Bangalore: ಇಂದಿನಿಂದ ರೈತರಿಗೆ ಸಿಗಲಿದೆ ಬಡ್ಡಿರಹಿತ 5 ಲಕ್ಷ ರೂ.ವರೆಗೆ ಸಾಲ !

Latest news Bangalore Farmers will get interest-free loan upto Rs 5 lakh from today

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ಕರ್ನಾಟಕ ಬಜೆಟ್ 2023-24 ಇಂದಿನಿಂದ ಜಾರಿಗೆ ಬರಲಿದೆ. ಈ ಬಜೆಟ್ ನಲ್ಲಿ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ರೈತರಿಗೆ ಬಡ್ಡಿ ರಹಿತ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿದ್ದರು. ಅಲ್ಲದೇ ವಾರ್ಷಿಕ ಶೇ.3 ಬಡ್ಡಿದರಲ್ಲಿ 15 ಲಕ್ಷದವರೆಗೆ ಸಾಲಸೌಲಭ್ಯ ನೀಡುವುದಾಗಿ ಘೋಷಿಸಿದ್ದರು.

ಅದರಂತೆ ಆ.1ರಿಂದ ರಾಜ್ಯದ ರೈತರಿಗೆ 5ಲಕ್ಷದವರೆಗೆ ಬಡ್ಡಿರಹಿತ ಸಾಲಸೌಲಭ್ಯ ದೊರೆಯಲಿದೆ.

ರೈತರ ಬಡ್ಡಿ ರಹಿತ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿರುವುದನ್ನು ರೈತರ ಗಮನಕ್ಕೆ ತರಬೇಕು. ರೈತರಿಗೆ ಸಮಸ್ಯೆ ಆಗದಂತೆ 5 ಲಕ್ಷದವರೆಗೂ ಬಡ್ಡಿ ರಹಿತ ಸಾಲ ನೀಡಬೇಕು. ವಾರ್ಷಿಕ ಶೇ.3 ಬಡ್ಡಿ ದರದಲ್ಲಿ 15 ಲಕ್ಷದವರೆಗೂ ಸಾಲಸೌಲಭ್ಯವನ್ನು ರೈತರಿಗೆ ಸಿಗಲಿದೆ ಎಂಬ ಸೂಚನೆಯನ್ನೂ ಮುಖ್ಯಮಂತ್ರಿ ನೀಡಿದ್ದಾರೆ.

 

ಇದನ್ನು ಓದಿ: Husband And Wife: ಪತ್ನಿಯ ಗುಪ್ತಾಂಗಕ್ಕೆ ವಿಕೆಟ್ ಇಟ್ಟ ಪತಿ, ಕರಾಳ ಕಾರಣ ಬಿಚ್ಚಿಟ್ಟ ಪತಿ 

Comments are closed.