Aadhaar – Pan card Link: ಆಧಾರ್ – ಪಾನ್ ಲಿಂಕ್ ಮಾಡದೇ ಇದ್ರೂ 3 ತಿಂಗಳು 1000 ರೂ. ದಂಡ ಇಲ್ಲ ಸುದ್ದಿ ; ಸರ್ಕಾರ ಕೊಟ್ಟಿದೆ ಫ್ರೆಶ್ ಸ್ಪಷ್ಟನೆ !

Latest news No penalty of Rs 1000 for 3 months even if Aadhaar-PAN card is not linked

Aadhaar – Pan card Link: ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಆಧಾರ್ ಕಾರ್ಡ್ (Aadhaar Card) ಹಾಗೂ ಪ್ಯಾನ್ ಕಾರ್ಡ್ (PAN Card) ಅನ್ನು ಗುರುತಿನ ಚೀಟಿಯಾಗಿ ಬಳಸಲಾಗುತ್ತದೆ. ಅಲ್ಲದೆ, ಇಂದು ಹೆಚ್ಚಿನ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ (PAN Card) ಅತ್ಯಗತ್ಯ ದಾಖಲೆಯಾಗಿದ್ದು, ಹಾಗಾಗಿ, ಪ್ಯಾನ್ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್ (Aadhar – PAN) ಮಾಡುವುದು ಕೂಡ ಮುಖ್ಯವಾಗುತ್ತದೆ.

ಈಗಾಗಲೇ ಪ್ಯಾನ್ ಕಾರ್ಡನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ (Aadhaar – Pan card Link) ಮಾಡಲು ಜೂನ್ 30, 2023ರ ವರೆಗೆ ಗಡುವು ನೀಡಲಾಗಿತ್ತು. ಆದರೀಗ ಈ ಗಡುವು ಮುಗಿದಿದೆ. ಈ ಬೆನ್ನಲ್ಲೆ ಆಧಾರ್ – ಪಾನ್ ಲಿಂಕ್ ಮಾಡದೇ ಇದ್ರೂ 3 ತಿಂಗಳು 1000 ರೂ. ದಂಡ ಇಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಇದೀಗ ಸರ್ಕಾರ ಸ್ಪಷ್ಟನೆ ನೀಡಿದೆ.

3 ತಿಂಗಳು ಪ್ಯಾನ್​ ಆಧಾರ್​ ಲಿಂಕ್​ ಮಾಡಿಸುವುದಕ್ಕೆ 1000 ದಂಡ ಇಲ್ಲ ಉಚಿತವಾಗಿ ಮಾಡಿಸಬಹುದು ಅಂತ ಹೇಳಲಾಗುವ ಪೋಸ್ಟ್​, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರ ಪ್ಯಾನ್-ಆಧಾರ್​ ಲಿಂಕ್ ಮಾಡಿಸಲು ವಿನಾಯ್ತಿ ನೀಡಿದೆ ಅಂತ ಈ ಪೋಸ್ಟ್​ಗಳು ಶೇರ್​ ಆಗುತ್ತಿವೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದ್ದು, ಈ ರೀತಿಯ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಕೇಂದ್ರ ಇಲಾಖೆಯ ಪಿಎನ್‌ಬಿ ಮಾಹಿತಿ ನೀಡಿದೆ.

ಈ ಮೊದಲು ಏಪ್ರಿಲ್ 2022 ಮತ್ತು 30 ಜೂನ್ 2022ರ ನಡುವೆ ಲಿಂಕ್ ಮಾಡಿದ್ದರೆ 500 ರೂ. ದಂಡವನ್ನು ಪಾವತಿಸಬೇಕಾಗಿತ್ತು. ಈಗ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು 1000 ರೂ. ದಂಡ ಕಟ್ಟಬೇಕು. ಆದಷ್ಟು ಬೇಗೆ ನಿಮ್ಮ ಆಧಾರ್‌ -ಪ್ಯಾನ್‌ ಲಿಂಕ್ ಮಾಡಿಕೊಳ್ಳಿ ಎಂದು ಐಟಿ ಇಲಾಖೆ ಹೇಳಿದೆ

Comments are closed.