Marriage Tradition: ಮದುವೆಗೂ ಮೊದಲೇ ಇಲ್ಲಿ ಲೈಂಗಿಕತೆಗೆ ಅವಕಾಶ! ಈ ವಿಚಿತ್ರ ಸಂಪ್ರದಾಯ ಫಾಲೋ ಮಾಡುತ್ತಿದೆ ಈ ಸಮುದಾಯ!

Intresting news Marriage tradition men and women free to have physical relationship

Marriage Tradition: ಮದುವೆ (Marriage)ಎಂಬ ಹೊಸ ಜೀವನಕ್ಕೆ ಮುನ್ನುಡಿ ಬರೆಯುವಾಗ ನಾವು ಕೆಲ ಸಂಪ್ರದಾಯ ಹಾಗೂ ತಾತ್ವಿಕ ನೆಲೆಗಟ್ಟಲ್ಲಿ ಆಚರಣೆಗಳು ಕ್ರಮಗಳನ್ನು ಅನುಸರಿಸುವುದು ವಾಡಿಕೆ. ಪಾಶ್ಚಿಮಾತ್ಯ ಆಚರಣೆಗೆ ಒಗ್ಗಿಕೊಂಡವರು ಸಂಸ್ಕೃತಿ ಆಚರಣೆಗಳಿಗೆ ಹೆಚ್ಚಿನ ಮಹತ್ವ ನೀಡದೆ ಇದ್ದರೂ ಕೂಡ ಕೆಲವೊಂದು ವಿಚಾರಗಳಿಗೆ ಸಂಪ್ರದಾಯವಾದಿಗಳು ಅವಕಾಶ ನೀಡುವುದಿಲ್ಲ. ಮದುವೆ ಸಂಪ್ರದಾಯ( Marriage Tradition) ನಡೆಯುವ ಮುನ್ನವೇ ಮೈಥುನ ಕ್ರಿಯೆ ನಡೆಸಿದರೆ ಭವಿಷ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ಹಿರಿಯರು ಮದುವೆಯ ಮೊದಲು ಮಕ್ಕಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವುದು ಗಮನಿಸಿರಬಹುದು. ಆದರೆ, ಭಾರತದಲ್ಲಿಯು ಕೂಡ ಮದುವೆಯ ಮೊದಲು ದೈಹಿಕ ಸಂಬಂಧ(Physical Relationship) ಮೈಥುನಕ್ಕೆ ಅವಕಾಶವಿದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?? ಇಲ್ಲ ಎಂದಾದರೆ ಈ ಕುರಿತ ಮಾಹಿತಿ ನಿಮಗಾಗಿ.

ವಿದೇಶಗಳಲ್ಲಿ ಸಾರ್ವಜನಿಕವಾಗಿಯೇ( hug) ಕಿಸ್ (kiss) ಅಷ್ಟೇ ಏಕೆ ದೈಹಿಕ ಸಂಬಂಧ ಇಟ್ಟುಕೊಳ್ಳೋದು ಸಾಮಾನ್ಯ ವಿಚಾರ.ಭಾರತದಲ್ಲಿ ಮದುವೆ ಸಂಪ್ರದಾಯಗಳಿಗೆ ( Marriage Tradition) ಹೆಚ್ಚಿನ ಆದ್ಯತೆ ಗೌರವ ನೀಡುವ ಹಿನ್ನೆಲೆ ಮದುವೆಯ ಮೊದಲು ದೈಹಿಕ ಸಂಬಂಧ ಹೊಂದುವುದಕ್ಕೆ ಅವಕಾಶ ನೀಡುವುದಿಲ್ಲ. ಕಾಸ್ಮೋಪಾಲಿಟನ್ ಸಂಸ್ಕೃತಿಯನ್ನೂ (Cosmopolitan Culture) ಒಪ್ಪಿಕೊಂಡವರು ನಾವು ಮಾಡಿದ್ದೆ ಸರಿ ಎಂದು ವಾದ ಮಾಡಿದರು ಅಚ್ಚರಿಯಿಲ್ಲ. ಆದರೆ, ಈ ರೀತಿಯ ಆಚರಣೆ ಇಂದಿಗೂ ಭಾರತದಲ್ಲಿ ಜೀವಂತವಾಗಿದೆ ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅಷ್ಟಕ್ಕೂ ಮದುವೆ ಮೊದಲೇ ಮೈಥುನ ಕ್ರಿಯೆಗೆ ಅವಕಾಶ ಇರುವುದು ಎಲ್ಲಿ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಹಾನಿ!!

ಮದುವೆಗೂ ಮುನ್ನವೇ ಲೈಂಗಿಕ ಸಂಬಂಧ ಹೊಂದುವುದಕ್ಕೆ ಅವಕಾಶ ಇರೋದು ಛತ್ತೀಸ್ಗಢದ ಬುಡಕಟ್ಟು ಜನಾಂಗದಲ್ಲಿ. ಇಲ್ಲಿನ ಆಚರಣೆ ನಮಗೆ ವಿಚಿತ್ರ ಎನಿಸಿದರೂ ಅತಿಶೋಕ್ತಿಯಲ್ಲ. ನಕ್ಸಲ್ ಪೀಡಿತ ಪ್ರದೇಶ ಎಂದು ಗುರುತಿಸಿಕೊಂಡಿರುವ ಛತ್ತೀಸ್ಗಢದ ಬಸ್ತಾರ್ ಜಿಲ್ಲೆಯಲ್ಲಿ ವಾಸಿಸುವ ಗೊಂಡ್ (Gond) ಮತ್ತು ಮುರಿಯಾ (Muria) ಆದಿವಾಸಿಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳು ವಿಭಿನ್ನವಾಗಿದೆ. ಇಲ್ಲಿನ ಆಚರಣೆ ಬಗ್ಗೆ ಕೇಳಿದರೆ ಅರೇ ಇದೇನಪ್ಪಾ ಹಿಂಗೆ ಎಂದು ಅನಿಸಿದರೂ ಅಚ್ಚರಿಯಿಲ್ಲ. ನಮ್ಮಲ್ಲಿ ಲೈಂಗಿಕತೆ ಬಗ್ಗೆ ಸಾರ್ವಜನಿಕವಾಗಿ ಮಾತಾಡಿದರೆ ಏನೋ ಮಹಾಪರಾಧ ಎಂಬಂತೆ ನೋಡೋದು ಕಾಮನ್. ಆದ್ರೆ, ಛತ್ತೀಸ್ಗಢದ ಈ ಬುಡಕಟ್ಟು ಜನಾಂಗದಲ್ಲಿ ಘೋಟುಲ್ ಎಂಬ ಸಂಪ್ರದಾಯ ಆಚರಣೆ ಮಾಡುತ್ತಾರಂತೆ.

ದೊಡ್ಡ ಬಿದಿರಿನ ಕಂಬಗಳಿಂದ ಮಾಡಿದ ಕಟ್ಟಡವನ್ನ ಘೋಟುಲ್ ಎನ್ನಲಾಗುತ್ತದೆ. ಅಂದರೆ, ನಗರ ಪ್ರದೇಶಗಳಲ್ಲಿ ನೈಟ್ ಕ್ಲಬ್ ಗಳ ಮಾದರಿಯಲ್ಲೇ ಈ ಘೋಟುಲ್ ಇರಬಹುದೇನೋ. ಇಲ್ಲಿ 10 ವರ್ಷ ಮೇಲ್ಪಟ್ಟ ಯಾವುದೇ ಮಗು ಘೋಟುಲ್ಗೆ ಹೋಗಲು ಫ್ರೀ ಎಂಟ್ರಿ ನೀಡಲಾಗುತ್ತದೆ. ಪೋಷಕರು 10 ವರ್ಷ ಮೇಲ್ಪಟ್ಟ ಯಾವುದೇ ಮಗುವನ್ನು ಘೋಟುಲ್ಗೆ ಕಳುಹಿಸಲು ಪ್ರಾರಂಭಿಸುತ್ತಾರೆ. ಇಲ್ಲಿ ಮಕ್ಕಳು ಏನು ಬೇಕಾದ್ರೂ ಮಾಡ್ಬೋದು. ಯುವಕ-ಯುವತಿಯರು ಪರಸ್ಪರ ಅರಿತುಕೊಳ್ಳಲು ಮೋಜು ಮಾಡಲು ಘೋಟುಲ್ಗೆ ಹೋಗುತ್ತಾರೆ. ಘೋಟೂಲ್ ನಲ್ಲಿ ಒಬ್ಬರನ್ನೊಬ್ಬರು ಅರ್ಥೈಸಿಕೊಂಡ ಬಳಿಕ ಯುವಕ ಯುವತಿಯರಿಗೆ ಮದುವೆಗೂ ಮುನ್ನವೇ ದೈಹಿಕ ಸಂಬಂಧ ಹೊಂದುವುದಕ್ಕೆ ಅವಕಾಶ ಕೂಡ ಇದೆ.

ಇಲ್ಲಿನ ವಿಶೇಷತೆ ಏನಪ್ಪಾ ಅಂದರೆ, ಯುವಕರು ಮತ್ತು ಯುವತಿಯರು ಪರಸ್ಪರ ಹಾಡುತ್ತಾ ನೃತ್ಯ ಮಾಡುತ್ತಾರೆ. ಯುವಕರು ತಮ್ಮ ಆಯ್ಕೆಯ ಯುವತಿಯರಿಗೆ ವಿಶೇಷವಾಗಿ ಬಿದಿರಿನಿಂದ ಮಾಡಿದ ಬಾಚಣಿಗೆಗಳನ್ನು ಕೊಡುತ್ತಾರಂತೆ. ಆ ಬಾಚಣಿಗೆಗಳನ್ನು ಅವಳ ತಲೆಯಲ್ಲಿ ಇರಿಸಲಾಗುತ್ತದೆ. ಒಂದು ವೇಳೆ ಯುವತಿಗೆ ಆತ ಓಕೆ ಎಂದೆನಿಸಿದರೆ ಯುವತಿ ಬಾಚಣಿಗೆಯನ್ನು ಕೂದಲಿನಲ್ಲಿ ಇರಿಸಿಕೊಂಡು ಯುವಕನಿಗೆ ಗ್ರೀನ್ ಸಿಗ್ನಲ್ ಕೊಡುತ್ತಾಳೆ ಎಂದರ್ಥ. ಒಂದು ವೇಳೆ ಯುವತಿಗೆ ಯುವಕ ಇಷ್ಟವಿಲ್ಲ ಎಂದಾದರೆ ಕೂದಲಿಂದ ಬಾಚಣಿಗೆಯನ್ನ ತೆಗೆದು ಹಾಕುತ್ತಾರಂತೆ.

ಇಲ್ಲಿನ ಆಚರಣೆ ಅನುಸಾರ,ಯಾವುದೇ ಸಾಮಾಜಿಕ ಒತ್ತಡವಿಲ್ಲದೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿದ್ದು, ಲೈಂಗಿಕ ಕ್ರಿಯೆ ಕೂಡ ಮಾಡಬಹುದು. ಯುವತಿ ಯುವಕನನ್ನು ಒಪ್ಪಿಕೊಂಡರೆ ಜೊತೆಯಾಗಿ ಜೀವಿಸಿ ಲೈಂಗಿಕ ಸಂಬಂಧ ಹೊಂದಬಹುದು. ಒಂದು ವೇಳೆ, ಕೆಲ ತಿಂಗಳ ನಂತರ ಕೂಡ ಒಬ್ಬರನೊಬ್ಬರು ಮೆಚ್ಚಿಕೊಂಡರೆ, ಎರಡು ಕುಟುಂಬದ ಹಿರಿಯರು ಮುಂದೆ ನಿಂತು ಮದ್ವೆ ಮಾಡಿಸ್ತಾರೆ.ಇಲ್ಲಿ ಗರ್ಭಾವಸ್ಥೆ ಯಲ್ಲಿ ಮದ್ವೆಯಾದ ಅದೇ ರೀತಿ ಜೊತೆಯಾಗಿ ಜೀವಿಸಿ ಅರ್ಥೈಸಿಕೊಂಡ ಬಳಿಕ ಗರ್ಭಾವಸ್ಥೆ ಯಾದ ಪ್ರಕರಣ ಕೂಡ ಇದೆ. ಇಲ್ಲಿ ಬುಡಕಟ್ಟು ಸಂಪ್ರದಾಯದ ಅನುಸಾರ ಜೀವನ ಕ್ರಮ ಅನುಸರಿಸುವ ಹಿನ್ನೆಲೆ ಲೈಂಗಿಕ ಕಿರುಕುಳದ ಬಗ್ಗೆ ಒಂದು ಪ್ರಕರಣ ಕೂಡ ದಾಖಲಾಗಿಲ್ಲವೆಂದು ಇಲ್ಲಿನ ಜನರು ಹೇಳುತ್ತಾರೆ. ಏನೇ ಹೇಳಿ ಇಲ್ಲಿನ ಆಚರಣೆ ಕ್ರಮ ನಿಜಕ್ಕೂ ಭಿನ್ನ ಎಂದೆನಿಸುವುದು ಸುಳ್ಳಲ್ಲ.

ಇದನ್ನೂ ಓದಿ: HAL India Recruitment 2023: HAL ನಲ್ಲಿ 185 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸುವರ್ಣ ಅವಕಾಶ; ಅರ್ಜಿ ಶುಲ್ಕ ಇಲ್ಲದೆ ಅಪ್ಲೈ ಮಾಡಿ

Comments are closed.