ಸೌಜನ್ಯಾ ತಾಯಿ ಮತ್ತು ಸಹೋದರನ ಮೇಲೆ ಹಲ್ಲೆ ಮತ್ತು ಬೆದರಿಕೆ: ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು
Soujanya :ಧರ್ಮಸ್ಥಳದಲ್ಲಿ(Soujanya )ಇವತ್ತು ತಮ್ಮ ಮಗಳ ಸಾವಿಗೆ ನ್ಯಾಯ ಕೇಳಲು ಬಂದ ಸೌಜನ್ಯ ತಾಯಿ ಮತ್ತು ತಮ್ಮನ ಮೇಲೆ ಹಲ್ಲೆ ನಡೆಸುವುದಕ್ಕೆ ಮುಂದಾದ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಆ ಸಂದರ್ಭದಲ್ಲಿ ವ್ಯಕ್ತಿ ಒಬ್ಬ ಬೆರಳು ತೋರಿಸಿ ನಿನ್ನನ್ನು ನೋಡಿಕೊಳ್ಳುವೆ ಎಂದು ಕಾಲಾರ್ ಗೆ ಕೈ ಹಾಕಿದ ಪ್ರಕರಣ ನಡೆದಿತ್ತು.
ಕುಸುಮಾವತಿಯವರ ಮಗನ ಮೇಲೆ ಹಲ್ಲೆ ನಡೆಸುವುದಕ್ಕೆ ಮುಂದಾದ ವ್ಯಕ್ತಿಯ ವಿರುದ್ಧ ಬೆಳ್ತಂಗಡಿಯ ಠಾಣೆಯಲ್ಲಿ ಈಗ ಪ್ರಕರಣ ದಾಖಲಾಗಿದೆ. ಸೌಜನ್ಯ ತಾಯಿ ಕುಸುಮಾವತಿ ಮತ್ತು ಸಹೋದರ ಜಯರಾಂ ದೂರಿನ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ.
ಇವತ್ತು ಉಜಿರೆಯಲ್ಲಿ ಧರ್ಮಸ್ಥಳದ ವಿವಿಧ ಸಂಘ ಸಂಸ್ಥೆಗಳು ಮತ್ತು ಅಖಿಲ ಕರ್ನಾಟಕ ಮಂಜುನಾಥ ಸ್ವಾಮಿ ಭಕ್ತ ವೃಂದದಿಂದ ಸೌಜನ್ಯ ಹತ್ಯ ಆರೋಪಿಗಳನ್ನು ಪತ್ತೆಹಚ್ಚಬೇಕು ಮತ್ತು ಮುಖ್ಯವಾಗಿ ಧರ್ಮಸ್ಥಳದ ಕ್ಷೇತ್ರದ ಮತ್ತು ವೀರೇಂದ್ರ ಹೆಗ್ಗಡೆಯವರ ವಿರುದ್ಧದ ಅಪಮಾನವನ್ನು ನಿಲ್ಲಿಸಬೇಕು ಎನ್ನುವ ವಿಷಯವನ್ನು ಇಟ್ಟುಕೊಂಡು ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಂಬಂಧ ಭಾರಿ ಪ್ರತಿಭಟನೆಯನ್ನು ಏರ್ಪಡಿಸಲಾಗಿತ್ತು. ಉಜಿರೆ ಬೆಳ್ತಂಗಡಿ ವ್ಯಾಪ್ತಿಯ ಧರ್ಮಸ್ಥಳಕ್ಕೆ ಸಂಬಂಧಪಟ್ಟ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಶಾಲೆಗಳು ಕೂಡ ರಜೆ ಘೋಷಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಈ ಸಂದರ್ಭ, ಸೌಜನ್ಯ ತಾಯಿ, ತಮ್ಮ, ಸಹೋದರಿಯರು ಕೂಡಾ ನ್ಯಾಯ ಕೇಳುವುದಕ್ಕಾಗಿ ಅಲ್ಲಿನ ಸಭೆಗೆ ತೆರಳುತ್ತಾರೆ. ಸೌಜನ್ಯ ತಾಯಿ ವೇದಿಕೆ ಹತ್ತಲು ಮುಂದಾಗುತ್ತಾರೆ. ಆಗ ಆಯೋಜಕರು ಅದನ್ನು ತಡೆಯುತ್ತಾರೆ. ಆಗ ಅಲ್ಲಿದ್ದ ಧಡಿಯ ವ್ಯಕ್ತಿಯೊಬ್ಬ, ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಅಂಗೀಕ ಭಾವ ಪ್ರದರ್ಶಿಸಿ ಸೌಜನ್ಯ ತಾಯಿ ಹಾಗೂ ತಮ್ಮನ ಮೇಲೆ ಹಲ್ಲೆ ನಡೆಸುವುದಕ್ಕೆ ಮುಂದಾಗಿದ್ದಾನೆ. ಈಗ ಈ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಿಡಿಯೋಗಳಲ್ಲಿ ಕಂಡುಬರುವಂತೆ ಆತ ಕುಸುಮಾವತಿಯವರ ಮಗನ ಕಾಲರ್ ಗೆ ಕೈ ಹಾಕಿದ್ದ ಎನ್ನಲಾಗಿದೆ.
ಸದರಿ ದಢೂತಿ ವ್ಯಕ್ತಿಯೊಬ್ಬ ಅವರನ್ನು ತಡೆದು ನಿಲ್ಲಿಸಿ ಮೈಗೆ ಕೈ ಹಾಕಿ ಚೂಡಿದಾರದ ಶಾಲು ಎಳೆದು ಮಾನಕ್ಕೆ ಕುಂದುಂಟು ಮಾಡಿದ ಬಗ್ಗೆ ದೂರು ನೀಡಲಾಗಿದೆ. ಈಗ ಈ ಪ್ರಕರಣದ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕುಸುಮಾವತಿಯವರ ಮಗ ಜಯರಾಮನಿಗೂ ಹಲ್ಲೆ ಮಾಡಿದ ಬಗ್ಗೆ ದೂರು ದಾಖಲಾಗಿದೆ. ಈಗ ಐಪಿಸಿ 1860, 341, 354, 323, 34 ಸೆಕ್ಷನ್ ಗಳಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ : ಹೀಗೊಂದು ಕಳ್ಳತನ ದನದ ಕೆಚ್ಚಲಿನಿಂದ ಕದ್ದು ಹಾಲು ಕರೆದ ಮಹಿಳೆ; ಪೊಲೀಸ್ ದೂರು
Comments are closed.