Home News Crime News: ಗೆಳತಿಯತ್ರ ಮಾತಾಡಿದ್ದಕ್ಕೆ ಚಾಕುವಿನಿಂದ ಓರ್ವ ವಿದ್ಯಾರ್ಥಿಯ ಹೊಟ್ಟೆ ಸೀಳಿದ ಇನ್ನೋರ್ವ ವಿದ್ಯಾರ್ಥಿ!

Crime News: ಗೆಳತಿಯತ್ರ ಮಾತಾಡಿದ್ದಕ್ಕೆ ಚಾಕುವಿನಿಂದ ಓರ್ವ ವಿದ್ಯಾರ್ಥಿಯ ಹೊಟ್ಟೆ ಸೀಳಿದ ಇನ್ನೋರ್ವ ವಿದ್ಯಾರ್ಥಿ!

Crime News
Image Credit: Tv9

Hindu neighbor gifts plot of land

Hindu neighbour gifts land to Muslim journalist

Crime News: ವಿದ್ಯಾರ್ಥಿನಿಯೊಬ್ಬಳ ಜೊತೆ ಮಾತನಾಡಿದ್ದಕ್ಕೆ ಎರಡು ಗುಂಪುಗಳು ಹೊಡೆದಾಡಿಕೊಂಡಿರುವ ಘಟನೆಯೊಂದು ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ನಡೆದಿದೆ. ಈ ಗಲಾಟೆ ಎಷ್ಟು ಭೀಕರವಾಗಿತ್ತೆಂದರೆ ಒಬ್ಬ ವಿದ್ಯಾರ್ಥಿ ಚಾಕುವಿನಿಂದ ಇನ್ನೊಬ್ಬ ವಿದ್ಯಾರ್ಥಿಯ ಹೊಟ್ಟೆಯನ್ನು ಸೀಳಿ ಬಿಟ್ಟಿದ್ದಾನೆ. ಈ ಹೊಡೆದಾಟದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮಾಹಿತಿ ಪ್ರಕಾರ, ವಿದ್ಯಾರ್ಥಿನಿಯೊಂದಿಗೆ ಮಾತನಾಡುವ ವಿಚಾರದಲ್ಲಿ ಈ ಜಗಳ ನಡೆದಿದೆ. ಆದರೆ, ವಿದ್ಯಾರ್ಥಿನಿಯರ ವಿಚಾರವಾಗಿ ಜಗಳ ನಡೆದಿದೆಯೇ ಅಥವಾ ಬೇರೆ ಯಾವುದಾದರೂ ಹಳೇ ದ್ವೇಷದಿಂದಾಗಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಹಿಂಸಾತ್ಮಕ ಘರ್ಷಣೆ ಮತ್ತು ಚೂರಿ ಇರಿತಕ್ಕೆ ಕಾರಣವಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಘಟನೆಯು ಬೊಕಾರೊ ಜಿಲ್ಲೆಯ ಬರ್ಮೊ ಉಪವಿಭಾಗದ ಬರ್ಮೊ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಫುಸ್ರೊ ಶಿವ ದೇವಾಲಯದ ಬಳಿಯ ಮಾರುಕಟ್ಟೆಯ ಮಧ್ಯದಲ್ಲಿರುವ ರಾಮ್ ರತನ್ ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ನಡುವೆ ಈ ಹಿಂಸಾತ್ಮಕ ಘರ್ಷಣೆ ಸಂಭವಿಸಿದೆ. ಎರಡೂ ಗುಂಪುಗಳಲ್ಲಿ ಭಾರಿ ಹೊಡೆದಾಟ ನಡೆದಿದ್ದು, ಗೊಂದಲ ಉಂಟಾಗಿದೆ. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ಚಾಕುವಿನಿಂದ ಓರ್ವ ವಿದ್ಯಾರ್ಥಿಯ ಹೊಟ್ಟೆ ಒಡೆದಿದೆ. ಇಬ್ಬರೂ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಬರ್ಮೊ ಠಾಣೆಯ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ತೆರಳಿ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದರು. ಮಾಹಿತಿಯ ಪ್ರಕಾರ, ಸುಜಲ್‌ ಗಿರಿ ಎಂಬ ವಿದ್ಯಾರ್ಥಿ ಹತ್ತನೇ ತರಗತಿಯಲ್ಲಿ ಓದುತ್ತಿರುವುದಾಗಿ, ಈತ ಸ್ನೇಹಿತರೊಂದಿಗೆ ಶಾಲೆಯಿಂದ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಇತರ 15 ವಿದ್ಯಾರ್ಥಿಗಳು ಇವರನ್ನು ಸುತ್ತುವರಿದು, ಯಾವುದೋ ವಿಷಯದ ಕುರಿತು ನಿಂದಿಸತೊಡಗಿದ್ದಾರೆ. ಕ್ರಮೇಣ ಈ ವಾದ ಜಗಳಕ್ಕೆ ತಿರುಗಿದೆ. ಇದೇ ವೇಳೆ ಮೋಹಿತ್‌ ಕುಮಾರ್‌ ಮಹತೋ ಎಂಬಾತ ತನ್ನ ಬಳಿಯಿದ್ದ ಹರಿತವಾದ ಚಾಕುವಿನಿಂದ ಸುಜಲ್‌ ಗಿರಿ ಎಂಬಾತನ ಹೊಟ್ಟೆಗೆ ಇರಿದಿದ್ದಾರೆ. ಈ ಚಾಕು ದಾಳಿಯಲ್ಲಿ ಸುಜಲ್‌ ಗಿರಿಯ ಹೊಟ್ಟೆ ಒಡೆದಿದೆ.

ಈತನ ಹೊಟ್ಟೆಯ ಎಡಭಾಗದಲ್ಲಿ ಆಳವಾದ ಗಾಯವಾಗಿದ್ದು, ಈ ವೇಳೆ ಸುಜಲ್‌ ಗಿರಿ ಜೊತೆಯಲ್ಲಿದ್ದ 15ವರ್ಷದ ವಿದ್ಯಾರ್ಥಿ ದಿವಾಕರ್‌ ಗೋಸೈನ್‌ ಎಂಬಾತನಿಗೂ ಆರೋಪಿಗಳು ಹರಿತವಾದ ಚಾಕುವಿನಿಂದ ಇರಿದಿದ್ದಾರೆ. ಈ ಹಿಂಸಾತ್ಮಕ ಘರ್ಷನೆ ನಡೆದ ನಂತರ, ಎಲ್ಲಾ ಆರೋಪಿಗಳು ಪರಾರಿಯಾಗಿದ್ದಾರೆ.

ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ರಂಜಿತ್ ಗಿರಿ ಅವರ ಮಗ 16 ವರ್ಷದ ಸುಜಲ್ ಗಿರಿ ಮತ್ತು ಧೀರಜ್ ಗೋಸೈನ್ ಅವರ 15 ವರ್ಷದ ದಿವಾಕರ್ ಗೋಸಾಯಿ ಎಂದು ಗುರುತಿಸಲಾಗಿದೆ. ಮೋಹಿತ್ ಕುಮಾರ್ ಮಹ್ತೋ, ಸಾಗರ್ ಕುಮಾರ್, ರೋಷನ್ ಗಿರಿ, ಪ್ರೇಮ್ ಸಾಹ್ನಿ, ಅಮರ್ಜಿತ್ ರವಾನಿ ಸೇರಿದಂತೆ ಸುಮಾರು 15 ಅಪರಿಚಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 504, 506, 324, 323, 341, 34 ಮತ್ತು 36 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣ ಕ್ರಮ ಕೈಗೊಂಡ ಪೊಲೀಸರು ಮೋಹಿತ್ ಕುಮಾರ್ ಮಹತೋ ಮತ್ತು ಧೋರಿ ಬಸ್ತಿ ಸೌತಾರ್ದಿ ಕಿರಾಣಿ ವ್ಯಾಪಾರಿ ಮಹೇಂದ್ರ ಕುಮಾರ್ ಮಹತೋ ಅವರ ಪುತ್ರ ಸಾಗರ್ ಕುಮಾರ್ ಎಂಬ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಪ್ರಕರಣದ ಆರೋಪಿಗಳಾದ ರೋಷನ್ ಗಿರಿ, ಪ್ರೇಮ್ ಸಾಹ್ನಿ ಮತ್ತು ಅಮರ್‌ಜೀತ್ ರವಾನಿ ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ.

 

ಇದನ್ನು ಓದಿ: Seema Haider: ಪಾಕ್ ಆಂಟಿ ಸೀಮಾ ಸೀದಾ ಬಾಲಿವುಡ್’ಗೆ ಜಂಪ್ : ಸಿನಿಮಾದಲ್ಲಿ ನಟಿಸಲು ಮಸ್ತ್ ಆಫರ್ !