Gruhalakshmi scheme: ಗೃಹಲಕ್ಷ್ಮೀ ಜಾರಿ ದಿಢೀರ್ ಮುಂದೂಡಿಕೆ ? ‘ಯಜಮಾನಿ ‘ ಮುಖದಲ್ಲಿ ಚಿಂತೆಯ ಗೆರೆ !

Latest Karnataka news Congress guarantee gruhalakshmi scheme update details in Kannada

Gruhalakshmi scheme: ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹ ಲಕ್ಷ್ಮೀ’ ಗ್ಯಾರಂಟಿ ಯೋಜನೆಯಡಿ 2 ಸಾವಿರ ರೂ. ಪಡೆಯುವುದಕ್ಕೆ ಮಹಿಳೆಯರು ಕಾತುರದಿಂದ ಕಾಯುತ್ತಿದ್ದಾರೆ.

ಈಗಾಗಲೇ ಗೃಹ ಲಕ್ಷ್ಮಿ ಯೋಜನೆಡಿ (Gruhalakshmi scheme) ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರೂ.ಗಳ ನೆರವು ನೀಡುವುದಾಗಿ ಕರ್ನಾಟಕ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಗೃಹಲಕ್ಷ್ಮಿ ಯೋಜನೆ ಇನ್ನೂ ಕೆಲದಿನ ವಿಳಂಬವಾಗುವ ಸಾಧ್ಯತೆಯಿದೆ ಎನ್ನಬಹುದು, ಮತ್ತು ಸ್ವಾತಂತ್ಯ ದಿನಚರಣೆಯಂದು ತಮ್ಮ ಖಾತೆಗೆ ಹಣ ಬರಲಿದೆ ಎನ್ನಲಾಗಿದೆ.

ಹೌದು, ಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರನ್ನು ಕರೆಸಿ ಈ ಮಹತ್ವದ ಯೋಜನೆಗೆ ಚಾಲನೆ ನೀಡಲು ಸರ್ಕಾರ ಬಯಸಿರುವ ಕಾರಣ ಕನಿಷ್ಠ ಒಂದು ವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಬಿಪಿಎಲ್/ಎಪಿಎಲ್/ ಅಂತ್ಯೋದಯ ಕಾರ್ಡ್ ನಲ್ಲಿ ನಮೂದಿಸಿರುವ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/- ಗಳನ್ನು DBT ಮೂಲಕ ನೀಡುವ ಯೋಜನೆ, ಸಬಲೀಕರಣಗೊಂಡಲ್ಲಿ ಕುಟುಂಬದ ಯಜಮಾನಿಯು ಆರ್ಥಿಕವಾಗಿ ಕುಟುಂಬದ ಸಮಗ್ರ ಅಭಿವೃದ್ಧಿಯನ್ನು ಖಚಿತ ಪಡಿಸುತ್ತದೆ.

ಅರ್ಜಿಗಳನ್ನು ಆನ್‌ಲೈನ್ ಮೂಲಕ ಅಥವಾ ಭೌತಿಕವಾಗಿ ಗ್ರಾಮ ಆನ್/ಬೆಂಗಳೂರು ಆನ್/ ಕರ್ನಾಟಕ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದು. (https://sevasindhugs.karnataka

ಅರ್ಜಿ ಸಲ್ಲಿಸಲು ಅರ್ಜಿದಾರರು ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳನು ನೀಡಬೇಕು.

ಮಂಜೂರಾತಿಯ ನಂತರ DBT ಮೂಲಕ ನೇರ ನಗದು ವರ್ಗಾವಣೆ ಮಾಡಲಾಗುವುದು. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಸಂಪೂರ್ಣ ಉಚಿತ.

ಇದನ್ನೂ ಓದಿ: ಹಿಜಾಬ್ ಹಾಕದೆ ಬಂದ ಬಾಲಕಿಯರನ್ನು ತಡೆದ ಮುಸ್ಲಿಂ ವಿದ್ಯಾರ್ಥಿ, ಹುಡುಗನಿಗೆ ಹಿಗ್ಗಾಮುಗ್ಗ ಥಳಿತ !

Comments are closed.