Home latest Gruhajyothi Scheme: ಇನ್ನೂ ಬೆಳಗದ ಗೃಹಜ್ಯೋತಿ: ನೋಂದಣಿ ಆಗಿದ್ರೂ ಬಿಲ್ ಬಂದ್ರೆ ಏನು ಮಾಡ್ಬೇಕು ?

Gruhajyothi Scheme: ಇನ್ನೂ ಬೆಳಗದ ಗೃಹಜ್ಯೋತಿ: ನೋಂದಣಿ ಆಗಿದ್ರೂ ಬಿಲ್ ಬಂದ್ರೆ ಏನು ಮಾಡ್ಬೇಕು ?

Gruhajyoti Scheme
Image source: ಕನ್ನಡ ಪ್ರಭ

Hindu neighbor gifts plot of land

Hindu neighbour gifts land to Muslim journalist

GruhaJyoti Scheme: ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress 5 Guarantee) ಜಾರಿಗೆ ತಂದಿದೆ. ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯ (GruhaJyoti Scheme) ಬಗ್ಗೆ ಹಲವರಿಗೆ ಗೊಂದಲವಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.

ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿದರೂ ಇನ್ನೂ ಶೂನ್ಯ‌ ವಿದ್ಯುತ್ ದರ ಬಂದಿಲ್ಲ. ಯಾವಾಗದಿಂದ ಉಚಿತ ವಿದ್ಯುತ್ ಸಿಗಲಿದೆ? ಹಾಗೂ ನೋಂದಣಿ ಆಗಿದ್ರೂ ಬಿಲ್ ಬಂದ್ರೆ ಏನು ಮಾಡ್ಬೇಕು? ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಗೃಹಜ್ಯೋತಿ ಯೋಜನೆಯಡಿ ನೋಂದಣಿ ಅಗಿರುವ ಕೆಲವು ಗ್ರಾಹಕರಿಗೆ ಜುಲೈ ತಿಂಗಳ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ಬದಲಿಗೆ ಬಳಕೆ ಮಾಡಿದ ವಿದ್ಯುತ್ ಬಿಲ್ ನೀಡಲಾಗಿದೆ. ಇಂಧನ ಇಲಾಖೆಯ ಆದೇಶದ ಅನ್ವಯ ಜುಲೈ 27ಕ್ಕೆ ಮೊದಲೇ ನೋಂದಣಿ ಮಾಡಿಸಿದ್ದರೂ ಬಿಲ್ ಬಂದಿರುವ ಕಾರಣ, ಕೆಲವು ಗ್ರಾಹಕರು ಬಿಲ್ ಪಾವತಿಸಬೇಕೆ, ಬೇಡವೇ ಎನ್ನುವ ಗೊಂದಲದಲ್ಲಿದ್ದಾರೆ.

ಇದುವರೆಗೆ 1.41 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿವೆ. ಇವರೆಲ್ಲರಿಗೂ ಆಗಸ್ಟ್ ನಿಂದ ಶೂನ್ಯ ಬಿಲ್ ಬರಲಿದೆ ಎಂದು ಹೇಳಲಾಗಿತ್ತು. ಆದರೆ ಜುಲೈ 27ಕ್ಕೆ ಮೊದಲೇ ನೋಂದಾಯಿಸಿದ್ದರೂ ಶೂನ್ಯ ಬಿಲ್ ಬಂದಿಲ್ಲ. ನೋಂದಣಿ ಆಗಿದ್ರೂ ಬಿಲ್ ಬಂದ್ರೆ ಏನು ಮಾಡ್ಬೇಕು? ಬಿಲ್ ಬಂದ್ರೆ ಬಿಲ್ ಕಟ್ಟದೆ, ಬಿಲ್ ತೆಗೆದುಕೊಂಡು ಕೆಬಿ ಸಂಪರ್ಕಿಸಿ ಹಾಗೂ ಬಿಲ್ ಕರೆಕ್ಷನ್ ಮಾಡಲು ಹೇಳಿ. ಇದಕ್ಕೆ ಒಪ್ಪದಿದ್ದಲ್ಲಿ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ.

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಗೃಹಜ್ಯೋತಿ ಯೋಜನೆ (Gruha Jyothi Scheme) ಆಗಸ್ಟ್ ಒಂದರಿಂದ ಅಧಿಕೃತವಾಗಿ ಆರಂಭವಾಗಲಿದ್ದು, ಜುಲೈ 25 ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಿರುವ ಫಲಾನುಭವಿಗಳಿಗೆ ಮಾತ್ರ ಉಚಿತ ವಿದ್ಯುತ್​ನ ಲಾಭ ದೊರೆಯಲಿದೆ. ಗೃಹಜ್ಯೋತಿ ಯೋಜನೆಗೆ ಜೂನ್ 18 ರಿಂದಲೇ ಅರ್ಜಿ ಹಾಕುವ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು.

ಇದನ್ನೂ ಓದಿ: Curry Leaves Preservation: ಕರಿಬೇವು ಹಾಳಾಗದೆ ಹಲವು ದಿನ ಫ್ರೆಶ್ ಆಗಿರಲು ಈ ಟಿಪ್ಸ್​ ಫಾಲೋ ಮಾಡಿ !!!