Housefly: ನೊಣಗಳ ಕಾಟದಿಂದ ಬೇಸತ್ತಿದ್ದೀರಾ? ಹಾಗಾದರೆ ಕಾರಣ ಇಲ್ಲಿದೆ ನೋಡಿ!!

Housefly: ಬೇಸಿಗೆ ಬಂತೆಂದರೆ ಸಾಕು ಸೊಳ್ಳೆ, ನೊಣಗಳ (Housefly) ಕಾಟ ಶುರುವಾಗುತ್ತದೆ. ಅದರಲ್ಲಿಯೂ ನೊಣಗಳ ಆರ್ಭಟ ಹೆಚ್ಚು ಅಂತನೇ ಹೇಳಬಹುದು. ಈ ನೊಣಗಳನ್ನು ಓಡಿಸಲು ಎಷ್ಟು ಅಗರಬತ್ತಿಗಳು, ಸುರುಳಿಗಳು ಅಥವಾ ಸ್ಪ್ರೇಗಳನ್ನು ಬಳಸಿದರೂ, ಕೆಲವು ಗಂಟೆಗಳ ಬಳಿಕ ಮತ್ತೆ ಬರುತ್ತದೆ. ಮಳೆಗಾಲದಲ್ಲೂ ಇವುಗಳ ಬಾಧೆ ತಪ್ಪಿದ್ದಲ್ಲ. ಹಾಗಾದರೆ ನೊಣಗಳು ಮನೆಯೊಳಗೆ ಪ್ರವೇಶಿಸಲು ಕಾರಣ ಏನು ? ಇಲ್ಲಿದೆ ನೋಡಿ ಕಾರಣ!!.

 

 

ಮನೆಯ ಪ್ರವೇಶ ದ್ವಾರದ ಬಳಿ ಡಸ್ಟ್‌ಬಿನ್ ಇಡುವುದರಿಂದ ನೊಣಗಳು ಡಸ್ಟ್‌ಬಿನ್’ನಲ್ಲಿರುವ ಕೊಳೆತ, ಕಸಗಳಿಗೆ ಆಕರ್ಷಿತವಾಗಿ

ಮನೆಯೊಳಗೆ ಬರುತ್ತದೆ. ಅಲ್ಲದೆ, ಡಸ್ಟ್‌ಬಿನ್ ಸುತ್ತಲೂ ಕಿಟಕಿಗಳನ್ನು ತೆರೆದಿಡುವುದರಿಂದಲೂ ನೊಣಗಳು ಮನೆಗೆ ಪ್ರವೇಶಿಸುತ್ತವೆ. ಈ ರೀತಿ ಮನೆಯೊಳಗೆ ಪ್ರವೇಶಿಸಿ ನೊಣಗಳು ಮೊಟ್ಟೆ ಇಡುತ್ತವೆ.

 

ಮನೆಯನ್ನು ಶುಚಿಗೊಳಿಸಿದ ನಂತರ, ಆ ಕಸವನ್ನು ಮನೆ ಅಥವಾ ಮನೆಯ ಸುತ್ತಮುತ್ತ ಎಂದಿಗೂ ಇಡಬೇಡಿ. ಅಡುಗೆಮನೆಯ ನೆಲದ ಮೇಲೆ ಆಹಾರ ಮತ್ತು ಕಾರ್ಬೋಹೈಡ್ರೇಟ್ಗಳು ಎಲ್ಲಿಯೂ ಬೀಳದಂತೆ ನೋಡಿಕೊಳ್ಳಿ. ನೊಣಗಳು ಕಸ, ಕೊಳೆಯಿಂದ ಹಾರಿ ಆಹಾರದ ಮೇಲೆ ಕುಳಿತುಕೊಳ್ಳುತ್ತವೆ. ಇದು ತುಂಬಾ ಅಪಾಯಕಾರಿ. ಆ ಆಹಾರವನ್ನು ಸೇವಿಸುವುದರಿಂದ ವಿವಿಧ ರೋಗಗಳು ಬರುತ್ತವೆ. ಹಾಗಾಗಿ ಆಹಾರವನ್ನು ಮುಚ್ಚಿಡಿ.

 

ಮನೆಯಲ್ಲಿ ಹಣ್ಣು, ಸಾಂಬಾರು, ತರಕಾರಿ, ಸಿಹಿತಿಂಡಿ ಮುಂತಾದ ಆಹಾರ ಪದಾರ್ಥಗಳನ್ನು ತೆರೆದಿಟ್ಟರೆ ಅವುಗಳ ವಾಸನೆಯಿಂದ ನೊಣಗಳು ಸುಲಭವಾಗಿ ಮನೆಯೊಳಗೆ ನುಗ್ಗುತ್ತವೆ. ಇಷ್ಟೇ ಅಲ್ಲ, ಸೋಂಪು ಗಿಡಮೂಲಿಕೆಗಳಂತಹ ಆರೊಮ್ಯಾಟಿಕ್ ಮಸಾಲೆಗಳು ಸಹ ನೊಣಗಳನ್ನು ಆಕರ್ಷಿಸುತ್ತವೆ. ಜೊತೆಗೆ ಸಿಹಿತಿಂಡಿಗಳು ಮತ್ತು ಯಾವುದೇ ನೀರಿನ ಅಂಶಗಳು ಸಹ ಕೆಳಗೆ ಬಿದ್ದರೆ, ತಕ್ಷಣವೇ ನೊಣಗಳು ಬರುತ್ತವೆ.

ಇದನ್ನೂ ಓದಿ : 2008 ರಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಹಿಳೆಯ ಕೊಲೆ ಪ್ರಕರಣ

Leave A Reply

Your email address will not be published.