Indian Navy SSC 2023: ಭಾರತೀಯ ನೌಕಾಪಡೆಯಲ್ಲಿ ಎಸ್‌ಎಸ್‌ಸಿ ಎಕ್ಸಿಕ್ಯೂಟಿವ್‌ಗಳ ನೇಮಕ: ಅರ್ಜಿ ಆಹ್ವಾನ

Latest news job news Indian Navy job Indian Navy SSC recruitement 2023

Share the Article

Indian Navy SSC 2023: ಇಂಡಿಯನ್ ನೇವಿಯು ಮಾಹಿತಿ ತಂತ್ರಜ್ಞಾನ ವಿಭಾಗದ ಶಾರ್ಟ್‌ ಸರ್ವೀಸ್ ಕಮಿಷನ್‌ ಎಕ್ಸಿಕ್ಯೂಟಿವ್ (Indian Navy SSC 2023) ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ.

ಕೇರಳದ ಈಝಿಮಾಲಾದಲ್ಲಿನ ಇಂಡಿಯನ್ ನೇವಲ್ ಅಕಾಡೆಮಿಯಲ್ಲಿ ವಿಶೇಷ ನೇವಲ್ ಓರಿಯಂಟೇಶನ್ ಕೋರ್ಸ್ ಅಡಿಯಲ್ಲಿ ಹುದ್ದೆಗಳ ನಿಯೋಜನೆ ಮಾಡಲಾಗುತ್ತದೆ.

ಈ ಹುದ್ದೆಗಳನ್ನು 2024 ರ ಜನವರಿಯಲ್ಲಿ ನೇಮಕ ಮಾಡಿಕೊಳ್ಳಲಿದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಿಳಿಸಲಾಗಿದೆ.

ನೇಮಕಾತಿ ಸಂಸ್ಥೆ / ಪ್ರಾಧಿಕಾರ : ಭಾರತೀಯ ನೌಕಾಪಡೆ
ಹುದ್ದೆಗಳ ಹೆಸರು : ಎಸ್ಎಸ್‌ಸಿ ಎಕ್ಸಿಕ್ಯೂಟಿವ್
ಹುದ್ದೆಗಳ ಸಂಖ್ಯೆ : 35

ಅರ್ಹತೆಗಳು:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು.
ಅಭ್ಯರ್ಥಿ ಜನವರಿ 02, 1999 ಮತ್ತು ಜುಲೈ 01, 2004 ರ ನಡುವೆ ಜನಿಸಿರಬೇಕು.

ಈ ಹುದ್ದೆಗೆ ಇಂಜಿನಿಯರಿಂಗ್‌ ಡಿಗ್ರಿ ಅನ್ನು ಶೇಕಡ.60 ಅಂಕಗಳೊಂದಿಗೆ ಪಾಸ್‌ ಮಾಡಿದ ಹಾಗೂ ಅಂತಿಮ ಬಿಇ ಪದವಿ ಓದುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಹಾಕಬಹುದು. ಎಂಎಸ್ಸಿ / ಎಂ.ಟೆಕ್ / ಎಂಸಿಎ ಪದವಿ ಪಡೆದವರು ಹುದ್ದೆಗಳಿಗೆ ಅನುಸಾರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಅಪ್ಲಿಕೇಶನ್ ಸಲ್ಲಿಸುವ ವಿಧಾನ :
ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್‌ joinindiannavy.gov.in ಗೆ ಭೇಟಿ ನೀಡಿ.
ಓಪನ್‌ ಆದ ಪೇಜ್‌ನಲ್ಲಿ ‘Executive Post’ ಟ್ಯಾಬ್ ಆಯ್ಕೆ ಮಾಡಿ.
ಹೊಸ ವೆಬ್‌ಪೇಜ್‌ ತೆರೆಯುತ್ತದೆ. ‘New User’ ಎಂಬಲ್ಲಿ ಕ್ಲಿಕ್ ಮಾಡಿ ರಿಜಿಸ್ಟ್ರರ್ ಮಾಡಿ.
ನಂತರ ಯೂಸರ್ ನೇಮ್, ಪಾಸ್‌ವರ್ಡ್‌ ನೀಡಿ ಲಾಗಿನ್‌ ಆಗುವ ಮೂಲಕ ಅಪ್ಲಿಕೇಶನ್ ಪ್ರಕ್ರಿಯೆ ಮುಗಿಸಿ.
ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಅರ್ಜಿ ಪೂರ್ಣಗೊಳಿಸಿ.
ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು
ನೋಟಿಫಿಕೇಶನ್‌ ಬಿಡುಗಡೆ ದಿನಾಂಕ : 29-07-2023
ಅರ್ಜಿ ಸಲ್ಲಿಸಲು ಆನ್‌ಲೈನ್‌ ಲಿಂಕ್ ಬಿಡುಗಡೆ ದಿನಾಂಕ : 04-08-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 20-08-2023.

ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ ಹಾಗೂ ಇತರೆ ಹೆಚ್ಚಿನ ಸಂಪೂರ್ಣ ಮಾಹಿತಿಗಳಿಗಾಗಿ ಈ ಕೆಳಗಿನ ನೋಟಿಫಿಕೇಶನ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿ .

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಷರತ್ತುಗಳು ಅನ್ವಯ.

 

ಇದನ್ನು ಓದಿ: Tirupati Laddu: ತಿರುಪತಿ ಲಡ್ಡುವಿನಲ್ಲಿ ನಂದಿನಿ ಸುವಾಸನೆ ಇನ್ಮುಂದೆ ಇರಲ್ಲ! 50 ವರ್ಷಗಳ ತಿರುಪತಿ ತಿಮ್ಮಪ್ಪ- ನಂದಿನಿ ತುಪ್ಪ ಸಂಬಂಧ ಕಡಿತ; ಕಾರಣ? 

Leave A Reply