Pill For Heart Disease: ಹೃದಯ ರೋಗ ತಡೆಗೆ ಬಂದೇ ಬಿಡ್ತು ಒಂದೇ ಒಂದು ಮಾತ್ರೆ !

Latest news health news single pill for heart disease prevention

Pill for Heart Disease: ಹೃದ್ರೋಗ ಸಂಬಂಧಿ ಕಾಯಿಲೆಗಳಿಂದ ಬಳಲುವವರು ಹಲವು ಮಾತ್ರೆಗಳ (Pills) ಮೊರೆ ಹೋಗುತ್ತಾರೆ. ಕೆಲವರು ಈ ಕಾಯಿಲೆಯಿಂದ ಸಾವನ್ನಪ್ಪುತ್ತಾರೆ. ಆದರೆ, ಇದೀಗ ಹೃದಯ ರೋಗ ತಡೆಗೆ ಒಂದೇ ಒಂದು ಮಾತ್ರೆ (Pill for Heart Disease) ಬಂದಿದೆ.

 

ಹೌದು, ಹೃದಯ ಸಂಬಂಧಿತ ಕಾಯಿಲೆಗೆ ನಾಲ್ಕು ಮಾತ್ರೆಗಳ ಬದಲು ಎಲ್ಲಾ ಔಷಧೀಯ ಅಂಶವನ್ನು ಒಳಗೊಂಡಿರುವ ಪಾಲಿಪಿಲ್ (Polypill) ಎಂಬ ಒಂದೇ ಮಾತ್ರೆಯನ್ನು ಬಳಸಬಹುದಾಗಿದೆ. ಈ ಮಾತ್ರೆ ಹೃದ್ರೋಗ ಸಂಬಂಧಿ ಕಾಯಿಲೆಗಳಿಂದ ಸಂಭವಿಸುವ ಮರಣದ ಸಾಧ್ಯತೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಕೆನಡಾದ ಜನಸಂಖ್ಯೆ ಆರೋಗ್ಯ ಸಂಶೋಧನಾ ಸಂಸ್ಥೆಗಳು ನಡೆಸಿದ ಅಧ್ಯಯನವನ್ನು ಆಧರಿಸಿ ವಿಶ್ವ ಆರೋಗ್ಯ ಸಂಸ್ಥೆ ಅಗತ್ಯ ಔಷಧಗಳ ಪಟ್ಟಿಗೆ ಪಾಲಿಪಿಲ್ ಮಾತ್ರೆಯನ್ನು ಸೇರ್ಪಡೆ ಮಾಡಿದೆ.

ಹೃದಯ ಸಂಬಂಧಿ ತೊಂದರೆಗಳ ನಿಯಂತ್ರಣಕ್ಕಾಗಿ ನಾಲ್ಕು ಮಾತ್ರೆಗಳ ಸಂಯೋಜನೆಯಲ್ಲಿ ಸಾಮಾನ್ಯ ರಕ್ತದೊತ್ತಡ ಕಡಿಮೆ ಮಾಡುವ ಮೂರು ಔಷಧಗಳು ಮತ್ತು ಕೊಬ್ಬಿನಾಂಶ ನಿಯಂತ್ರಣ ಮಾಡುವ ಒಂದು ಔಷಧ ಒಳಗೊಂಡಿರುತ್ತದೆ. ಅಲ್ಲದೆ, ಎಲ್ಲಾ ಸತ್ವ ಒಳಗೊಂಡ ಒಂದೇ ಮಾತ್ರೆ ಬಳಸುವುದರಿಂದ ಖರ್ಚು ಕಡಿಮೆಯಾಗುತ್ತದೆ ಎನ್ನಲಾಗಿದೆ.

 

ಇದನ್ನು ಓದಿ: Bangalore: ಇಂದಿನಿಂದ ರೈತರಿಗೆ ಸಿಗಲಿದೆ ಬಡ್ಡಿರಹಿತ 5 ಲಕ್ಷ ರೂ.ವರೆಗೆ ಸಾಲ ! 

Comments are closed.