Nitin Desai Death: ‘ಬಿಗ್ ಬಾಸ್’ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಿಗ್ ಮನೆಯ ಒಡೆಯ !

Latest national news Art director Nitin Desai hanged himself to commit suicide

Nitin Desai Death: ‘ಬಿಗ್ ಬಾಸ್’ ನಲ್ಲಿ ಬಿಗ್ ಮನೆಯ ಒಡೆಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, ಬಾಲಿವುಡ್​ನ (Bollywood) ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ (Nitin Desai) ಅವರು ಇಂದು (ಆ. 2) ಮುಂಜಾನೆ ಆತ್ಮಹತ್ಯೆ (Sucide) ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಿತಿನ್ ದೇಸಾಯಿ ಮುಂಬೈನಲ್ಲಿರುವ (Mumbai) ತಮ್ಮ ಒಡೆತನದ ಎನ್​ಡಿ ಸ್ಟುಡಿಯೋಸ್​ನಲ್ಲಿ (ND studio)ನೇಣು ಬಿಗಿದುಕೊಂಡು ಆತ್ಮಹತ್ಯೆ (Nitin Desai Death) ಮಾಡಿಕೊಂಡಿದ್ದಾರೆ. ಎನ್​ಡಿ ಸ್ಟುಡಿಯೋಸ್​ನಲ್ಲಿ ಹಲವು ಸಿನಿಮಾಗಳನ್ನು ಶೂಟ್ ಮಾಡಲಾಗಿದೆ. ಸಲ್ಮಾನ್ ಖಾನ್ ಅವರು ಹೋಸ್ಟ್​ ಮಾಡುವ ‘ಬಿಗ್ ಬಾಸ್’ನ ವೀಕೆಂಡ್ ಎಪಿಸೋಡ್​ನ ಈ ಮೊದಲು ಇಲ್ಲಿಯೇ ಶೂಟ್ ಮಾಡಲಾಗುತ್ತಿತ್ತು.

ಆಗಸ್ಟ್ 9ರಂದು ನಿತಿನ್ ದೇಸಾಯಿ ಹುಟ್ಟಿದ ದಿನ. ಆದರೆ, ಜನ್ಮದಿನದ ಮುನ್ನವೇ ಜೀವ ಕಳೆದುಕೊಂಡರು. ಸದ್ಯ ಪೊಲೀಸರು ಸ್ಥಳಕ್ಕಾಗಮಿಸಿದ್ದು, ನಿತಿನ್ ದೇಸಾಯಿ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ, ದೇಸಾಯಿ ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ನಿತಿನ್ ದೇಸಾಯಿ ಅವರು ಬಾಲಿವುಡ್​ನಲ್ಲಿ ಖ್ಯಾತ ಕಲಾ ನಿರ್ದೇಶಕರಾಗಿದ್ದರು. ಅವರು ನಾಲ್ಕು ರಾಷ್ಟ್ರಪ್ರಶಸ್ತಿಗಳನ್ನು ಸ್ವೀಕರಿಸಿದ್ದರು. ನಿತಿನ್‌ ದೇಸಾಯಿ ಹಿಂದಿ ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಕಲಾನಿರ್ದೇಶನ, ಪ್ರೊಡಕ್ಷನ್‌ ಡಿಸೈನರ್, ನಿರ್ಮಾಪಕ, ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಹಿಂದಿ ಮಾತ್ರವಲ್ಲದೆ ಮರಾಠಿ ಸಿನಿಮಾ ಕಿರುತೆರೆಗಳಲ್ಲಿ ಕೂಡಾ ನಿತಿನ್‌ ತಮ್ಮ ಕಲಾ ನಿರ್ದೇಶನದ ಕೈ ಚಳಕ ತೋರಿಸಿದ್ದಾರೆ.

1942 ಲವ್‌ ಸ್ಟೋರಿ, ಪರಿಂದಾ, ಕಾಮೊಶಿ, ಡಾ ಬಾಬಾ ಸಾಹೇಬ್‌ ಅಂಬೇಡ್ಕರ್‌, ರಾಜು ಚಾಚಾ, ಸಲಾಂ ಬಾಂಬೆ, ಸ್ಮಮ್‌ ಡಾಗ್‌ ಮಿಲಿಯನೇರ್‌ ಸೇರಿದಂತೆ ಅನೇಕ ಸಿನಿಮಾಗಳಿಗೆ ಸೆಟ್‌ ಹಾಕಿದ್ದರು.
2003 ರಲ್ಲಿ ಆಧ್ಯಾತ್ಮಿಕ ಸಿನಿಮಾವೊಂದನ್ನು ನಿರ್ಮಿಸುವ ಮೂಲಕ ನಿತಿನ್‌ ದೇಸಾಯಿ ನಿರ್ಮಾಪಕನಾಗಿ ಕೂಡಾ ಗುರುತಿಸಿಕೊಂಡಿದ್ದರು. ಮರಾಠಿಯಲ್ಲಿ ಕೂಡಾ ಕೆಲವೊಂದು ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ಹಮ್‌ ಸಬ್‌ ಏಕ್‌ ಹೈ, ಫನ್‌ ಆನ್‌ ದಿ ರನ್‌, ಹೆಲೋ ಜೈ ಹಿಂದ್‌, ಬಾಲಗಂಧರ್ವ ಸಿನಿಮಾಗಳಲ್ಲಿ ಅವರು ನಟನೆ ಕೂಡಾ ಮಾಡಿದ್ದಾರೆ.

ಇದನ್ನೂ ಓದಿ: Child Death: ಉಡುಪಿಯಲ್ಲಿ ನೀರಿನ ಹೊಂಡಕ್ಕೆ ಬಿದ್ದು 3 ವರ್ಷದ ಬಾಲಕಿ ಸಾವು ; ವಿದ್ಯುತ್ ಪ್ರವಹಿಸಿ 8 ತಿಂಗಳ ಮಗು ಸಾವು !

Comments are closed.