: ಹಾವು ಏಣಿ ಆಟದ ಹಿನ್ನೆಲೆ ನಿಮಗೆ ತಿಳಿದಿದೆಯೇ?
Snake and ladder game intresting details of snake and ladder board game
Snake and Ladder Game : ಬಾಲ್ಯವೆಂಬ ಸುಂದರ ಜೀವನದಲ್ಲಿ ನಾವು ಆಡಿದ ಆಟ ತುಂಟಾಟದ ಬಗ್ಗೆ ಒಮ್ಮೆ ಯೋಚಿಸಿದರೆ ಸುಂದರ ನಗುವೊಂದು ಹಾದುಹೋಗುತ್ತದೆ. ಅದರಲ್ಲಿಯೂ ಬಾಲ್ಯದ ದಿನಗಳಲ್ಲಿ ಆಡುತ್ತಿದ್ದ ಲಗೋರಿ, ಕ್ರಿಕೆಟ್, ಕಣ್ಣ ಮುಚ್ಚಾಲೆ, ಖೋಖೋ, ಚೆಸ್,ಲುಡೋ , ಹಾವು ಏಣಿ ಹೀಗೆ ನಾನಾ ರೀತಿಯ ಒಳಾಂಗಣ ಹೊರಾಂಗಣ ಆಟಗಳನ್ನು ನಾವೆಲ್ಲ ಆಡಿರುತ್ತೇವೆ. ಇಲ್ಲಿ ನಾವು ಇಂದು ಹಾವು ಏಣಿ ಆಟದ (Snake and Ladder Game) ಹಿನ್ನೆಲೆ ತಿಳಿಸಲಿದ್ದೇವೆ.
ಆಟಗಳು ಎಲ್ಲ ವಯೋಮಾನದವರು ಕೂಡ ಆಸಕ್ತಿಯಿಂದಲೋ, ಇಲ್ಲವೇ ಹವ್ಯಾಸಕ್ಕಾಗಿ ಅಥವಾ ಮೋಜಿಗಾಗಿ ಹೀಗೆ ನಾನಾ ಕಾರಣಗಳಿಂದ ಚೆಸ್,(chess) ಲುಡೋ, (Ludo)ಕ್ಯಾರಂ, ಹಾವು ಏಣಿ ಹೀಗೆ ವಿಭಿನ್ನ ಆಟಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ತೊಡಗಿಸಿಕೊಳ್ಳೋದು ಕಾಮನ್. ಸಾಮಾನ್ಯವಾಗಿ ಯಾವುದೇ ಆಟಕ್ಕಾದರು ಬುದ್ದಿವಂತಿಕೆ ಇಲ್ಲವೇ ದೈಹಿಕ ಶ್ರಮ ಬೇಕಾಗುತ್ತದೆ. ಆದರೆ, ಹಾವು- ಏಣಿ(Snake and Ladder Game) ಆಟಕ್ಕೆ ಬುದ್ದಿವಂತಿಕೆಯ ಅವಶ್ಯಕತೆ ಇಲ್ಲ. ಹೀಗಾಗಿ, ಈ ಆಟ ಎಂದರೆ ಹೆಚ್ಚಿನವರ ಪಾಲಿನ ಫೇವರೇಟ್ ಎಂದರೆ ತಪ್ಪಾಗದು. ಆದರೆ, ಈ ಹಾವು ಏಣಿ ಆಟದ ಹಿನ್ನೆಲೆ ಏನು?? ಈ ಆಟ ಶುರುವಾಗಿದ್ದು ಹೇಗೆ ಎಂಬ ಕುತೂಹಲಕಾರಿ ಮಾಹಿತಿ ನಿಮಗಾಗಿ.
ಸಹಜವಾಗಿ, ಹಾವು- ಏಣಿ ಆಟದ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಆದರೆ, ಇದು ಹುಟ್ಟಿಕೊಂಡಿದ್ದು ಎಲ್ಲಿ ಗೊತ್ತೇ??ಹಿಂದಿನ ಕಾಲದಲ್ಲಿ, ಈ ಆಟವನ್ನು ‘ಮೋಕ್ಷಪತ್’ ಅಥವಾ ‘ಮೋಕ್ಷ ಪಟಮು’ ಎಂದು ಕರೆಯುತ್ತಿದ್ದರಂತೆ. ಈ ಆಟವನ್ನು ಮೊದಲ ಬಾರಿಗೆ ಮಕ್ಕಳಿಗೆ ನೈತಿಕತೆಯ ಪಾಠವನ್ನು ಕಲಿಸಲು ಆರಂಭಿಸಲಾಗಿತ್ತಂತೆ. ಇತಿಹಾಸಕಾರರ ಪ್ರಕಾರ ಹಾವು-ಏಣಿ ಆಟವನ್ನು ಕ್ರಿಸ್ತಪೂರ್ವ ಎರಡನೇ ಶತಮಾನದಲ್ಲಿ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಪ್ರಾರಂಭಿಸಲಾಯಿತು.ಆದರೆ ಇನ್ನು ಕೆಲವರು ಈ ಆಟವನ್ನು13 ನೇ ಶತಮಾನದಲ್ಲಿಯೇ ಸ್ವಾಮಿ ಜ್ಞಾನದೇವ ಈ ಆಟವನ್ನು ಅನ್ವೇಷಣೆ (invention)ಮಾಡಿದ್ದಾರೆ ಎಂದು ಹೇಳುತ್ತಾರೆ.
ಹತ್ತೊಂಬತ್ತನೇ ಶತಮಾನದ ವೇಳೆಗೆ ಈ ಆಟವು ಬ್ರಿಟಿಷರಲ್ಲಿ ಬಹಳ ಪ್ರಸಿದ್ದಿ ಪಡೆದು, ಈ ಆಟವು(games) ಇಂಗ್ಲೆಂಡ್(England) ಮುಖಾಂತರ ಅನೇಕ ಬ್ರಿಟಿಷ್ ವಸಾಹತುಗಳಿಗೆ ಹಬ್ಬಿದೆ ಎನ್ನಲಾಗಿದೆ. ಇದಲ್ಲದೆ, ಆಟವು 1943 ರಲ್ಲಿ ಯುನೈಟೆಡ್ ಸ್ಟೇಟ್ಸ್ (united states)ನಲ್ಲಿ ಆಡಲೂ ಶುರು ಮಾಡಿದ್ದು, ಇದನ್ನು “ಶೂಟ್ ಮತ್ತು ಲೋಡರ್” ಎಂದು ಕೂಡ ಕರೆಯುತ್ತಿದ್ದರು.
ಇತ್ತೀಚೆಗೆ ನಾವೆಲ್ಲ ಮನೆಯಲ್ಲಿ ಎಲ್ಲರೂ ಸೇರಿದ ಖುಷಿಯಲ್ಲಿ ಹಾವು ಏಣಿ ಆಟ ಆಡಿದರೆ, ಈ ಹಿಂದೆ ಮಕ್ಕಳಿಗೆ ನೈತಿಕ ಭೋಧನೆ ಮಾಡುವ ಸಲುವಾಗಿ ಕರ್ಮ ಮತ್ತು ಕಾಮ (ಮೋಕ್ಷ ಮತ್ತು ಆಸೆ) ಸುಂದರ ಜೀವನ ರೂಪಿಸಿಕೊಳ್ಳಲು ಈ ಆಟವನ್ನೇ ನಿದರ್ಶನವಾಗಿರಿಸಿ ಮಕ್ಕಳಿಗೆ ಸನ್ಮಾರ್ಗ ದಲ್ಲಿ ನಡೆಯಲು ಹಿರಿಯರು ಮಾರ್ಗದರ್ಶನ ಮಾಡುತ್ತಿದ್ದರು ಎನ್ನಲಾಗಿದೆ.
ಇನ್ನು ಮೂಲ ಆಟದಲ್ಲಿ, ಕೇವಲ 5 ಚೌಕಗಳಲ್ಲಿ ಏಣಿಗಳಿದ್ದವಂತೆ. ನಂಬಿಕೆ (12), ವಿಶ್ವಾಸಾರ್ಹತೆ (51), ಔದಾರ್ಯ (57), ಜ್ಞಾನ (76) ಮತ್ತು ತಪಸ್ವಿ (78) ಇದು ಒಳ್ಳೆಯ ಗುಣವನ್ನು ಪ್ರತಿನಿಧಿಸುತ್ತಿದ್ದ ವರ್ಗವಾಗಿತ್ತು.ಹಾವು ಏಣಿ ಆಟ ನಮ್ಮ ನಿಜ ಜೀವನಕ್ಕೆ ಎಷ್ಟೊಂದು ಗಾಢ ಅರ್ಥ ನೀಡುತ್ತದೆ. ಮೂಲ ಆಟದಲ್ಲಿ ಏಣಿಗಳಿಗಿಂತ ಹೆಚ್ಚು ಹಾವುಗಳನ್ನು ಒಳಗೊಂಡಿತ್ತು ಎನ್ನಲಾಗಿದೆ.
ದುಷ್ಟತನದ ಜೀವನ ಶೈಲಿ ಸುಗಮ ಎನಿಸಬಹುದು. ಅದೇ ರೀತಿ ಒಳ್ಳೆಯತನದ ಹಾದಿಯಲ್ಲಿ ಕಲ್ಲು ಮುಳ್ಳುಗಳ ಹಾದಿ ಸಿಕ್ಕರೂ ಕೂಡ ಮುಕ್ತಿ ಇಲ್ಲವೇ ಮೋಕ್ಷ ಒಳ್ಳೆಯತನದ ಮೂಲಕ ಪಡೆಯಬಹುದು ಎಂಬುದನ್ನು ಸಂಕೇತಿಸುತ್ತಿತ್ತು. ಏಣಿಗಳು ಒಳ್ಳೆಯ ಕಾರ್ಯಗಳನ್ನು ಪ್ರತಿನಿಧಿಸಿದರೆ, ಹಾವುಗಳು ನಾವು ಮಾಡುವ ಎಲ್ಲಾ ಕೆಟ್ಟ ಕಾರ್ಯಗಳನ್ನು ಸೂಚಿಸುತ್ತವೆ.
ಇದನ್ನು ಹೊರತುಪಡಿಸಿ,ಇನ್ನುಳಿದ 13 ಚೌಕಗಳಲ್ಲಿ ಹಾವು ಗಳಿತ್ತು. ಅಸಹಕಾರ (41), ಆಡಂಬರ (44), ಅಸಭ್ಯತೆ (49), ಕಳ್ಳತನ (52), ಸುಳ್ಳು (58), ಕುಡಿತ (62), ಸಾಲ (69), ಕೊಲೆ (73), ಕ್ರೋಧ (84) ), ದುರಾಸೆ (92), ಹೆಮ್ಮೆ (95) ಮತ್ತು ಕಾಮ (99)ಇವು 13 ಚೌಕದ ಹಾವುಗಳು ಪಾಪವನ್ನು ಕರ್ಮವನ್ನು ಪ್ರತಿನಿಧಿಸುತ್ತಿತ್ತು ಎನ್ನಲಾಗಿದೆ. ನಾವು ಮಾಡುವ ಎಲ್ಲಾ ಒಳ್ಳೆಯ ಕಾರ್ಯಗಳು ನಮ್ಮನ್ನು 100 ರ ಸನಿಹಕ್ಕೆ ಸಾಗಲೂ ನೆರವಾಗುತ್ತವೆ.
ಇದು ಮೋಕ್ಷವನ್ನು ಸಂಕೇತಿಸುತ್ತದೆ. ಆದರೆ ನಾವು ತೊಡಗಿಸಿಕೊಳ್ಳುವ ಕೆಟ್ಟ ಕಾರ್ಯಗಳು ನಾವು ಕೀಳು ಮಟ್ಟದಲ್ಲಿ ಜೀವನ ನಡೆಸಲು ಕಾರಣವಾಗುತ್ತದೆ. ಇದೇ ಮಾರ್ಗದಲ್ಲಿ ಸಾಗಿದರೆ ಮೋಕ್ಷದ ದಾರಿಯನ್ನು ಹಿಡಿಯಲು ಸಾಧ್ಯವಿಲ್ಲ ಎಂಬ ಸೊಗಸಾದ ಜೀವನ ಪಾಠವನ್ನು ಹಾವು -ಏಣಿ ಆಟ ಹೇಳಿಕೊಡುತ್ತದೆ ಎಂಬುದನ್ನು ಈ ಹಿಂದೆಯೇ ನಮ್ಮ ಹಿರಿಯರು ಕಂಡುಹಿಡಿದಿದ್ದಾರೆ.
ಇದನ್ನೂ ಓದಿ: Viral News: ಈ ಊರಿನಲ್ಲಿ ಸೊಳ್ಳೆ ಹುಡುಕಿ ಕೊಟ್ಟರೆ ನಿಮಗೆ ಕೈ ತುಂಬಾ ದುಡ್ಡು ಕೊಡ್ತಾರೆ! ಯಾಕೆ ಗೊತ್ತಾ?
Comments are closed.